Your Cart

Need help? Call +91 9535015489

📖 Print books shipping available only in India. ✈ Flat rate shipping

ಜೀವನಧರ್ಮ ಯೋಗ

DVG
$8.71

Product details

Book Format

Printbook

Author

DVG

Category

spiritual

Language

Kannada

Publisher

Sahitya Prakashana

ಸತ್ಯ ಒಂದು, ಸತ್ಯದರ್ಶನಗಳು ಸಾವಿರ. ದ್ವೈತಾದ್ವೈತಾದಿ ನಾನಾಮತಗಳ ನಡುವೆ ಸಾಮರಸ್ಯವು ಸಾಧ್ಯವೆಂಬುದು ಇಲ್ಲಿ ಇರಿಸಿಕೊಂಡಿರುವ ನಂಬಿಕೆ. ವಿವಾದಾಸ್ಪದಗಳಾದ ಅಂಶಗಳನ್ನು ಪಕ್ಕಕ್ಕಿರಿಸಿ, ನಮ್ಮ ಮಾತಾಚಾರ್ಯರುಗಳ ಉಪದೇಶಗಳಲ್ಲಿ ಯಾವುದೂ ಯಾರಿಗೂ ವಿರೋಧವಾಗದಂತೆಯೂ ಸರ್ವಸಮ್ಮತವಾದ ಉಪದೇಶಾಂಶಗಳಿಗೆ ಹೆಚ್ಚು ಗಮನ ಸೆಳೆಯುವಂತೆಯೂ ಅರ್ಥಾವಲೋಕನ ಮಾಡುವುದು ಇಲ್ಲಿಯ ಪ್ರಯತ್ನ.

ಧರ್ಮಾಭ್ಯಾಸಕ್ಕೆ ಮನುಷ್ಯಜೀವನದಲ್ಲಿ ಸ್ಥಾನವಿರುವಂತೆಯೇ ಭೋಗ ಭಾಗ್ಯಗಳಿಗೂ ಅವವುಗಳಿಗೆ ತಕ್ಕ ಸ್ಥಾನಗಳುಂಟು. ಈ ಸ್ಥಾನನಿಷ್ಕರ್ಷೆಗೆ ಬೇಕಾದ ವಿವೇಕವನ್ನು ಜಗಜ್ಜೀವನದ ಆಧಾರತತ್ತ್ವಗಳ ನಿರೂಪಣೆಯ ಮೂಲಕ ಭಗವದ್ಗೀತೆ ನಮಗೊದಗಿಸಿದೆ. ಭಗವತ್ ಸ್ಮರಣೆಯೊಡಗೂಡಿ ನಡೆದ ಜಗದ್ವ್ಯಾವಹಾರಗಳು ಜೀವಬಾಧಕಗಳಾಗದೆ ಜೀವತಾರಕಗಳೂ ಜಗತ್ಕಲ್ಯಾಣಗಳೂ ಆಗುತ್ತವೆ.

ಸಮ್ಯಗ್ಜೀವನವೇ ಭಾಗವದಾರಾಧನೆಯೆಂಬುದು ಇಲ್ಲಿಯ ತತ್ತ್ವ, ಲೋಕಜೀವನದ ಸಮ್ಯಗ್ಜಿಧಾನವೇ ಧರ್ಮ; ಧರ್ಮದ ಪರಿಪೂರ್ಣಫಲವೇ ಮೋಕ್ಷ. ಹೀಗೆ ಯಾವುದು ಪೂರ್ವಿಕರಿಗೆ ಮೋಕ್ಷಶಾಸ್ತ್ರವಾಯಿತೋ ಅದು ಇಂದಿನವರಿಗೆ ಜೀವನ ಧರ್ಮಶಾಸ್ತ್ರವೂ ಆಗಿದೆ.