Your Cart

Need help? Call +91 9535015489

📖 Print books shipping available only in India. ✈ Flat rate shipping

ಗಿರಿ ಕಂದರ ಎಸ್ಟೇಟ್

Girimane Shyamarao
$1.45

Product details

Category

Stories

Author

Girimane Shyamarao

Publisher

Girimane prakashana

Book Format

Ebook

Pages

264

ISBN

978-93-85378-16-4

Language

Kannada

Year Published

2021

ಮನುಷ್ಯರ ಮನಸ್ಸಿನ ಆಟಗಳು ವಿಚಿತ್ರ. ವೈವಿಧ್ಯಮಯ. ಕೆಲವರಿಗೆ ಯಾರಿಗೂ ತೊಂದರೆ ಮಾಡದೆಯೇ ಚೆನ್ನಾಗಿ ಬದುಕಬೇಕೆಂಬ ಆಸೆ. ಕೆಲವರಿಗೆ ಇನ್ನೊಬ್ಬರ ಬದುಕನ್ನು ನುಂಗಿಯಾದರೂ ತಾನು ಚೆನ್ನಾಗಿ ಬದುಕ ಬೇಕೆಂಬ ದುರಾಸೆ. ಇನ್ನು ಕೆಲವರಿಗೆ ತಮಗೆ ಬೇಕಾದ್ದು ಸಿಗಲಿಲ್ಲ ಎಂಬ ನಿರಾಸೆ. ಇದರ ನಡುವೆ ತನಗಾಗಿ ಯಾವ ತರಹದ ಆಸೆಯನ್ನೂ ಇಟ್ಟುಕೊಳ್ಳದೆ ಬದುಕೆಲ್ಲಾ ಮತ್ತೊಬ್ಬರಿಗಾಗಿ ಜೀವ ಸವೆಸುವ ಜನಗಳೂ ಇರುತ್ತಾರೆ. ಹಾಗೆಯೇ ಕೆಲವರು ಅಪ್ಪ ಅಮ್ಮ ಇರುವಾಗ ಅದರ ಬೆಲೆಯೇ ತಿಳಿಯದೆ ನಡೆದುಕೊಳ್ಳುವವರು, ಕೆಲವರು ಬದುಕನ್ನು ಅರ್ಥಮಾಡಿಕೊಂಡು ಅವರನ್ನು ಚೆನ್ನಾಗಿ ನೋಡಿಕೊಳ್ಳುವವರು, ಇನ್ನು ಕೆಲವರು ಅಪ್ಪ ಅಮ್ಮನ ಪ್ರೀತಿಯಿಂದಲೇ ವಂಚಿತರಾದವರು ಇರುತ್ತಾರೆ. ಇದರ ನಡುವೆ ಅಪ್ಪ ಅಮ್ಮ ಯಾರು ಎಂದೇ ತಿಳಿಯದವರ ಸಂಕಟದ ಆಳ ಅನುಭವಿಸಿದವರಿಗಷ್ಟೇ ಗೊತ್ತು. ಹೆತ್ತವರೆಂದು ಭಾವಿಸಿದವರೇ ಹೆತ್ತವರಲ್ಲ ಎಂದು ತಿಳಿದಾಗ, ಅದರಲ್ಲೂ ಹೆತ್ತವರೆಂದು ತಿಳಿದವರಿಗೂ ಅದರ ಬಗ್ಗೆ ತಿಳಿಯದಿರುವಂಥಾ ಪರಿಸ್ಥಿತಿ ನಿರ್ಮಾಣವಾದರೆ ಏಳುವ ಪ್ರಶ್ನೆಗಳು ಬಹಳ. ಬರುವ ನೋವು, ಆಗುವ-ಸಂಕಟ ಅಗಾಧ. ಹಾಗಾದಾಗ ಮೊದಲೆಲ್ಲಾ ವೈಜ್ಞಾನಿಕ ವಿಧಾನದಿಂದ ತಮ್ಮ ನಿಜವಾದ ಅಪ್ಪ ಅಮ್ಮ ಯಾರು ಎಂದು ತಿಳಿಯಲು ಸಾಧ್ಯವಿರಲಿಲ್ಲ. ಈಗ ವಿಜ್ಞಾನ ಮುಂದುವರೆದಂತೆ ಡಿ.ಎನ್.ಎ.ಟೆಸ್ಟ್ ಮೂಲಕ ಅದನ್ನೂ ತಿಳಿಯಲು ಸಾಧ್ಯವಿದೆ. ಅಂಥಾ ಸಂದರ್ಭ ಬಂದು ಅದರ ಹಿಂದೆ ಹೋದಾಗ ಎಂತೆಂಥಹಾ ರೋಚಕ ಸನ್ನಿವೇಶಗಳು ಎದುರಾಗುತ್ತವೆ? ಮತ್ತು ಅದರ ಪರಿಹಾರಕ್ಕೆ ನಿಜವಾದ ವಿದ್ಯಾವಂತರಾದವರು ಹೇಗೆ ಪ್ರತಿಕ್ರಿಯಿಸುತ್ತಾರೆ? ಕಷ್ಟಕರ ಸನ್ನಿವೇಶಗಳನ್ನು ತಿಳುವಳಿಕೆಯಿಂದ ಹೇಗೆ ಪರಿವರ್ತಿಸಿಕೊಳ್ಳಬಹುದು? ಎನ್ನುವ ಕಥಾವಸ್ತುವೇ ಈ ಕಾದಂಬರಿಯದ್ದು. ಜೊತೆಗೆ ಮಲೆನಾಡಿನ ಬದುಕಿನೊಂದಿಗೆ `ಕಪ್ಪುಚಿನ್ನ’ ಎಂದು ಹೆಸರು ಪಡೆದ ಕಾಳುಮೆಣಸಿನ ರೋಚಕ ಇತಿಹಾಸವೂ ಅಡಕವಾಗಿದೆ.