Ebook

ನಮ್ಮ ನಿತ್ಯ ಜೀವನದಲ್ಲಿ ಭಗವದ್ಗೀತೆಯ ಪಾತ್ರ

Author: Malati Mudakavi

Original price was: $2.52.Current price is: $1.51.

ಜಗತ್ತು ಯಾವಾಗಲೂ ಬದಲಾವಣೆ ಹೊಂದುತ್ತಲಿರುತ್ತದೆ. ಅದರಂತೆಯೇ ನಮ್ಮ ಜೀವನದ ರೀತಿ ನೀತಿಗಳೂ ಕೂಡ. ಅಂಥ ಸಮಯದಲ್ಲಿ, ನಮ್ಮ ಧರ್ಮಗ್ರಂಥಗಳು ಹೇಳುವುದನ್ನು ನಮ್ಮ ಇಂದಿನ ನಿತ್ಯ ಜೀವನ ಮಾರ್ಗಕ್ಕೆ ಹೇಗೆ ಅಳವಡಿಸಿಕೊಳ್ಳಬಹುದು ಎಂಬ ಚಿಂತೆಯಲ್ಲಿ ನಾವಿರುವಾಗ ನಮ್ಮ ಇಂದಿನ ಆಧುನಿಕ ಜೀವನ ಪದ್ಧತಿಯನ್ನು ನಮ್ಮ ಅಂದಿನ ಜೀವನಮಾರ್ಗಕ್ಕೆ ಸಮೀಕರಿಸಿ ಹೇಳುವ ತಂತ್ರವನ್ನು ಈ ನಮ್ಮ ಧರ್ಮಗ್ರಂಥಗಳ ಬೋಧನೆಯನ್ನು ಸರಳೀಕರಿಸಿ ಹೇಳುವಂಥ ಪ್ರಯತ್ನವನ್ನು ನಮ್ಮ ಅನೇಕ ವಿದ್ವಾಂಸರು ಮಾಡಿದ್ದಾರೆ. ನಾನೂ ಕೂಡ ಇದೇ ಮಾರ್ಗದಲ್ಲಿ ಅವರನ್ನು ಅನುಸರಿಸಿ ನನ್ನ ವಿಚಾರಗಳನ್ನೂ ಅದರೊಂದಿಗೆ ಸೇರಿಸಿ ಇನ್ನಷ್ಟು ಸರಳೀಕರಿಸಿ ಹೇಳುವ ಒಂದು ಸಣ್ಣ ಪ್ರಯತ್ನವನ್ನು ಇಲ್ಲಿ ಮಾಡಿದ್ದೇನೆ. ಮಾನವೇತರ ಜೀವಿಗಳಿಗೆ ಕಲಿಕೆಯ ಆವಶ್ಯಕತೆ ಮಾನವನಿಗಿಂತ ಕಡಿಮೆ. ಅವು ಹುಟ್ಟುವಾಗಲೇ ತಮ್ಮ ಜೀವನಕ್ಕೆ ಆವಶ್ಯಕವಾದ ವರ್ತನವಿಧಾನಗಳನ್ನು ಪಡೆದುಕೊಂಡು ಬಂದಿರುತ್ತವೆ. ಕಲಿಯುವ ಆವಶ್ಯಕತೆ ಇಲ್ಲದೆಯೇ ಅನೇಕ ಜೀವಿಗಳಿಗೆ ಅವುಗಳ ಆಹಾರ, ಅದನ್ನು ತಿನ್ನುವ ವಿಧಾನ, ಅದು ಸಿಗುವ ಜಾಗ ಎಲ್ಲವೂ ತಿಳಿದಿರುತ್ತದೆ. ನೀರಿನಲ್ಲಿ ವಾಸಿಸುವ ಮೀನು, ಆಮೆ ಮೊದಲಾದ ಜೀವಿಗಳಿಗೆ ಈಜನ್ನು ಯಾರೂ ಕಲಿಸಬೇಕಾಗಿಲ್ಲ. ಕೆಲವು ಕೀಟಗಳು ಮತ್ತು ಪಕ್ಷಿಗಳು ತಮ್ಮ ಜಾತಿಗನುಗುಣವಾದ ಗೂಡುಗಳನ್ನು ಇತರರ ಸಹಾಯವಿಲ್ಲದೆಯೇ, ಇತರರು ಕಟ್ಟುವುದನ್ನು ನೋಡದೆಯೇ ಕಟ್ಟಬಲ್ಲವು. ಇಂಥ ಪ್ರಕೃತಿಸಿದ್ಧವಾದ ವರ್ತನಾವಿಶೇಷಗಳು, ಸಿದ್ಧವರ್ತನೆಗಳು, ಸ್ವಾಭಾವಿಕ ವೃತ್ತಿಗಳು ಅಥವಾ ಮೂಲಪ್ರವೃತ್ತಿಗಳು ಎನಿಸಿಕೊಳ್ಳುತ್ತವೆ. ಇವುಗಳಲ್ಲಿ ಕೆಲವು ವರ್ತನೆಗಳು ಮನುಷ್ಯರಲ್ಲೂ ಕಂಡುಬಂದರೂ ಕೂಡ ಮಾನವ ಜೀವಿಗಳ ವರ್ತನೆಯಲ್ಲಿ ಕಲಿಕೆಯ ಅಂಶವೇ ಬಹಳ ಹೆಚ್ಚು. ಜೀವವಿಕಾಸ ವೃಕ್ಷದಲ್ಲಿ ಉನ್ನತ ಮಟ್ಟವನ್ನು ಏರಿದಂತೆಲ್ಲಾ ಜೀವಿಗಳು ಕಲಿಯಬೇಕಾದ ಅಂಶ ಹೆಚ್ಚಾಗುತ್ತ ಹೋಗುತ್ತದೆ; ನೈಜವಾದ ಅಂಶಗಳು ಕಡಿಮೆಯಾಗುತ್ತವೆ. ಹಾಗೆಂದು ಹುಟ್ಟಿದ ಒಡನೆಯೇ ಮಗುವಿನಲ್ಲಿ ಕಂಡುಬರುವ ಗುಣಗಳು ಮಾತ್ರವೇ ನೈಜವಾದವೆಂದೂ ಮಿಕ್ಕವೆಲ್ಲಾ ಕಲಿತುಕೊಂಡವೆಂದೂ ತಿಳಿಯಬಾರದು. ಅನೇಕ ಗುಣಗಳು ಕಲಿಯುವ ಆವಶ್ಯಕತೆ ಇಲ್ಲದೆಯೇ ತಾವಾಗಿಯೇ ಸಕಾಲದಲ್ಲಿ ಕಾಣಿಸಿಕೊಳ್ಳುತ್ತವೆ. ಹೀಗೆ ಬೆಳವಣಿಗೆಯಿಂದ ದೈಹಿಕ ಶಕ್ತಿಗಳಂತೆ ಮಾನಸಿಕ ಶಕ್ತಿಗಳೂ ಪಕ್ವತೆ ಪಡೆಯುತ್ತವೆ. ಕೆಲವು ಶಕ್ತಿಗಳು ಪಕ್ವವಾಗಲು ಬೆಳವಣಿಗೆ ಮಾತ್ರವೇ ಸಾಕು. ಇನ್ನು ಕೆಲವಕ್ಕೆ ಕಲಿಕೆಯು ಸಹಾಯ ಮಾಡುತ್ತದೆ.

Additional information

Author

Publisher

Book Format

Ebook

Language

Kannada

Pages

208

Year Published

2022

Category

Reviews

There are no reviews yet.

Only logged in customers who have purchased this product may leave a review.