
ಉಪನಿಷತ್ ಚಿಂತನೆ
$4.23 $2.54
Product details
Category | spiritual |
---|---|
Translator | Parvathi G. Aithal |
Book Format | Ebook |
Pages | 228 |
Language | Kannada |
Year Published | 2021 |
Publisher | VIVIDLIPI |
ಉಪನಿಷತ್ ಚಿಂತನೆ
ಸುಕುಮಾರ ಅಳೀಕ್ಕೋಡ್ ಅವರ
ಉಪನಿಷತ್ತುಗಳು ಚರ್ಚಿಸುವ ಬ್ರಹ್ಮವಿದ್ಯೆ ಅಥವಾ ಆತ್ಮವಿದ್ಯೆಯು ಅತ್ಯಂತ ಪವಿತ್ರವೂ ಮಹತ್ವಪೂರ್ಣವೂ ಆದುದೆಂಬ ನಂಬಿಕೆಯು ಭಾರತದಲ್ಲಿ ಸಾರ್ವತ್ರಿಕವೂ ಸರ್ವವಿಧಿತವೂ ಆಗಿದೆ. ವೇದದ ಕಡಲನ್ನು ಕಡೆದು ತೆಗೆದ ಜ್ಞಾನಮೃತವು ಇದೆಂದು ಭಗವತ್ಪಾದರು ಸಾದರವಾಗಿ ಹೇಳಿದ್ದು ಎಷ್ಟು ಮರೆಯಲೆತ್ನಿಸಿದರೂ, ಭಾರತದ ಮನಸ್ಸಿನಲ್ಲಿ ಪುನಃ ಪುನಃ ಎದ್ದುಬರುವ ಓಜಸ್ಸಿನಿಂದ ತುಂಬಿದ ಒಂದು ನೆನಪಾಗಿದೆ. ಯಾವುದೇ ಧರ್ಮ ಭೇದಗಳಿಗೆ ಈ ನೆನಪಿನ ಓಜಸ್ಸನ್ನು ನಂದಿಸುವ ಸಾಮರ್ಥ್ಯ ಬಂದಿಲ್ಲ. ಶಂಕರರನ್ನು ಎದುರಿಸುವಾಗ ನಿರ್ಭಯರಾದ ರಾಮಾನುಜಾಚಾರ್ಯರು ಉಪನಿಷತ್ತಿನ ಚಿಂತನಾಮಹಿಮೆಯ ಮುಂದೆ ತಮ್ಮ ಎದಿರಾಳಿಯಂತೇ ತಲೆತಗ್ಗಿಸಿ ಅಂಜಲೀಬದ್ಧರಾಗಿ ನಿಲ್ಲುತ್ತಾರೆ. ವೇದವು ಹಾಲಿನ ಕಡಲೆಂದು ಶಂಕರರು ಹೇಳಿದರೆ, ರಾಮಾನುಜರು ಉಪನಿಷತ್ತನ್ನು ಹಾಲಿನ ಕಡಲಾಗಿ ಮಾಡಿದರು ಎಂದು ಮಾತ್ರ ವ್ಯತ್ಯಾಸ. ಅದ್ವೈತಗಳೂ ದ್ವೈತಗಳೂ ಮಾತ್ರವಲ್ಲ. ಇಲ್ಲಿನ ಎಲ್ಲಾ ಚಿಂತನಾಪಂಥದವರೂ ಈ ಅಮೃತವನ್ನು ಪಡೆಯಲು ಪ್ರಾಮಾಣಿಕ ಪ್ರಯತ್ನ ಮಾಡಿದವರಾಗಿದ್ದರು. ಚಾರ್ವಾಕರವರೆಗೆ ಉಪನಿಷತ್ತಿನ ಸ್ವೀಕಾರಕ್ಕೆ ಬೆಲೆಯನ್ನು ಕಲ್ಪಿಸಿದ್ದರೆಂದು ಸದಾನಂದರು ಹೇಳುತ್ತಾರೆ. ಭಾರತದ ಪ್ರಾಚೀನರ ಭೌತಿಕವಾದಿಗಳಿಗೂ ಉಪನಿಷತ್ತಿನ ಬಗೆಗೆ ಒಳ್ಳೆಯ ಅಭಿಪ್ರಾಯವನ್ನಿಟ್ಟುಕೊಳ್ಳದಿರುವುದು ಅಸಾಧ್ಯವಾಗಿತ್ತು.
ಹಿಂದಿನ ಕಾಲದಲ್ಲಿ ವಿಭಿನ್ನ ಪಂಥದವರ ನಡುವೆ ಉಪನಿಷತ್ತನ್ನು ಏಕಕಂಠದಿಂದ ಗೌರವಿಸುವ ವಿಚಾರದಲ್ಲಿ ಹೊಸಕಾಲಘಟ್ಟದತ್ತ ಸಾಗುವಾಗ ವ್ಯತ್ಯಾಸ ಕಾಣುವುದಿಲ್ಲ. ವಿವೇಕಾನಂದರು, ರವೀಂದ್ರನಾಥ ಟಾಗೋರ್, ಅರವಿಂದ ಘೋಷ್, ಮಹಾತ್ಮಾ ಗಾಂಧೀ, ಜವಾಹರಲಾಲ್ ನೆಹರೂ, ಎಸ್. ರಾಧಾಕೃಷ್ಣನ್ ಮೊದಲಾದ ಭಾರತದ ಆಧುನಿಕ ಧ್ವನಿಗಳ ಭಿನ್ನ ಸ್ವರಗಳಾದ ಮಹಾವ್ಯಕ್ತಿಗಳೆಲ್ಲರೂ ಉಪನಿಷತ್ತಿನ ಮುಂದೆ ಭಯ ಭಕ್ತಿಯಿಂದ ಕೈ ಮುಗಿದು ನಿಲ್ಲುತ್ತಾರೆ. ಭಾರತವು ಅನೇಕ ಅಮೂಲ್ಯ ಸೃಷ್ಟಿಗಳನ್ನು ಮಾಡಿದ್ದರೂ ಅವುಗಳಲ್ಲಿ ಅತ್ಯಂತ ಅಮೂಲ್ಯವೆನಿಸಿದ ಅಮೃತವು ಉಪನಿಷತ್ತೆಂಬ ವಿಚಾರವು ಸರ್ವಸಮ್ಮತವಾಗಿದೆ.
Customers also liked...
-
T.P.Ashok
$8.00 -
Arya
$0.73$0.00 -
Girish Karnad
$0.97$0.58 -
Akshara K V
$5.00 -
Akshara K V
$5.00 -
Akshara K V
$5.00