ವಿಜ್ಞಾನಕ್ಕೆ ಸಂಬಂಧಪಟ್ಟ ತತ್ವಜ್ಞಾನ, ವಿಜ್ಞಾನ ಹೇಗೆ ಕೆಲಸ ಮಾಡುತ್ತದೆ? ವಿಜ್ಞಾನದಲ್ಲಿ ಸಿದ್ಧಾಂತ ಎಂದರೇನು? ಸಿದ್ಧಾಂತದ ಪ್ರಮಾಣ ಏನು? ವಾದ ಎಂದರೇನು? ಸಾಬೀತಾಗದ ವಾದವನ್ನು ಒಪ್ಪಿಕೊಳ್ಳಬಹುದೇ? ಸಾಮಾನ್ಯವಾಗಿ ಸ್ವೀಕರಿಸಲಾದ ಸಿದ್ಧಾಂತವನ್ನೂ ಪ್ರಶ್ನಿಸಲಾಗದೇ? ಒಂದು ವಿಷಯದ ಕುರಿತು ಹಲವು ಅಭಿಪ್ರಾಯಗಳು ಮತ್ತು ಸೂತ್ರಗಳು ಮಂಡಿಸಲ್ಪಟ್ಟು ಅವುಗಳಲ್ಲಿ ಯಾವುದೂ ನಿರ್ವಿವಾದಕವಾಗಿ ಸ್ವೀಕಾರವಾಗದಿದ್ದರೆ ವಿಜ್ಞಾನ ಹೇಗೆ ಮುಂದುವರಿಯುತ್ತದೆ? ಇಂತಹ ಪ್ರಶ್ನೆಗಳಿಗೆ ಉತ್ತರ ಹುಡುಕುವುದೇ ವಿಜ್ಞಾನದ ತತ್ವಶಾಸ್ತ್ರದ ಗುರಿ. ವಿಜ್ಞಾನದ ಗುರಿಯೆಂದರೆ ಕಾಲ ಮತ್ತು ಅವಕಾಶಗಳಲ್ಲಿ ವಸ್ತುಗಳಿಗೆ ಮತ್ತು ಘಟನೆಗಳಿಗಿರುವ ಪರಸ್ಪರ ಸಂಬಂಧವನ್ನು ನಿರ್ಧರಿಸುವ ಸಾಮಾನ್ಯ ಸೂತ್ರಗಳನ್ನು ಸ್ಥಾಪಿಸುವುದಾಗಿದೆ. ಈ ಸೂತ್ರಗಳನ್ನು ವಿಜ್ಞಾನಿಗಳು ಹೇಗೆ ಕಂಡುಹಿಡಿಯುತ್ತಾರೆ? ಅವರು ಪ್ರತಿಪಾದಿಸುವ ಸೂತ್ರಗಳು ನಿಜವೆಂದು ಹೇಗೆ ನಿರ್ಧರಿಸುತ್ತಾರೆ? ವಿಜ್ಞಾನದ ಯಾವ ಸೂತ್ರವೂ, ಸಿದ್ಧಾಂತವೂ ಮುಂದೆ ಪ್ರಶ್ನೆಗಳಿಗೀಡಾಗಲಾರವೇ? ಈ ಪ್ರಶ್ನೆಗಳಿಗೂ ವಿಜ್ಞಾನದ ತತ್ವಜ್ಞಾನ ಉತ್ತರ ಹುಡುಕುತ್ತದೆ. ವಿಜ್ಞಾನಿ ಏಕೆ? ಹೇಗೆ? ಎಲ್ಲಿ? ಎಂಬ ಪ್ರಶ್ನೆಗಳನ್ನು ಕೇಳುತ್ತಾ, ಅದರ ಕುರಿತು ಯೋಚಿಸುತ್ತಾ ವೈಜ್ಞಾನಿಕ ಉತ್ತರಗಳನ್ನು ಪಡೆಯಲು ಪ್ರಯತ್ನಿಸುತ್ತಾನೆ. ತತ್ವಜ್ಞಾನ ಆತ ಪಡೆದ ಉತ್ತರಗಳ ಸತ್ಯಾಸತ್ಯತೆಯನ್ನು ಮತ್ತು ಅದರ ಪರಿಣಾಮವನ್ನು ಪರೀಕ್ಷಿಸುತ್ತದೆ. ಅದು ನಮ್ಮ ಸಮಾಜ, ಪರಿಸರ, ನಮ್ಮ ಜೀವನ ಹಾಗೂ ನಮ್ಮ ಪರಸ್ಪರ ಸಂಬಂಧಗಳ ಮೇಲೆ ಯಾವ ಪರಿಣಾಮಗಳನ್ನು ಬೀರಬಹುದು ಎಂಬುದನ್ನು ಚಿಂತಿಸುತ್ತದೆ. ವೈಜ್ಞಾನಿಕ ಉತ್ತರಗಳ ಮಹತ್ವ ಏನು, ಅವುಗಳನ್ನು ಪ್ರಶ್ನಿಸಬಹುದೇ ಅಥವಾ ಪ್ರಕೃತಿಯ ವಿದ್ಯಮಾನಗಳ ಕುರಿತು ಅವೇ ಅಂತಿಮ ವಿವರಣೆಯೆಂದು ಅವನ್ನು ಸ್ವೀಕರಿಸಬೇಕೇ? ಪ್ರಕೃತಿಯ ವಿದ್ಯಮಾನಗಳ ಕುರಿತು ಯಾವುದೇ ವಿವರಣೆ ಮುಂದೆಯೂ ಪ್ರಶ್ನೆಗಳಿಗೆ ಏಕೆ ಒಳಗಾಗಬಾರದು? ಇವೆಲ್ಲಾ ವಿಜ್ಞಾನಕ್ಕೆ ಸಂಬಂಧಪಟ್ಟ ತತ್ವಜ್ಞಾನದ ಚಿಂತನೆಯ ವಿಷಯಗಳು.

Additional information

Category

Author

Publisher

Book Format

Ebook

Pages

112

Language

Kannada

Reviews

There are no reviews yet.

Only logged in customers who have purchased this product may leave a review.