Your Cart

Need help? Call +91 9535015489

📖 Print books shipping available only in India. ✈ Flat rate shipping

ಬೇರು ಮತ್ತು ಬೆವರು

Laxman Badami
$0.73

Product details

Category

Stories

Author

Laxman Badami

Book Format

Ebook

Pages

117

ISBN

978-81-923033-6-9

Language

Kannada

Year Published

2011

ಹೊಸ ತಲೆಮಾರಿನ ಕಥೆಗಾರರಲ್ಲಿ ಕಾಣಿಸಿಕೊಳ್ಳುವ ಲಕ್ಷ್ಮಣ ಬದಾಮಿ ಉದ್ಯೋಗದಿಂದ ಶಿಕ್ಷಕರು. ಕಥೆ ಬರೆಯುವುದು ಅವರ ಹವ್ಯಾಸ. ಅವರು ತಮ್ಮ ಕಥೆಗಳಲ್ಲಿ ನಿರೂಪಿಸುತ್ತಿರುವ ಬದುಕನ್ನು ಪ್ರಾಮಾಣಿಕವಾಗಿ ಚಿಂತಿಸುತ್ತಿದ್ದಾರೆ. ಅವರ ಕಥೆಗಳು ಈ ಹೊತ್ತಿನ ಉರಿಯುವ ಸಮಸ್ಯೆಗಳನ್ನು ದೊಡ್ಡದಾಗಿ ತೋರಿಸುವುದಿಲ್ಲ. ಹಾಗಂತ ಸಮಸ್ಯೆಗಳನ್ನು ಕುರಿತು ಆಲೋಚಿಸುವುದಿಲ್ಲ ಎಂದಲ್ಲ. ನಮ್ಮ ಕಣ್ಣ ಮುಂದಿನ ಸಮಾಜದಲ್ಲಿ ಘಟಿಸುವ ಸಂಭವಿಸುವ ಸಂಗತಿಗಳನ್ನು ಮಾಧ್ಯಮಗಳು ದೊಡ್ಡದಾಗಿ ತೋರಿಸುತ್ತಲೇ ಇರುತ್ತವೆ.ಸಮಾಜಿಕರು ಇವುಗಳನ್ನು ಕುರಿತು ಉತ್ಸಾಹದಿಂದ ಚರ್ಚಿಸುತ್ತಾ ಇರುತ್ತಾರೆ. ಇಂತಹ ಸಂಗತಿಗಳ ಕಡೆಗೆ ಲಕ್ಷ್ಮಣ ಬದಾಮಿಯವರ ಗಮನ ಇಲ್ಲ. ಸಮಾಜದಲ್ಲಿ ಘಟಿಸುವ, ಉದ್ಭವಿಸುವ ರೋಚಕ ದುರಂತಗಳು ಕಥೆಗಾರರನ್ನು ಪ್ರಭಾವಿಸುತ್ತವೆ. ಈ ಪ್ರಭಾವಕ್ಕೂ ಲಕ್ಷ್ಮಣ ಬದಾಮಿಯವರು ಒಳಗಾಗಲಿಲ್ಲ. ಅವರ ಕಥೆಗಳು ಕಳೆದ ಮನುಷ್ಯರ ಬದುಕನ್ನು ಅದರ ಮಾದರಿಯನ್ನು ತೋರಿಸುವಂತಿವೆ. ನಗರ ಮುಖಿ ಮತ್ತು ಆಧುನಿಕ ಮುಖಿ ಮನಸ್ಸುಗಳಿಗೆ ಲಕ್ಷ್ಮಣ ಬದಾಮಿಯವರ ಕಥೆಗಳು ಹಳೆಯ ಬದುಕಿನ ಪಳಿಯುಳಿಕೆಯಂತೆ ಕಾಣಬಹುದು. ಆದರೆ ಇಂಥಹ ಬದುಕು ನಮ್ಮ ಸಮಾಜದಲ್ಲಿ ಎಲೆ ಮರೆಯ ಕಾಯಿಯಂತೆ ಜೀವಂತವಾಗಿರುವುದನ್ನು ಈ ಕಥೆಗಳು ಪ್ರಮಾಣಿಕವಾಗಿ ತೋರಿಸುತ್ತವೆ. ಇದು ಲಕ್ಷ್ಮಣ ಬದಾಮಿಯವರನ್ನು ಇತರ ತನ್ನ ಓರೆಗೆ ಕಥೆಗಾರರಿಂದ ಭಿನ್ನವಾಗಿರಿಸುತ್ತದೆ.’ಹುಲಿಯ ಸವಾರಿ’(ವಿವೇಕ ಶಾನಭಾಗ) ‘ಹಲೋ ಭಾರತಿ’ (ವಸುಧೇಂದ್ರ), ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ (ಕೇಶವ ಕುಡ್ಲ) ಈ ಬಗೆಯ ಕಥೆಗಳು ರಚನೆಯಾಗುತ್ತಿರುವಾಗ, ಆಧುನಿಕಯ ಸೊಂಕಿಲ್ಲದೆ ಕಥೆಗಳನ್ನು ಬರೆಯುತ್ತಿರುವ ಲಕ್ಷ್ಮಣ ಬದಾಮಿ ಬಗ್ಗೆ ಕುತೂಹಲ ಮೂಡತ್ತದೆ. ಈ ಹೊತ್ತಿನ ಮನುಷ್ಯ ಬದುಕಿನಲ್ಲಿ ಕಾಣುವ ಒತ್ತಡಗಳು, ಹಾತೊರೆಯುವಿಕೆಗೆ ಕಾರಣಗಳು ಬೇಕಾದಷ್ಟಿವೆ. ನಗರ ಮುಖಿಯಾಗುತ್ತಿರುವ ಆಧುನಿಕತೆಯ ಪರಿಕರಗಳನ್ನುಹಂಬಲಿಸುವ, ಅಗತ್ಯಗಳನ್ನು ಪೂರೈಸಿಕೊಳ್ಳುವ ಹೋರಾಟದಲ್ಲಿ ತೊಡಗಿರುವ ಬದುಕುಗಳನ್ನು ಲಕ್ಷ್ಮಣ ಬದಾಮಿ ಇಲ್ಲಿ ಕಥೆಗಳಾಗಿಸಿದ್ದಾರೆ.