Your Cart

Need help? Call +91 9535015489

📖 Print books shipping available only in India. ✈ Flat rate shipping

ಕಾಮೋಲ

Ajit Hegde
$0.80

Product details

Author

Ajit Hegde

Publisher

Mangala Prakashana

Book Format

Ebook

Language

Kannada

Pages

128

Year Published

2019

Category

Short stories

ಬಾಲ್ಯದ ನೆನಪು, ಮುಗ್ಧತೆ, ಯೌವನದ ಭಾವತೀವ್ರತೆ, ಪ್ರೌಢಾವಸ್ಥೆಯ ಬುದ್ಧಿ- ಭಾವ, ವಾಸ್ತವ ಮತ್ತು ಕಲ್ಪನೆ ಮಿಶ್ರಿತವಾದ ಬರಹಗಳು ಕಥೆಯ ರೂಪದಲ್ಲಿ ಹೊರಬಂದಿವೆ. ಅಜಿತ್ ಹೆಗಡೆಯವರು ತಮ್ಮ ಕಥೆಗಳನ್ನು ವೃತ್ತಿ ಹಾಗೂ ಭೂ ಪ್ರದೇಶದ ಪರಿಧಿಯಿಂದ ಹೊರಕ್ಕೇ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. `ವಿಮೋಚನೆ’ ಹಾಗೂ ‘ಗುಪ್ತಗಾಮಿನಿ’ ಎನ್ನುವ ಕತೆಗಳಲ್ಲಿ ತುಸು ವೈದ್ಯಲೋಕದ ಛಾಯೆ, `ಮಗ್ದಷ್ಟೇ ಬದುಕು’ವಿನಲ್ಲಿ ಮಲೆನಾಡಿನ ತುಣುಕು ಬಿಟ್ಟರೆ ಅವರ ಕತೆಗಳೆಲ್ಲಾ ಸಾರ್ವತ್ರಿಕವಾದುದು. ವೈದ್ಯನಲ್ಲೂ ಒಬ್ಬ ಸಹಜ ಮನುಷ್ಯನಿದ್ದಾನೆ; ಎಲ್ಲೂ ಇರಬಹುದಾದ ಆ ಮನುಷ್ಯ ಉತ್ತರ ಕನ್ನಡದ ಆಸುಪಾಸಿನಲ್ಲೂ ಇದ್ದಾನೆ ಎನ್ನುವ ನಿಲುವಿನೊಂದಿಗೆ ಅವರು ಬರೆಯುತ್ತಾರೆ ಅನ್ನಿಸುತ್ತದೆ. ಬದುಕಿನ ಸಂಕೀರ್ಣತೆ, ಮನುಷ್ಯ ಸಂಬಂಧ, ವಿಚಾರಗಳ ಸಂಘರ್ಷ, ಮನೋವ್ಯಾಪಾರಗಳನ್ನೇ ಅವರ ಕಥೆಗಳ ಮೂಲದ್ರವ್ಯವಾಗಿ ಅವರು ಬಳಸಿಕೊಂಡಿದ್ದಾರೆ.`ಕೇತಕಿ’ ಸಿದ್ಧಾಂತಗಳ ದ್ವಂದ್ವದ ಸುತ್ತ ಸುಳಿಯುವ ಕತೆ.`ತನ್ನದೆಂಬ ಒಂದು ಸಣ್ಣ ವಸ್ತುವನ್ನೂ ಕಳೆದುಕೊಳ್ಳಲಿಚ್ಛಿಸದ ಮನುಷ್ಯ ತನ್ನಂತಹದೇ ಇನ್ನೊಂದು ಜೀವಿಯ ನೆಲೆಯನ್ನೇ ಧ್ವಂಸ ಮಾಡುವುದು ಎಂಥ ನ್ಯಾಯ?’ ಎನ್ನುವ ಪ್ರಶ್ನೆಯನ್ನು ಇನ್ನಷ್ಟು ಗಟ್ಟಿಯಾಗಿ ಕೇಳಿಕೊಳ್ಳುವಂತೆ ಮಾಡುವ ಕತೆ `ಗೂಡು’.