Your Cart

Need help? Call +91 9535015489

📖 Print books shipping available only in India. ✈ Flat rate shipping

ಆರನೇ ಬೆರಳು

Asha Raghu
$1.38

Product details

Category

Stories

Author

Asha Raghu

Publisher

Sahitya Loka Publication

Language

Kannada

Book Format

Ebook

ಆರನೇ ಬೆರಳು

ಸಂಕಲನದಲ್ಲಿಯ ಮೊದಲ ಕಥೆ, “ಆರನೇ ಬೆರಳು” ಕಥೆಯ ಆಯಾಮ ವಿಸ್ತಾರವಾಗಿದ್ದು ಕಾದಂಬರಿಗೆ ಬೇಕಾದ ವಿಪುಲ ಸಾಮಗ್ರಿಯನ್ನು ಒದಗಿಸುತ್ತದೆ.  ಸಂಕಲನದಲ್ಲಿಯ ಮೊದಲ ಕಥೆ, “ಆರನೇ ಬೆರಳು” ಕಥೆಯ ಆಯಾಮ ವಿಸ್ತಾರವಾಗಿದ್ದು ಕಾದಂಬರಿಗೆ ಬೇಕಾದ ವಿಪುಲ ಸಾಮಗ್ರಿಯನ್ನು ಒದಗಿಸುತ್ತದೆ. ‘ಪುಷ್ಪಗಂಧಿ’ ರಾಜರಿಗೆ ಸಂಬಂಧಿಸಿದ ಕಥೆ. ಇದು ಲೇಖಕಿಯ ಕಲ್ಪನೆಯ ಕೂಸು.  ‘ಕಮರಿದ ಕನಸು’ ಮತ್ತು ‘ಪ್ರವಾಹ.. ಪ್ರಳಯ… ಪಾರ್ವತಿ’ ಗಳಲ್ಲಿ ಪುರಾಣದ ಕಥೆಗಳನ್ನು ರೂಪಾಂತರಗೊಳಿಸಿದ್ದಾರೆ ಲೇಖಕಿ. ‘ಕಮರಿದ ಕನಸು’ ಕಥೆಯಲ್ಲಿ ಕಾಶಿರಾಜನ ಮಕ್ಕಳು ಅಂಬಿಕೆ, ಅಂಬಾಲಿಕೆ ಅಂಬೆಯರ ಕಥೆ ಇಲ್ಲಿ ಸಾದರಗೊಂಡಿದ್ದು, ಮಹಾಭಾರತದಲ್ಲಿ ಬರುವ ಕಥೆಯಂತಿಲ್ಲ. ಲೇಖಕಿಯ ಊಹೆ ಅಥವಾ ಕಲ್ಪನೆಯ ಸೆರಗಲ್ಲಿ ಅರಳಿಕೊಂಡಿವೆ ಈ ಎರಡೂ ಕಥೆಗಳು. ‘ಪ್ರವಾಹ… ಪ್ರಳಯ… ಪಾರ್ವತಿ’ ಕಥೆಯಲ್ಲಿ ಶಿವ ಗಂಗೆಯನ್ನು ಪ್ರೀತಿಸಿ ಮನೆಗೆ ಕರೆತರುವುದು, ಸವತಿಯರಿಬ್ಬರೂ ಕದನಕ್ಕೆ ನಿಲ್ಲುವುದು, ಒಬ್ಬರನ್ನೊಬ್ಬರು ದ್ವೇಷಿಸುವುದು, ಶಿವನಿಗೆ ಅವರಿಬ್ಬರ ಕಚ್ಚಾಟವನ್ನು ನೋಡಿ ಅಸಹನೀಯ ಎನ್ನಿಸುವುದು ಬಹು ಸ್ವಾರಸ್ಯವಾಗಿ ಬಂದಿದೆ. ‘ಸಂಡೆ ಬಜಾರು’ ಕಥೆ ಒಬ್ಬ ಸಣ್ಣ ವ್ಯಾಪಾರಿಯದ್ದು. ಲೇಖಕಿಯ ಇಪ್ಪತ್ತು ಕಥೆಗಳಲ್ಲಿ ಹೆಚ್ಚಿನ ಕಥೆಗಳಲ್ಲಿ ಕಾಣುವುದು ಪುರುಷನಿಂದಾಗುತ್ತಿರುವ ಶೋಷಣೆಯ ವಿರುದ್ಧ ದನಿ ಎತ್ತಲಾರದ ಸ್ತ್ರೀಯರ ಶೋಚನೀಯ ಸ್ಥಿತಿಯನ್ನು, ಸ್ತ್ರೀಯರು ಅನುಭವಿಸುತ್ತಿರುವ ದುಃಖದುಮ್ಮಾನಗಳನ್ನು, ಅದರಿಂದ ಹೊರಬರಲಾರದೆ ಒದ್ದಾಡುವುದನ್ನು, ಯಾವ ಕಾಲಕ್ಕೂ ಸ್ತ್ರೀಯರ ಪರಿಸ್ಥಿತಿ ಬದಲಾಗುವುದಿಲ್ಲ ಎನ್ನುವುದನ್ನು ಸೂಚ್ಯವಾಗಿ ನಿರೂಪಿಸುತ್ತವೆ.