Sale!

ಮರುಳ ಮುನಿಯನ ಕಗ್ಗ ( Printbook )

DVG
$3.95

ಮರುಳ ಮುನಿಯನ ಕಗ್ಗ:

ಮರುಳ ಮುನಿಯನ ಮಾತು-
ಶ್ರೀಮಜ್ಜಗನ್ಮುಕುರ ವಿಸ್ತಾರದೊಳಾರ್ ತನ್ನ|
ಮೈಮೆಯ ಪ್ರತಿಬಿಂಬ ಚಿತ್ರಗಳ ನೋಡು ।।
ತ್ತಾಮೋದಬಡುತಿಹನೊ ಬಾರೊ ಮರುಳ ಮುನಿಯ ।।

ಅವ್ಯಕ್ತ ಸತ್ತು ತಾಂ ವ್ಯಕ್ತವಹೆನೆನೆ ಚಿತ್ತು ।
ಅವ್ಯಾಜದಿಂ ಚಿತ್ತು ಲಿಲಿಸೆ ಜಗತ್ತು ।।
ಸುವ್ಯಕ್ತ ಸಚ್ಚಿದಾನಂದಮೆ ಸಕಲ ಜಗತ್ತು ।
ಸೇವ್ಯವದು ಸರ್ವರ್ಗೆ ಮರುಳ ಮುನಿಯ ।।

ಸೋಹಮನುಭವಿಯಾಗು ದುರ್ಲಾಭವದೆನ್ನೆ ದಾ ।
ಸೋಹಮನುಭವಿಯಾಗು ವಿಭು ವಿಶ್ವಗಳೊಳು ।।
ಮೋಹ ಪರಿಯುವುದಂತೋ ಇಂತೊ ಎಂತಾದೊಡೇಂ ।
ರಾಹು ಬಿಡೆ ರವಿ ಪೂರ್ಣ ಮರುಳ ಮುನಿಯ ।।

ಮರಗಟ್ಟಿ ಕಾಂಡ ಬುಡದಲಿ ಮೇಲೆ ಕೊಂಬೆಯಲಿ।
ಮರಲ ತಾಳೆವುದು ಚಿಗುರಿ ಕಾಷ್ಠತೆಯ ದಾಟಿ ।।
ನರನಂತು ದೇಹಿತೆಯ ಮೃಚ್ಚಿಲಾಂಶದ ಮೀರೆ|
ಪರಮಾರ್ಥಸುಮದೆ ಕೃತಿ-ಮರುಳ ಮುನಿಯ ।।

ಮೃತ್ಯುಂಜಯನುಮುಮೆಯುಮೀ ವಿಶ್ವರಂಗದಲಿ ।
ಸತ್ಯಸೌಂದರ್ಯಗಳಾಗಿ ರಾಜಿಸುತೆ ।।
ನೃತ್ಯವಾಡುವರು ಜಿವಾತ್ಯ ಮಾಯೆಗಳಾಗಿ ।
ನಿತ್ಯದ ವಿಲಾಸವದು ಮರುಳು ಮುನಿಯ ।।

ಜಯವೆನ್ನು ಜೀವಕ್ಕೆ ಜಯ ಜಿವಲೋಕಕ್ಕೆ ।
ಜಯ ಜೀವ ಮೂಲಕ್ಕೆ ಜಯ ಜೀವಿತಕ್ಕೆ ।।
ಜಯ ನಿರಂತರ ಜೀವ ನಾಟಕ ವಿಧಾತಂಗೆ ।
ಜಯ ನಿರ್ಮಿಲಾತ್ಮನಿಗೆ ಮರುಳ ಮುನಿಯ ।।

  • Book Format: Printbook
  • Author: DVG
  • Category: spiritual
  • Language: Kannada
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.