Ebook

ಪುರಾಣ ಪುಟಗಳಿಂದ

Author: T.M. Jagadeesh

$0.97

ನಮ್ಮ ಸಂಸ್ಕೃತಿಯ ಒಂದೊಂದು ತಾತ್ವಿಕ ಆಯಾಮವನ್ನು ಕೇಂದ್ರೀಕರಿಸಿಕೊಂಡು ಅಧ್ಯಾಯಗಳನ್ನು ಬರೆಯಲಾಗಿದೆ.

ಪ್ರಸ್ತುತ ಪುಸ್ತಕ ‘ಪುರಾಣ ಪುಟಗಳಿಂದ’ ಒಂದು ವಿಶಿಷ್ಟ ಗ್ರಂಥ. ಇದನ್ನು ಇಂಥದೇ ವರ್ಗಕ್ಕೆ ಸೇರಿಸಬೇಕು ಎನ್ನುವುದು ಸ್ವಲ್ಪ ಕಠಿಣವೇ. ಈ ಪುಸ್ತಕದ ವಿಷಯವಸ್ತು ಮತ್ತು ಅದನ್ನು ಪ್ರಸ್ತುತಪಡಿಸಿದ ರೀತಿ ಸ್ವಲ್ಪ ಸಂಕೀರ್ಣವಾದುದು. ಆಧುನಿಕ ದೃಷ್ಟಿಕೋನವು ಪುರಾಣಗಳ ಐತಿಹಾಸಿಕ ಮೌಲ್ಯವನ್ನು ಒಪ್ಪುವುದಿಲ್ಲ. ಇತಿಹಾಸಕ್ಕೂ, ಪುರಾಣಗಳಿಗೂ ಸಂಬಂಧವಿಲ್ಲ; ಹೆಚ್ಚೆಂದರೆ ಪುರಾಣಗಳಿಗಿರುವುದು ಆಧ್ಯಾತ್ಮಕ ಮೌಲ್ಯಗಳಷ್ಟೆ; ಅದು ದೇವರ ಮತ್ತು ದೇವರ ಪವಾಡಗಳ ಮಹತ್ವವನ್ನು ಬಣ್ಣಿಸುವ ಸಾಹಿತ್ಯ ಎಂಬುದು ಆಧುನಿಕ ವೈಚಾರಿಕತೆಯ ನಿಲುವು. ನಮ್ಮ ಪಠ್ಯ ಪುಸ್ತಕಗಳೂ ಸಹ ಇದೇ ನಿಲುವನ್ನು ಹೊಂದಿರುವುದರಿಂದ ಇಂದಿನ ಪೀಳಿಗೆಗೆ ಪುರಾಣಗಳ ಪರಿಚಯವೇ ಇಲ್ಲವೆಂದರೆ ಅತಿಶಯೋಕ್ತಿಯಲ್ಲ. ಹಾಗೆ ನೋಡಿದರೆ ಯುಗಯುಗಗಳಿಂದ ನಮ್ಮ ಸಂಸ್ಕೃತಿಯನ್ನು ರೂಪಿಸುವಲ್ಲಿ ಮತ್ತು ಅದನ್ನು ತಲೆಮಾರಿನಿಂದ ತಲೆಮಾರಿಗೆ ದಾಟಿಸಿಕೊಂಡು ಬರುವಲ್ಲಿ ಪುರಾಣಗಳದ್ದು ಬಹುದೊಡ್ಡ ಪಾತ್ರ. ವೇದಗಳನ್ನು ಕ್ರಮಬದ್ಧವಾಗಿ ವಿಂಗಡಿಸಿದ ವೇದವ್ಯಾಸ ಮಹರ್ಷಿಗಳು ಜನಸಾಮಾನ್ಯರಿಗೆ ವೇದಗಳ ಸಾರವನ್ನು ತಿಳಿಸಲು ಮತ್ತು ನಮ್ಮ ಸಂಸ್ಕೃತಿಯ ಅರಿವನ್ನು ಹೆಚ್ಚಿಸಲು ಹದಿನೆಂಟು ಪುರಾಣಗಳನ್ನು ಬರೆದರು.

Additional information

Author

Publisher

Book Format

Ebook

Pages

150

Category

Year Published

2019

Language

Kannada

Reviews

There are no reviews yet.

Only logged in customers who have purchased this product may leave a review.