ದಾವ್ ದ ಜಿಂಗ್ ( Ebook )

$5.00

  • Category: spiritual
  • Translator: U.R. Anantamurthy
  • Publisher: Akshara Prakashana
  • Language: Kannada
  • Book Format: Ebook

ಚೀನಾದ ಪ್ರಾಚೀನ ದರ್ಶನಗಳಲ್ಲಿ ಮುಖ್ಯವಾದ ಎರಡು – ಕನ್‌ಫ್ಯೂಷಿಯಸ್ ಚಿಂತನೆ ಮತ್ತು ದಾವ್. ಕನ್‌ಫ್ಯೂಷಿಯಸ್‌ನ ಚಿಂತನೆಯು ವ್ಯವಸ್ಥೆಯನ್ನು ಮುಖ್ಯವೆಂದು ಭಾವಿಸುವಂಥದಾದರೆ, ದಾವ್ ಮೇಲ್ನೋಟಕ್ಕೆ ಅದಕ್ಕೆ ವಿರುದ್ಧಮುಖಿ. ಆದರೆ ದಾವ್ ಲೌಕಿಕಕ್ಕೆ ಕಣ್ಣುಮುಚ್ಚಿದ ದರ್ಶನವೂ ಅಲ್ಲ; ಅದು ಲೌಕಿಕ-ಅಲೌಕಿಕಗಳೆರಡನ್ನೂ ಒಟ್ಟಾಗಿ ಗ್ರಹಿಸುವ ಭಿನ್ನವಾದೊಂದು ಕ್ರಮ. ಅಂಥ ಕ್ರಮದ ಹೊಳಹನ್ನು ಕೊಡುವ ಪ್ರಮುಖ ಕೃತಿ – ‘ದಾವ್ ದ ಜಿಂಗ್’.

ಲೌಕಿಕವನ್ನು ಏಕಮುಖಿಯಾಗಿ ಮಾತ್ರ ಗ್ರಹಿಸುವ ರೂಢಿಯನ್ನು ಪೋಷಿಸಿ ಬೆಳೆಸಿಕೊಂಡಿರುವ ಇವತ್ತಿನ ಕಾಲಕ್ಕೆ ದಾವ್ ಅಭ್ಯಾಸವು ಚಿಕಿತ್ಸಕವಾಗಬಲ್ಲುದು – ಎಂಬ ನಂಬಿಕೆಯಿಂದ ಕನ್ನಡದ ಮಖ್ಯ ಚಿಂತಕ-ಲೇಖಕ ಯು.ಆರ್. ಅನಂತಮೂರ್ತಿ ‘ದಾವ್ ದ ಜಿಂಗ್’ನ ಪ್ರಸ್ತುತ ಕನ್ನಡಾನುವಾದವನ್ನು ನಮ್ಮ ಮುಂದಿರಿಸಿದ್ದಾರೆ.

Reviews

There are no reviews yet.

Only logged in customers who have purchased this product may leave a review.