
ಈಸೋಪನ ಲೋಕನೀತಿ ಕಥೆಗಳು
Anand$1.45 $1.31
Product details
Category | Stories |
---|---|
Author | Anand |
Publisher | Nava Karnataka |
Book Format | Ebook |
Pages | 232 |
Language | Kannada |
Year Published | 2021 |
ಚಾಲ್ತಿಯಲ್ಲಿರುವ ಕಟ್ಟು ಕಥೆಗಳಲ್ಲಿ ಹೆಚ್ಚು ಕಡಿಮೆ ಮುಕ್ಕಾಲು ಪಾಲು ಕಥೆಗಳು ಪ್ರಾಣಿಗಳನ್ನು ಕುರಿತದ್ದಾಗಿವೆ ಮತ್ತು ಈ ಮಾದರಿಯು, ಮೂಲ ಸ್ವರೂಪದ್ದೂ, ಹಾಗೂ ಯಾವಾಗಲೂ ಬಹು ಜನಪ್ರಿಯವಾದದ್ದೂ ಆಗಿತ್ತೆನ್ನುವುದರಲ್ಲಿ ಯಾವ ಸಂಶಯವೂ ಇರಲಾರದು. ಇವುಗಳ ಪೈಕಿ ಎಲ್ಲೋ ಕೆಲವು ಮಾತ್ರ ಸಸ್ಯವರ್ಗ ಅಥವಾ ಸಮುದ್ರ, ನದಿಗಳು, ಸೂರ್ಯ, ಮಾರುತ-ಇತ್ಯಾದಿ ನೈಸರ್ಗಿಕ ವಿಷಯಗಳನ್ನು ಕುರಿತದ್ದಾಗಿವೆ. ದೇವತೆಗಳು ಅಥವಾ ಮನುಷ್ಯರು, ಅಥವಾ ದೇವತೆಗಳೂ ಮನುಷ್ಯರೂ ಪಾತ್ರಗಳಾಗಿರುವ ಕಥೆಗಳೂ ಹಲವಾರು ಇವೆ. ಇವುಗಳಲ್ಲಿ ಅನೇಕವು ಕಾರ್ಯ-ಕಾರಣವನ್ನು ಸೂಚಿಸುವಂಥವು. ಉಳಿದವುಗಳಲ್ಲಿ ಅನೇಕವು ಹಲವು ಸಂದರ್ಭಗಳಲ್ಲಿ ಯಾವುದಾದರೊಂದು ರೀತಿಯ ಒಳ್ಳೆಯ ಚತುರೋಕ್ತಿಯಿಂದ ಮುಕ್ತಾಯವಾದ ಕೇವಲ ದಂತಕಥೆಗಳಾಗಿದ್ದು, ಸಾಮಾನ್ಯವಾಗಿ, ಯಾವುದಾದರೂ ಒಂದು ನೀತಿ ಪಾಠವನ್ನು ಅಥವಾ ಒಂದು ಬುದ್ಧಿವಾದವನ್ನು ತೂಗು ಹಾಕಲು ಸಾಧ್ಯವಾದ ರೀತಿಯಲ್ಲಿವೆ.
ಈ ಸಂಕಲನಕ್ಕೆ ಕಥೆಗಳನ್ನು ಸಂಗ್ರಹಿಸಿ ರೂಪಾಂತರಿಸಿದವರು ಕನ್ನಡದ ಹೆಸರಾಂತ ಕಥೆಗಾರರಾದ ಶ್ರೀ ಆನಂದ ಅವರು. ಇದರಲ್ಲಿ ೧೨೦ ಕಥೆಗಳಿವೆ. ಅಲ್ಲದೆ, ಚಿತ್ರಶಿಲ್ಪಿ ಎಂ.ಸಿ.ವೀರ್ ಅವರು ರಚಿಸಿದ ಸೊಗಸಾದ ೧೧೦ ಚಿತ್ರಗಳಿವೆ.
Customers also liked...
-
Deepika Chate
$0.73$0.44 -
Mallikarjun Hiremath
$0.85$0.51 -
U.R. Ananthamurthy
$5.80$4.64 -
Vaidehi
$8.00 -
H.S.Bhairnatti
$0.48$0.29 -
K. Satyanarayana
$1.93$1.16