Sale!

ಪುನಶ್ಚೇತನ ಯೋಗದ ಹಾದಿ ( Ebook )

Omkar S N
$0.62

ಡಾ||ಓಂಕಾರ್ ಅವರು ಸೂಚಿಸಿರುವ ವಿಧಾನಗಳು ಸರಳ ಹಾಗೂ ಸ್ಪಷ್ಟತೆಯಿಂದ ಕೂಡಿದ್ದು ಅನುಕರಣಯೋಗ್ಯವಾಗಿವೆ. ಈ ಪುಸ್ತಕದ ಮತ್ತೊಂದು ವಿಶೇಷವೆಂದರೆ, ಹೆಚ್ಚಿನ ದೈಹಿಕ ಶ್ರಮವನ್ನು ಸಹಿಸಲಾಗದ ಅಶಕ್ತರೂ ಹಾಗೂ ವಯಸ್ಸಾದವರೂ ಕೂಡ ಈ ವಿಧಾನಗಳಿಂದ ತಮ್ಮ ಸ್ವಾಸ್ಥ್ಯವನ್ನು ಸುರಕ್ಷಿತವಾದ ರೀತಿಯಲ್ಲಿ ಉತ್ತಮಪಡಿಸಿಕೊಳ್ಳಬಹುದು. ಆರೋಗ್ಯವಂತರೂ ಸಹ ಸ್ವಾಸ್ಥ್ಯ ರಕ್ಷಣೆಯನ್ನಷ್ಟೇ ಅಲ್ಲದೆ ತಮ್ಮ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಉನ್ನತಿಗೆ ಈ ಪುಸ್ತಕವನ್ನು ಅವಲಂಬಿಸಬಹುದು.
-ಡಾ||ಬಿ.ಎಸ್.ಶ್ರೀನಾಥ್

  • Author: Omkar S N
  • Book Format: Ebook
  • Language: Kannada
  • Pages: 56
  • Year Published: 2021
  • Category: Science

ಯೋಗ, ಧ್ಯಾನ, ಪ್ರಾಣಾಯಾಮಗಳು ದಣಿದು ಹೈರಾಣಾದ ದೇಹ ಮತ್ತು ಮನಸ್ಸಿಗೆ ಚೈತನ್ಯವನ್ನೀಯುತ್ತವೆ. ಯೋಗದ ಬೆಳಕು ಈಗ ಇಡೀ ಜಗತ್ತಿನಲ್ಲಿ ಹರಡಿದೆ. ಯೋಗಜಗತ್ತಿನ ಗುರುವರ್ಯ ಡಾ||ಬಿ.ಕೆ.ಎಸ್. ಅಯ್ಯಂಗಾರ್ ಅವರ ಶಿಷ್ಯರಾದ ಡಾ||ಎಸ್.ಎನ್.ಓಂಕಾರ್ ಅವರು ತಮ್ಮ ಅಪಾರ ಜ್ಞಾನ-ಕೌಶಲದ ಆಧಾರದ ಮೇಲೆ ‘ಪುನಶ್ಚೇತನ’ ಪುಸ್ತಕವನ್ನು ರಚಿಸಿದ್ದಾರೆ. ಚೇತನ ಕುಗ್ಗಿದ ದೇಹ ಮತ್ತು ಮನಸ್ಸುಗಳಿಗೆ ಈ ಪುಸ್ತಕ ಪುನಶ್ಚೇತನ ಮಾಡಿ, ನವ ಚೈತನ್ಯ ಹಾಗೂ ಆರೋಗ್ಯವನ್ನು ಮರಳಿ ಸ್ಥಾಪಿಸಬಲ್ಲದು.
-ಡಾ|| ಸಿ.ಆರ್.ಚಂದ್ರಶೇಖರ್

Reviews

There are no reviews yet.

Only logged in customers who have purchased this product may leave a review.