Your Cart

Need help? Call +91 9535015489

📖 Print books shipping available only in India. ✈ Flat rate shipping

ಪುರಂದರ ಮಹಾಸಂಪುಟ

Aralumallige Parthasarathy
$9.67

Product details

Publisher

Aralumallige Pratishthana

Language

Kannada

Pages

1255

Book Format

Printbook

Author

Aralumallige Parthasarathy

ಐದು ಶತಮಾನಗಳ ಕಾಲ ತಮ್ಮ ಅಪೂರ್ವ ಗೀತಸಂಗೀತದ ಮೂಲಕ ಕರ್ನಾಟಕದ ಉದ್ದಗಲಕ್ಕೂ ಗಾಳಿಗಂಧವಾಗಿ ಹರಡಿಕೊಂಡವರು ಪುರಂದರದಾಸರು, ಕನ್ನಡ ದಾಸಸಾಹಿತ್ಯಗಂಗೆ ಪುರಂದರದಾಸರಿಂದ ಭಕ್ತಿಭಾಗೀರಥಿ ಯೆನಿಸಿತು. ಪುರಂದರದಾಸರು ಕರ್ನಾಟಕ ಸಂಗೀತ ಪಿತಾಮಹರು, ದಾಸರು ತಂಬೂರಿ ಮೀಟಿದರು, ಭವಾಬ್ದಿ ದಾಟಿದರು, ಗೆಜ್ಜೆಯಕಟ್ಟಿದರು. ಲಜ್ಜೆಯ ಅಟ್ಟಿದರು. ಅರಿಷಡ್ವರ್ಗಗಳನ್ನು ಕುಟ್ಟಿದರು. ವೈಕುಂಠದ ಬಾಗಿಲು ತಟ್ಟಿದರು. ಗಾಯನ ಮಾಡಿದರು. ಹರಿಮೂರ್ತಿ ನೋಡಿದರು. ಪುರಂದರದಾಸರ ತಲೆಯಲ್ಲಿ ಸುಳಿದದ್ದು ಸುಳಾದಿಯಾಯಿತು. ಉಂಡು ಉಟ್ಟು ಉಸಿರಾಡಿದ್ದು ಉಗಾಭೋಗವಾಯಿತು. ಅವರ ಹಾಡುಗಳು ಗಂಧರ್ವಗಾನಕ್ಕೆ ಹೇಳಿ ಮಾಡಿಸಿದಂತಿವೆ. ಭಕ್ತಿಭಾಗೀರಥಿಯನ್ನು ತಮ್ಮ ಹಾಡುಗಳ ಮೂಲಕ ಅವರು ಜನಸಾಮಾನ್ಯರ ಮನೆಬಾಗಿಲಿಗೆ ಹರಿಸಿದರು. ಆ ಮೂಲಕ ಜನರ ಅನುಭವದಿಗಂತಗಳನ್ನು ವಿಸ್ತರಿಸಿದರು. ತಮ್ಮ ಒಂದೊಂದು ಹಾಡನ್ನೂ ಮಂತ್ರಸಿದ್ಧಿಯ ಮಹಾನ್ ಗೀತಸಂಗೀತವನ್ನಾಗಿ ಮಾಡಿ ಶತಶತಮಾನಗಳವರೆಗೆ ಅವನ್ನು ಅಮೃತವಾಹಿನಿಯಂತೆ ಅವರು ಹರಿಯಬಿಟ್ಟರು.

ಹರಿದಾಸಸಾಹಿತ್ಯ ನಂದಾದೀಪದ ಸಮುಜ್ವಲನೆಗೆ ದೀಕ್ಷಾಬದ್ಧರಾಗಿ ಐದು ದಶಕಗಳಿಂದ ತಮ್ಮನ್ನು ತೊಡಗಿಸಿಕೊಂಡವರು ವಿದ್ಯಾವಾಚಸ್ಪತಿ ಡಾ ಅರಳುಮಲ್ಲಿಗೆ ಪಾರ್ಥಸಾರಥಿ, ಅರವತ್ತೆಂಟಕ್ಕೂ ಹೆಚ್ಚು ಗ್ರಂಥಗಳನ್ನು ದಾಸಸಾಹಿತ್ಯದ ದಾರಿದೀಪಗಳಾಗಿ ನೀಡಿರುವ ಅರಳುಮಲ್ಲಿಗೆಯವರ ಹರಿದಾಸಸೇವೆ ಬೆಲೆ ಕಟ್ಟಲಾಗದ ಕೊಡುಗೆ. ಹತ್ತಾರು ಸಾವಿರ ಹಾಡುಗಳ ನಿಧಿನಿಕ್ಷೇಪಗಳನ್ನು ಹೊರತೆಗೆದು, ಜಗತ್ತಿನಾದ್ಯಂತ ಅದರ ಮೇಲೆ ಮಹತಿಗಳನ್ನು ದಣಿವಿಲ್ಲದೆ, ಹರಿದಾಸ ಸಂದೇಶ, ದಾಸೋತ್ಸವ ಸಂಭ್ರಮಗಳನ್ನು ಸಂಘಟಿಸಿ, ಸಮೃದ್ಧ ಶಬ್ದಸಂಪತ್ತು ತುಂಬಿ ತುಳುಕುವ ತಮ್ಮ ಅಸ್ಥಲಿತ ವಾಗ್ಟರಿಯ ಮೂಲಕ ದಾಸವರೇಣ್ಯರ
ವಿಚಾರಧಾರೆಗಳನ್ನು ವಿದೇಶೀಯರಿಗೆ, ವಿದೇಶದಲ್ಲಿನ ದೇಶೀಯರಿಗೆ ಪರಿಚಯಿಸಿ ದಾಸಸಾಹಿತ್ಯವನ್ನು ನಿಜವಾದ ಅರ್ಥದಲ್ಲಿ ವಿಶ್ವಸಾಹಿತ್ಯವನ್ನಾಗಿಸಿದ ಧೀಮಂತರು. ಎರಡು ಬಾರಿ ಅಖಿಲಭಾರತ ಹರಿದಾಸಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪೀಠಗೌರವ ಹಾಗೂ ಅಗಣಿತ ಪ್ರಶಸ್ತಿಗಳು ಅವರನ್ನು ಅಲಂಕರಿಸಿವೆ. ಪಾರ್ಥಸಾರಥಿವಿಠಲದಾಸ ಅಂಕಿತದಲ್ಲಿ ರಚಿಸಿರುವ ಅವರ ಸಹಸ್ರಾರು ಕೀರ್ತನೆಗಳು ಆಧುನಿಕ ದಾಸಸಾಹಿತ್ಯ ವಾಹಿನಿಗೆ ಮಹತ್ವದ ಸೇರ್ಪಡೆಯೆಂದೇ ಪರಿಗಣಿತವಾಗಿದೆ. ಪುರಂದರದಾಸರ ಬಗೆಗಿನ ಇಂತಹ ಅಮೂಲ್ಯ ಕೃತಿಯನ್ನು ಕನ್ನಡ ಜನತೆಗೆ ಕೊಟ್ಟ ಅರಳುಮಲ್ಲಿಗೆಯವರು, ಎಲ್ಲರ ಅಭಿನಂದನೆಗೆ ಪಾತ್ರರಾಗಿದ್ದಾರೆ.