
ಜಯ
Giraddi Govindaraj$7.86 $4.72
Product details
Category | Stories |
---|---|
Author | Giraddi Govindaraj |
Publisher | Manohara Granthamala |
Translator | Giraddi Govindaraj |
Language | Kannada |
Book Format | Ebook |
Pages | 384 |
Year Published | 2015 |
`ಜಯ’ ವ್ಯಾಸಭಾರತದ ಸಂಗ್ರಹವಲ್ಲ. ಅಂಥ ನಿಷ್ಠ ಸಂಗ್ರಹಕ್ಕೆ ನಮ್ಮ ಎ.ಆರ್. ಕೃಷ್ಣಶಾಸ್ತ್ರಿಗಳ “ವಚನಭಾರತ” ಇಂದಿಗೂ ಮಾದರಿಯ ಕೃತಿ. ಪಟ್ಟನಾಯಕರು ಮೂಲಕಥೆಯ ಹಂದರವನ್ನು ಹಾಗೇ ಉಳಿಸಿಕೊಂಡಿದ್ದಾರೆ. ಅಲ್ಲಿ ನಡೆಯುವುದೆಲ್ಲ ಸಂಕ್ಷಿಪ್ತವಾಗಿ ಇಲ್ಲಿಯೂ ನಡೆಯುತ್ತದೆ. ಮಹತ್ವದ ಉಪಾಖ್ಯಾನಗಳೆಲ್ಲ ಇಲ್ಲಿ ಜಾಗ ಪಡೆದುಕೊಂಡಿವೆ. ಜೊತೆಗೆ ಅಲ್ಲಿ ನಡೆಯದ ಕೆಲವು ರೋಚಕಪ್ರಸಂಗಗಳು ಇಲ್ಲಿ ನಡೆಯುತ್ತವೆ.
ಮೂಲದಲ್ಲಿ ಜಯ ಎಂದು ಹೆಸರು ಹೊಂದಿದ್ದ ಭಾರತದೇಶದ ಮಹಾನ್ಕಾವ್ಯವಾದ ಮಹಾಭಾರತದ ಈ ಮರುಕಥನದಲ್ಲಿ ದೇವದತ್ತ ಪಟ್ಟನಾಯಕರು ಸಂಸ್ಕøತದ ಅಭಿಜಾತ ಕೃತಿಯಾದ ವ್ಯಾಸಭಾರತದ ಜೊತೆಗೆ, ಛತ್ತೀಸಗಢದ ಪಾಂಡವಾನಿ, ಮಹಾರಾಷ್ಟ್ರದ ಗೋಂಧಳೆ, ತಮಿಳುನಾಡಿನ ತೆರುಕ್ಕೊತ್ತು, ಕರ್ನಾಟಕದ ಯಕ್ಷಗಾನಗಳನ್ನು ಒಳಗೊಂಡು ಮಹಾಭಾರತದ ಅನೇಕ ಮೌಖಿಕ ಮತ್ತು ಪ್ರಾದೇಶಿಕ ಕಥಾಂತರಗಳನ್ನು ಒಳಗೊಂಡು ಮಹಾಭಾರತದ ಅನೇಕ ಮೌಲಿಕ ಮತ್ತು ಪ್ರಾದೇಶಿಕ ಕಥಾಂತರಗಳನ್ನು ಒಂದೇ ಕಥಾಸಂವಿಧಾನದಲ್ಲಿ ಹೊಲಿಗೆ ಕಾಣದಂತೆ ನೇಯ್ದಿದ್ದಾರೆ.
ಸ್ವತಃ ಪಟ್ಟನಾಯಕರೇ ರಚಿಸಿರುವ 250ಕ್ಕೂ ಹೆಚ್ಚಿನ ರೇಖಾಚಿತ್ರಗಳಿಂದ ಶ್ರೀಮಂತವಾಗಿರುವ ಈ ಗ್ರಂಥದ 108 ಅಧ್ಯಾಯಗಳು ಕೌರವರ ನೂರು ಹೆಸರುಗಳು, ದ್ರೌಪದಿಯನ್ನು ದೇವತೆ ಎಂದು ಪೂಜಿಸುವ ತಮಿಳುನಾಡಿನ ಆರಾಧನೆ, ಆಸ್ತಿಕ, ಮಾಧವಿ, ಜೈಮಿನಿ, ಇರಾವಂತ, ಬರ್ಬರೀಕ ಕಥೆಗಳು, `ಶಾಕುಂತಲ’ ಮತ್ತು ರಾಮಾಯಣಗಳ ಮಹಾಭಾರತದ ಮೂಲ ರೂಪಗಳು, ಖಗೋಳ ವಿಜ್ಞಾನದ ಆಧಾರದ ಮೇಲೆ ನಿರ್ಧರಿಸಿರುವ ಮಹಾಭಾರತದ ಯುದ್ಧದ ಕಾಲನಿರ್ಣಯ ಮೊದಲಾದ ಅನೇಕ ಅಪರಿಚಿತ ವಿವರಗಳಿಂದ ಸಮೃದ್ಧವಾಗಿದೆ.
ಈ ಆಕರ್ಷಕ ಸಂಪುಟದಲ್ಲಿ ಸೇರಿರುವ ಕಥೆಗಳು ಮಹಾಭಾರತದ ಸರ್ವಕಾಲೀನ ಪ್ರಸ್ತುತತೆಯನ್ನು, ಮೂರು ಸಾವಿರ ವರ್ಷಗಳಿಗಿಂತ ಹೆಚ್ಚು ಕಾಲ ಭಾರತದ ವೈಚಾರಿಕತೆಯನ್ನು ರೂಪಿಸಿರುವ ಮನುಷ್ಯನ ಅವಸ್ಥೆಯನ್ನು ಕುರಿತ ಸಂಕೀರ್ಣ ಮತ್ತು ಅಸ್ವಸ್ಥ ಗೊಳಿಸುವ ಚಿಂತನೆಯನ್ನು ಸರಳವಾಗಿ ಮತ್ತು ಸ್ಪಷ್ಟವಾಗಿ ನಿರೂಪಿಸುತ್ತವೆ.
Customers also liked...
-
Kedambady Jathappa Rai
$0.97$0.58 -
Nagesh Kumar C S
$1.93$1.16 -
Nagesh Kumar C S
$0.83$0.51 -
U.R. Ananthamurthy
$5.80$4.64 -
Raghavendra Patil
$1.57$0.94 -
Basu Bevinagidad
$1.21$0.73