
ಬಲ್ಲಾಳ ದುರ್ಗದ ಭೀಕರ ಕಮರಿ (ಮಲೆನಾಡಿನ ರೋಚಕ ಕತೆಗಳು ಭಾಗ ೧೧)
Girimane Shyamarao$2.18 $1.31
Product details
Category | Stories |
---|---|
Author | Girimane Shyamarao |
Publisher | Girimane prakashana |
Language | Kannada |
Year Published | 2021 |
Book Format | Ebook |
ಎಲ್ಲಿ ಸೌಂದರ್ಯ ಇರುವುದೋ ಅಲ್ಲಿ ಅದನ್ನು ಸವಿಯಲು ಮುಗಿಬೀಳುವಂತೆಯೇ ಅದರಲ್ಲೊಂದಷ್ಟು ಜನ ಅದನ್ನು ಹಾಳುಗೆಡವುತ್ತಾರೆ. ಹಾಗೆಯೇ ಎಲ್ಲಿ ಸಂಪತ್ತಿದೆಯೋ ಅಲ್ಲಿ ಅದನ್ನು ಲೂಟಿ ಮಾಡಲು ಅಷ್ಟು ಲೂಟಿಕೋರರಿರುತ್ತಾರೆ. ಎಲ್ಲಿ ಅಜ್ಞಾನ ಇದೆಯೋ ಅಲ್ಲಿ ಅದರ ದುರುಪಯೋಗ ಪಡೆಯಲು ಕೆಲವರು ಕಾದಿರುತ್ತಾರೆ. ಯಾರಲ್ಲಿ ದೌರ್ಬಲ್ಯ ಇದೆಯೋ ಅವರನ್ನು ದುಷ್ಟ ಮನಸ್ಸಿನ ಪ್ರಬಲರು ತುಳಿಯುತ್ತಾರೆ. ಇದು ಬುದ್ಧಿ ಇರುವ ಮನುಷ್ಯರ ಜೊತೆಯೇ ಇದೆ ಎಂದುಕೊಂಡ ಅವಿವೇಕಿಗಳ ಸ್ವಭಾವ!
ಲಕ್ಷಾಂತರ ವರ್ಷಗಳಿಂದ ಪ್ರಕೃತಿಯೊಂದಿಗೆ ಮಾನವ ಹೊಂದಿಕೊಂಡು ಬದುಕುತ್ತಿದ್ದರೂ ಇತ್ತೀಚಿನ ಕೆಲವು ವರ್ಷಗಳಲ್ಲಿ ನಮಗೆ ವರದಾನ ಎಂದು ಭಾವಿಸಿದ ಕಂಡು ಕೇಳರಿಯದ ತಂತ್ರಜ್ಞಾನ ನಮ್ಮನ್ನು ಈ ಅಧೋಗತಿಗೆ ತಂದು ನಿಲ್ಲಿಸಿದೆ. ಹಿತಮಿತವಾಗಿ ಅದರ ಪ್ರಯೋಜನ ಪಡೆಯಲು ತಿಳಿಯದ ಜನ ಮತ್ತೊಂದು ರೀತಿಯಲ್ಲಿ ಅದರ ದುರ್ಲಾಭ ಪಡೆಯುತ್ತಿದ್ದಾರೆ. ಎಲ್ಲವನ್ನೂ ತಿಳಿದು ಸರಿಪಡಿಸಬೇಕಾದ ಆಳುವ ಸರಕಾರಕ್ಕಂತೂ ಅದರ ಬಗ್ಗೆ ಸಾಮಾನ್ಯ ಜ್ಞಾನವೂ ಇಲ್ಲ. ಅನುಭವಸ್ಥರ, ತಜ್ಞರ ವರದಿ ಅದಕ್ಕೆ ಬೇಕಿಲ್ಲ. ಕಾಳಜಿ, ಕಳಕಳಿ ಇರುವ ಪ್ರಕೃತಿ ಪ್ರಿಯರ ಸಲಹೆಗಳಿಗೆ ಕವಡೆ ಕಿಮ್ಮತ್ತೂ ಇಲ್ಲ. ಬದಲಿಗೆ ತಾನೇ ಅವೈಜ್ಞಾನಿಕವಾದ ಯೋಜನೆಗಳನ್ನು ಹಮ್ಮಿಕೊಂಡು ಎಲ್ಲವನ್ನೂ ಕುಲಗೆಡಿಸುತ್ತಿದೆ.
ಮಲೆನಾಡಿನ ಪ್ರಕೃತಿ ಹೇಗೆ ವೈವಿಧ್ಯವೋ ಹಾಗೇ ಇಲ್ಲಿನ ಜನರ ಬದುಕೂ ವೈವಿಧ್ಯಮಯ. ಗಮನಿಸುವ ಕಣ್ಣಿದ್ದರೆ ಇಲ್ಲಿ ನಡೆಯುವ ರೋಚಕ ಘಟನೆಗಳಂತೂ ಬರೆದು ಮುಗಿಯದಷ್ಟು! ಪ್ರತಿಯೊಂದು ಕೃತಿಯಲ್ಲೂ ಕತೆ, ಘಟನೆಗಳ ಜೊತೆಗೆ ಪ್ರಕೃತಿ ಹಾಗೂ ಬದುಕಿನ ನೈಜ ಚಿತ್ರಣ ನೀಡಲು ಯತ್ನಿಸಿದ್ದೇನೆ. ಹಾಗಾಗಿ ಇದರಲ್ಲಿ ಮಲೆನಾಡಿನ ಕತೆಗಳ ಜೊತೆಗೆ ಕಳೆದೆರಡು ವರ್ಷಗಳಲ್ಲಿ ನಮ್ಮ ಹಾಗೂ ನಮ್ಮ ಪಕ್ಕದ ಕೊಡಗಿನ ಭಾಗಗಳಲ್ಲಾದ ಪ್ರವಾಹ ಮತ್ತು ಭೂಕುಸಿತದ ಅನಾಹುತಗಳ ಚಿತ್ರಣವೂ ಇದೆ. ಆ ಸಮಯದಲ್ಲಿ ಏನೇನಾಯಿತು ಎನ್ನುವುದು ಟಿ.ವಿ. ನೋಡಿದ ಎಲ್ಲರಿಗೂ ಗೊತ್ತು. ನಂತರ ಗಂಜಿ ಕೇಂದ್ರಗಳಲ್ಲಿ ಅವರು ಕಳೆದ ದುಃಸ್ಥಿತಿಯ ಬಗೆಯೂ ನಿಮಗೆ ತಿಳಿದಿದೆ. ಆದರೆ ಗಂಜಿ ಕೇಂದ್ರ ಸೇರುವ ಹಿಂದಿನ ಬದುಕಿನ ಚಿತ್ರಣ ಎಲ್ಲರಿಗೂ ತಿಳಿಯದು. ಇಲ್ಲಿ ಅಂತಹಾ ಕೆಲವು ಘಟನೆಗಳಿಗೆ ಪರ್ಯಾಯ ಘಟನೆ ಹೆಣೆದಿದ್ದೇನೆ. ಓದುಗರ ಅಭೂತಪೂರ್ವ ಸಹಕಾರದಿಂದಾಗಿ ಇದು `ಮಲೆನಾಡಿನ ರೋಚಕ ಕತೆ’ಗಳ ಸರಣಿಗೆ ಹನ್ನೊಂದನೆಯ ಭಾಗವಾಗಿ ಸೇರ್ಪಡೆಯಾಗುತ್ತಿದೆ.
(ಗಿರಿಮನೆ ಶ್ಯಾಮರಾವ್)
Customers also liked...
-
Mallikarjun Hiremath
$0.85$0.51 -
Kedambady Jathappa Rai
$0.97$0.58 -
Kedambady Jathappa Rai
$1.81$1.09 -
K.V. Savitramma
$8.00 -
Giraddi Govindaraj
$3.02$1.81 -
K. Satyanarayana
$1.93$1.16