Your Cart

Need help? Call +91 9535015489

📖 Print books shipping available only in India. ✈ Flat rate shipping

ಕನ್ ಫ್ಯೂಷಿಯಸ್ ಸೂಕ್ತಿ-ಸಂಗ್ರಹ

$1.16

Product details

Translator

ಡಿ.ಎನ್.ಶ್ರೀನಾಥ್

Publisher

Vamshi Publications

Book Format

Ebook

Language

Kannada

Year Published

2018

Pages

142

Category

spiritual

551 ಕ್ರಿ.ಪೂ.ದಲ್ಲಿ ಜನಿಸಿದ ಕನ್ಫ್ಯೂಷಿಯಸ್ ಚೀನಾದ ಮಹಾನ್ ದಾರ್ಶನಿಕ ರಾಗಿದ್ದರು. ಅಭಿಜಾತ ವರ್ಗದಲ್ಲಿ ಜನಿಸಿದ್ದ ಇವರ ಕಾಲದಲ್ಲಿ ಗುಲಾಮಗಿರಿಯ ಸಮಾಜ ಪತನಗೊಳ್ಳುತ್ತಿದ್ದರೆ, ಊಳಿಗಮಾನ್ಯ ವ್ಯವಸ್ಥೆಯೂ ಉದಯವಾಗುತ್ತಿತ್ತು. ಕನ್ಫ್ಯೂಷಿಯಸ್ ರಾಜ್ಯ-ರಾಜ್ಯಗಳಲ್ಲಿ ಶಾಂತಿಯ ವಾತಾವರಣವನ್ನು ನೋಡಲು ಬಯಸುತ್ತಿದ್ದರು. ಆದರೆ ಇವರ ವಿಚಾರಗಳು ‘ಲೂ’ ರಾಜ್ಯಕ್ಕೆ ಒಪ್ಪಿಗೆಯಾಗಿರಲಿಲ್ಲ; ಇವರು ಮಾತ್ರ ಪೂರ್ವಿಕರ ಆಚರಣೆ-ಪದ್ಧತಿಗಳು, ಅನುಷ್ಠಾನಗಳು ಮತ್ತು ಪರಂಪರೆಗಳ ಪುನರುದ್ಧಾರಕ್ಕೆ ಶಕ್ತಿಮೀರಿ ವಕಾಲತ್ತು ವಹಿಸಿದರು. ಇವೆಲ್ಲವನ್ನೂ ಸಾಮಾನ್ಯ ಜೀವನದ ಪ್ರತಿಯೊಂದು ಭಾಗವನ್ನಾಗಿ ಮಾಡುವ ಪ್ರಯತ್ನವನ್ನು ಮಾಡಿ, ಇವುಗಳ ಪ್ರಸಾರದಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡರು. ಇವರ ವಿಚಾರಧಾರೆಯ ಮೌಲಿಕ ಸಿದ್ಧಾಂತ ‘ಸದಾಚಾರ’ವಾಗಿದ್ದು, ಇದು ಜೀವನದ ಮೌಲಿಕ ಸತ್ಯವೂ ಆಗಿದೆ.ಎರಡು ಸಾವಿರ ವರ್ಷಕ್ಕಿಂತಲೂ ಹೆಚ್ಚು ಸಮಯ ಕಳೆದಿದ್ದಾಗ್ಯೂ ಸಹ ಇಂದಿಗೂ ಕನ್ಫ್ಯೂಷಿಯಸ್ ಅವರ ವಿಚಾರಗಳು ಆಳವಾಗಿ ಮತ್ತು ವ್ಯಾಪಕವಾಗಿ ಚೀನಾ ದೇಶ ಮತ್ತು ಸಮಾಜದಲ್ಲಿ ಮನೆಮಾಡಿವೆ. ಚೀನಾ ದೇಶದ ಮಾನಸಿಕತೆಯನ್ನು ಅರಿಯಲು ಕನ್ಫ್ಯೂಷಿಯಸ್ ಅವರ ಗ್ರಂಥಗಳನ್ನು ಅಧ್ಯಯನ ಮಾಡುವುದು ಅತಿ ಆವಶ್ಯಕವಾಗಿದೆ. ಮಹಾನ್ ದಾರ್ಶನಿಕ ಕನ್ಫ್ಯೂಷಿಯಸ್ನ ಈ ಸೂಕ್ತಿಗಳು, ಚೀನಾಕ್ಕೆ ಮಾತ್ರವಲ್ಲ, ಇಡೀ ಜಗತ್ತಿನ ಜನರಿಗೆ ಮಾರ್ಗದರ್ಶನವಾಗಿದೆ. ಇಂದಿನ ಈ ಭರಾಟೆಯ ಜಗತ್ತಿನಲ್ಲಿ ಈ ಸೂಕ್ತಿಗಳು ಮನುಷ್ಯನ ಒಳಿತಿಗೆ, ಆ ಮೂಲಕ ಇಡೀ ಜಗತ್ತಿನ ಶಾಂತಿಗೆ ಮಹತ್ವದ ಕೊಡುಗೆಯಾಗಿವೆ.
ಹಿಂದಿಯಲ್ಲಿ ಈ ಸೂಕ್ತಿಗಳನ್ನು ಓದಿದ ನನಗೆ ಇದನ್ನು ಕನ್ನಡಕ್ಕೆ ತರಬೇಕೆಂಬ ತೀವ್ರ ಒತ್ತಡ ಮನದೊಳಗಾಯಿತು. ಈ ಕೃತಿಯನ್ನು ಮೂಲ ಚೀನಿಯಿಂದ ಅನುವಾದಿಸಿದ, ಅನುವಾದಕರಾದ ಶ್ರೀ ಬಿ.ಆರ್.ದೀಪಕ್ ಅವರನ್ನು ಸಂಪರ್ಕಿಸಿದಾಗ ಅವರು ತುಂಬಾ ಸಂತಸದಿಂದ ಕನ್ನಡದ ಅನುವಾದಕ್ಕೆ ಅನುಮತಿಯಿತ್ತರು.
-ಡಿ.ಎನ್.ಶ್ರೀನಾಥ್