Your Cart

Need help? Call +91 9535015489

📖 Print books shipping available only in India. ✈ Flat rate shipping

ಶ್ರೀರುದ್ರಸಾಧನೆ

Swami Shivatmananda
$1.35

Product details

Author

Swami Shivatmananda

Publisher

Vamshi Publications

Book Format

Ebook

Language

Kannada

Pages

160

Year Published

2020

Category

spiritual

ಈ ರುದ್ರಕೃತಿ ಪ್ರಕಟಗೊಳ್ಳುತ್ತಿರುವುದು ರುದ್ರಸಾಧನೆಯ ಅನುಭವವು ಸಾಧನಾ ಪಥದ ಸಾಧಕರ ಸ್ವಾಧ್ಯಾಯಕ್ಕೆ ಲಭ್ಯವಾಗಿ ಭಾರತೀಯ ಅಧ್ಯಾತ್ಮ ಪರಂಪರೆಯು ಈಗಲೂ ಹೇಗೆ ಜೀವಂತಿಕೆಯಲ್ಲಿದೆ ಎನ್ನುವ ಆತ್ಮವಿಶ್ವಾಸವನ್ನು ಸಾಧಕಬಂಧುಗಳ ಹೃದಯದಲ್ಲಿ ತುಂಬಲಿ ಎನ್ನುವ ಆಶಯದೊಂದಿಗೆ, ಶ್ರೀರಾಮಕೃಷ್ಣರು, ಭಗವಾನ್ ರಮಣರನ್ನು ಒಳಗೊಂಡು ಎಲ್ಲ ಸಂತ-ಮಹಾತ್ಮರೂ ತಮ್ಮ ಅನುಭವಗಳನ್ನು ಹೇಳಿಕೊಂಡಿರುವುದು ಈಗಲೂ ಸಾಧಕಬಂಧುಗಳಿಗೆ ಅಪೂರ್ವ ಮಾಹಿತಿಗಳನ್ನು ನೀಡುತ್ತಿರುವ ಅಧ್ಯಾತ್ಮಲೋಕದ ಜೀವಂತ ಪರಂಪರೆಯ ಭಾಗವಾಗಿ ಈ ಕಿರು ಕೃತಿಯೂ ಕಿರುಜ್ಯೋತಿ ಪ್ರಕಾಶರೂಪವಾಗಿ ಪ್ರಕಟಗೊಳ್ಳುತ್ತಿದೆ. ಶ್ರೀರುದ್ರದೊಂದಿಗೆ ಪಠಿಸುವ ‘ಪುರುಷಸೂಕ್ತ’ ಕುರಿತು ವಿದ್ವದ್ಲೋಕದಲ್ಲಿ ಹರಡಿರುವ ತಪ್ಪುಗ್ರಹಿಕೆಯ ವಿಚಾರಗಳು ಅಧ್ಯಾತ್ಮಲೋಕದ ಹಿನ್ನೆಲೆ ಇಲ್ಲದವರ ಮೇಲುಸ್ತರದ ಬೌದ್ಧಿಕತೆಯಿಂದ ಮೂಡಿದ ವಿಚಾರಗಳು ಎಂದು ನನ್ನ ಸಾಧನೆಯಲ್ಲಿ ಕಂಡಿತು. ಈ ಹಿಂದೆ ಕನ್ನಡಋಷಿ ಡಿ.ವಿ.ಜಿ ಅವರು ಪುರುಷಸೂಕ್ತ ಕುರಿತು ಬರೆದಿರುವ ಕಿರುಕೃತಿಯನ್ನು ಈ ‘ಶ್ರೀರುದ್ರಸಾಧನೆ’ ರಚನೆಯ ನಂತರ ಪರಿಶೀಲಿಸಿದಾಗ, ಡಿ.ವಿ.ಜಿ ಅವರೂ ತಮ್ಮ ಜೀವಿತದ ಆರಂಭಿಕ ದಿನಗಳಲ್ಲಿ ಪುರುಷಸೂಕ್ತ ಪಠಣದಲ್ಲಿ ಸಾಧನೆ ನಡೆಸಿರುವುದು ಅವರ ಬರವಣಿಗೆಯಲ್ಲಿ ಕಂಡಿತು. ಪ್ರಸ್ತುತ ಕೃತಿಯಲ್ಲಿ ಪ್ರಕಟವಾಗಿರುವ ಪುರುಷಸೂಕ್ತ ಕುರಿತ ವಿಚಾರಗಳು ಮುಕ್ತಮನದಿಂದ ಅವಲೋಕಿಸುವ ಜಿಜ್ಞಾಸುಗಳಿಗೆ ಅಧ್ಯಾತ್ಮಲೋಕದ ಹಿನ್ನೆಲೆಯ ಸೂಕ್ಷ್ಮತೆಯನ್ನು ಮನಗಾಣಿಸುತ್ತವೆ.