…ಭವಭೂತಿಯು ಈ ನಾಟಕವನ್ನು ವಾಸ್ತವವಾದಿ ಪಾತಳಿಯಲ್ಲಿಯೇ ಕಟ್ಟಿದ್ದಾನೆ. ಕವಿಗೆ ರಾಮನು ದೇವನೇ ಹೌದು. ಹಾಗಿದ್ದೂ, ರಾಮನನ್ನು ತಪ್ಪು ಮಾಡುವ ಸಾಮರ್ಥ್ಯವುಳ್ಳ ಮನುಷ್ಯನನ್ನಾಗಿ ತೋರಿಸಲು ಆತ ಹೆದರುವುದಿಲ್ಲ. ರಾಮ ಸೀತೆಯರ ಕಥೆಗೆ ಮನುಷ್ಯ ಜಗತ್ತಿನ ಅನುಭವಗಳನ್ನೂ, ಭಾವನೆಗಳನ್ನೂ ಈ ನಾಟಕವು ಬೆಸೆಯುವ ಮೂಲಕವೇ ಪ್ರೇಕ್ಷಕರ ಅನುಭವಕ್ಕೆ ಪ್ರಮಾಣಬದ್ಧತೆಯನ್ನೂ ಸ್ಫುಟತೆಯನ್ನೂ ತಂದುಕೊಡುತ್ತದೆ. ರಾಮನನ್ನು ದೇವರೆಂದು ಭಾವಿಸಿ, ಅವನ ಕಥೆಯನ್ನು ಪುರಾಣವೆಂಬಂತೆ ನೋಡುವುದರಲ್ಲಿ ಭವಭೂತಿ ಆಸಕ್ತಿಯನ್ನು ತೋರಿಸುವುದಿಲ್ಲ. ಬದಲು ಆತ ಈ ನಾಟಕವನ್ನು ರಾಮ ಸೀತೆಯರೆನ್ನುವ ಮನುಷ್ಯರ ಕಥೆಯಾಗಿ ಕಟ್ಟಿ ಪ್ರೇಕ್ಷಕರಿಗೆ ವೈಯಕ್ತಿಕವಾಗಿ ತಟ್ಟುವಂತೆ ಮಾಡಿದ್ದಾನೆ. ರಾಮ ಸೀತೆಯರ ಕಥೆಯು ಹಲವು ಪದರಗಳನ್ನು ಹೊಂದಿದ ವಾಸ್ತವದಲ್ಲಿ ಬಿಚ್ಚಿಕೊಳ್ಳುತ್ತದೆ. ದಂಪತಿಗಳ ನಡುವಿನ ಪ್ರೀತಿಯೆಂಬುದು ಪರಸ್ಪರರನ್ನು ಒಳಗೊಳ್ಳುವ ಉತ್ಕಟವಾದ ಅನುಭವವಾಗಿ, ‘ಸುಖ ದುಃಖವೆಂಬೆರಡು ಎರಡಲ್ಲವೆಂಬರಿವು’ ಹುಟ್ಟಲಿಕ್ಕೆ ಭವಭೂತಿಯ ಬಹುವಾಸ್ತವದ ರಚನೆ ಕವಿಯ ಚಮತ್ಕಾರ ಮಾತ್ರವಾಗಿ ಉಳಿಯದೇ ನಾಟಕದ ಅನಿವಾರ್ಯ ವಿನ್ಯಾಸವಾಗುತ್ತದೆ.

ಡಾ. ಜಿ.ಕೆ. ಭಟ್ ಅವರು ಸಂಪಾದಿಸಿರುವ ಈ ನಾಟಕದ ಮುನ್ನುಡಿಯಿಂದ

Additional information

Category

Publisher

Language

Kannada

Book Format

Ebook

Reviews

There are no reviews yet.

Only logged in customers who have purchased this product may leave a review.