Sale!

ಮೂಲ ಸಂಕ್ಷೇಪ ರಾಮಾಯಣಂ ( Printbook )

K.S. Narayanacharya
$1.98

ಮಹರ್ಷಿ ವಾಲ್ಮೀಕಿಗಳಿಂದ ರಚಿತವಾದ ಶ್ರೀಮದ್ರಾಮಾಯಣವು ಅದಿಕಾವ್ಯವೆನಿಸಿ, ಜಗತ್ತಿನಲ್ಲಿ ಪ್ರಚಲಿತವಿರುವ ಎಲ್ಲ ಇತರ ರಾಮಾಯಣಗಳಿಗಿಂತ ಪ್ರಾಚೀನವೂ, ಅವಕ್ಕೆಲ್ಲ, ಒಂದಿಲ್ಲೊಂದು ಬಗೆಯಲ್ಲಿ ಮೂಲವೂ ಆಗಿದೆ. “ಪರಂ ಕವೀನಾಂ ಆಧಾರಂ” ಎಂಬ ಬ್ರಹ್ಮದೇವರ ಆಶೀರ್ವಾದವು ಸಾರ್ಥಕವಾಗಿರುವುದು ಇಂದಿಗೂ ಎಲ್ಲರಿಗೂ ತಿಳಿದಿದೆ.

  • Book Format: Printbook
  • Author: K.S. Narayanacharya
  • Category: spiritual
  • Language: Kannada
  • Publisher: Sahitya Prakashana

ಈ ವಾಲ್ಮೀಕಿರಾಮಾಯಣಕ್ಕೂ ಮೂಲವಾದುದೆಂದರೆ, ನಾರದ ಮಹರ್ಷಿಗಳು ತಾವಾಗಿಯೇ ಅವರಾಶ್ರಮಕ್ಕೆ ಬಂದು ಉಪದೇಶಿಸಿದ ಸಂಕ್ಷೇಪ ರಾಮಾಯಣ. ಇದಕ್ಕಿಂತ ಹಳೆಯ ಮೂಲವಿರುವುದು, ಶತಕೋತಿಗ್ರಂಥ ವಿಸ್ತಾರವೆನಿಸಿದ, ದೇವಲೋಕದಲ್ಲಿ ಪ್ರಚುಟವಿದೆಯೆಂದು ನಂಬಲಾದ ಶ್ರೀರಾಮಾಯಣ.

ಅದು ನಮಗೆ ಹಾಗೇ ಲಭ್ಯವಿಲ್ಲ. ಈ ಕೊರತೆಯನ್ನು ತೀರಿಸಿ ಭೂಲೋಕಕ್ಕೆ ಅದನ್ನಿಳಿಸಿದವರು ನಾರದರು. ಅದನ್ನುಳಿಸಿಕೊಟ್ಟವರು ವಾಲ್ಮೀಕಿಗಳು. ವಾಲ್ಮೀಕಿ ರಾಮಾಯಣದ ಆದಿಸರ್ಗವೇ ಈ ಸಂಕ್ಷೇಪರಾಮಾಯಣ. ಇದಕ್ಕೆ ಗೋವಿಂದರಾಜಿಯ, ಮಹೇಶ್ವರತೀರ್ಥಿಯ, ತನಿಶ್ಲೋಕೀ ಮುಂತಾದ ಅನೇಕ ಪ್ರಾಚೀನ ವ್ಯಾಖ್ಯಾನಗಳ ಸಂಗ್ರಹ ಮತ್ತು ರಶಾಂಶಗಳಿಂದ ಪುಷ್ಟವಾದ “ಶ್ರೀ ರಾಮಪಾದಪ್ರಣಯಿನೀ” ಎಂಬ ಈ ವ್ಯಾಖ್ಯಾನ ಹೀಗೆ ಹೋರಬರುತ್ತಿರುವುದು ಇದೇ ಮೊದಲಿಗೆ. ರಸಪುಷ್ಟವಾದ ಮೂಲದ ಸೊಬಗನ್ನೂ, ಮರ್ಮಗಳನ್ನೂ ಹೊರತಂದಿರುವ ಈ ಕೃತಿ ಕನ್ನಡಿಗರಿಗೆ ಭೋಗ್ಯವಾಗಲಿ.

Reviews

There are no reviews yet.

Only logged in customers who have purchased this product may leave a review.