ಸ್ಪರ್ಧೆ ಹೆಜ್ಜೆ ಹೆಜ್ಜೆಗಿದೆ. ಶಾಲೆಯಲ್ಲಿ ನಡೆಯುವ ಕಿರುಪರೀಕ್ಷೆಯಿಂದ ಹಿಡಿದು, ಕೆಲಸ ಗಿಟ್ಟಿಸಿಕೊಳ್ಳುವ ಪರೀಕ್ಷೆಗಳವರೆಗೂ ಸ್ಪರ್ಧೆ ಬೆನ್ನು ಹತ್ತುತ್ತಲೇ ಇರುತ್ತದೆ. ಪರೀಕ್ಷೆ ಎದುರಿಸುವ ತಾಕತ್ತು ಬರುವುದು ಶಿಸ್ತಿನ ಅಧ್ಯಯನದಿಂದ. ಪರಿಶ್ರಮ ಯಶಸ್ಸಿನ ಶಿಖರಕ್ಕೇರಿಸುತ್ತದೆ. ಶಾಲಾ ಹಂತದಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸನ್ನದ್ಧಗೊಳಿಸಬೇಕೆಂಬ ಹಂಬಲ ಇತ್ತೀಚೆಗೆ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸನ್ನದ್ಧರಾಗುತ್ತಿರುವವರಿಗೆ ಅಗತ್ಯವಿರುವ ಅಧ್ಯಯನ ಸಾಮಗ್ರಿಯಾಗಿ ಈ  ಪುಸ್ತಕ ರೂಪಗೊಂಡಿದೆ.
ವಿಜ್ಞಾನ ವಿಷಯವೆಂದರೆ ಕೆಲವರಿಗೆ ಆತಂಕ. ಇನ್ನೊಂದೆಡೆ ಕನ್ನಡ ಭಾಷೆಯಲ್ಲಿ ಅಧ್ಯಯನ ಸಾಮಗ್ರಿಗಳ ಕೊರತೆ ಅಧೀರರನ್ನಾಗಿಸುತ್ತಿದೆ. ಇವೆರಡನ್ನೂ ಒಂದಿಷ್ಟಾದರೂ ದೂರ ಮಾಡಬೇಕೆನ್ನುವ ಉದ್ದೇಶವಿಟ್ಟುಕೊಂಡು ಈ ಪುಸ್ತಕವನ್ನು ನಿಮ್ಮ ಕೈಗಿಡುತ್ತಿದ್ದಾರೆ.
ಈ ಪುಸ್ತಕದಲ್ಲಿರುವ ಪ್ರಶ್ನೆ ಮತ್ತು ಉತ್ತರಗಳು `ವಿಜಯವಾಣಿ’ ದಿನಪತ್ರಿಕೆಯ ವಿದ್ಯಾರ್ಥಿಮಿತ್ರ ಪುರವಣಿಯಲ್ಲಿ ಸುಮಾರು ಎರಡು ವರ್ಷಗಳವರೆಗೆ `ಸೈನ್ಸ್ ಕ್ವಿಜ್’ ಹೆಸರಿನಲ್ಲಿ ಪ್ರಕಟವಾಗಿ ವಿದ್ಯಾರ್ಥಿಗಳೂ ಸೇರಿದಂತೆ ವಿಜ್ಞಾನದ ಬಗ್ಗೆ ಆಸಕ್ತಿ ಇರುವ ಓದುಗರೆಲ್ಲರ ಮೆಚ್ಚುಗೆಯನ್ನು ಗಳಿಸಿತ್ತು. ಅದರಲ್ಲಿ ಆಯ್ದ ಪ್ರಶ್ನೆಗಳನ್ನು ಒಟ್ಟುಗೂಡಿಸಿ ಇಲ್ಲಿ ನೀಡಲಾಗಿದೆ. ಇದಕ್ಕೆ ರೂಪಿಸಿದ ಸಾವಿರಾರು ಪ್ರಶ್ನೆ ಮತ್ತು ಉತ್ತರಗಳಲ್ಲಿ ಆಯ್ದ ಕೆಲವಷ್ಟೇ ಈ ಪುಸ್ತಕದಲ್ಲಿದ್ದು, ಮುಂಬರುವ ದಿನಗಳಲ್ಲಿ ಇದರ ಮುಂದುವರಿಕೆ ಭಾಗ ಮಾಡಿ ಹೊರತರುವ ಯೋಚನೆಯೂ ಇದೆ.
ಶಾಲೆಗಳಲ್ಲಿನ ಕ್ವಿಜ್ ಸ್ಪರ್ಧೆಗೆ ತಯಾರಿ ನಡೆಸಲು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಶಾಲೆಯಿಂದಲೇ ಸಿದ್ಧವಾಗಲು, ಯಾವುದೇ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆಯಲ್ಲಿ ತೊಡಗಿಕೊಂಡವರಿಗೆ ಈ ಪುಸ್ತಕ ಉಪಯುಕ್ತವಾಗಬಲ್ಲದು. ಮತ್ತು ವಿಜ್ಞಾನಕ್ಕೆ ಸಂಬಂಧಿಸಿದಂತೆ ನಿಮ್ಮೊಳಗಿರುವ ಹಲವು ಪ್ರಶ್ನೆಗಳಿಗೆ ಉತ್ತರ ನೀಡಬಲ್ಲದು.

Additional information

Category

Author

Publisher

Book Format

Ebook

Pages

136

ISBN

978-81-930675-3-6

Language

Kannada

Year Published

2019

Reviews

There are no reviews yet.

Only logged in customers who have purchased this product may leave a review.