Your Cart

Need help? Call +91 9535015489

📖 Print books shipping available only in India. ✈ Flat rate shipping

ಕಥನ ಕುತೂಹಲ

M.S. Sriram
$8.00

Product details

Category

Stories

Author

M.S. Sriram

Publisher

Akshara Prakashana

Language

Kannada

Book Format

Ebook

Year Published

2016

ಕಥನ ಕುತೂಹಲ
ಈ ಸಂಕಲನದಲ್ಲಿರುವ ಹನ್ನೆರಡು ಲೇಖನಗಳು ತುಷಾರ ಮಾಸಪತ್ರಿಕೆಯಲ್ಲಿ ಒಂದು ವರ್ಷಕಾಲ ಸರಣಿಯಾಗಿ ಬಂದವು. ಚಿತ್ತಾಲರ ಕಥನ ತಂತ್ರದ ಬಗೆಗಿನ ಲೇಖನ ಮೊದಲಿಗೆ ಮಂಡಿಸಿದ್ದು ಮಹಾರಾಣಿ ಲಕ್ಷ್ಮೀದೇವಿ ಅಮ್ಮಣ್ಣಿ ಕಾಲೇಜಿನ ಸೆಮಿನಾರಿನಲ್ಲಿ. ಅದೇ ಲೇಖನವು ನಂತರ ಉದಯವಾಣಿಯಲ್ಲಿ ಪ್ರಕಟಗೊಂಡಿತು. ಹಾಗೆಯೇ ಚಿತ್ತಾಲರ ಕಥಾ ಸಾಹಿತ್ಯದ ಬಗ್ಗೆ ರಾಜೇಂದ್ರ ಚೆನ್ನಿಯವರು ಸಂಪಾದಿಸಿದ ಪುಸ್ತಕದಲ್ಲೂ ಪ್ರಕಟವಾಗಿದೆ. ಉಂಬರ್ಟೋ ಇಕೋನ ಬಗೆಗಿನ ಲೇಖನವು ಗಾಂಧಿಬಜಾರ್ ಪತ್ರಿಕೆಯಲ್ಲಿ ಪ್ರಕಟವಾಯಿತು.
ಕನ್ನಡದ ಕಥನ ಪರಂಪರೆ ತುಂಬ ಸಮೃದ್ಧವಾಗಿದ್ದರೂ ಕಥನ ಕಲೆಯನ್ನು ಕುರಿತ ಬರಹಗಳು ತೀರಾ ಕಡಿಮೆ ಎಂದೇ ಹೇಳಬೇಕು. ಪಂಪ, ಕುಮಾರವ್ಯಾಸ ಮುಂತಾಗಿ ನಮ್ಮ ಆಧುನಿಕಪೂರ್ವ ಕವಿಗಳು ತಮ್ಮ ಕಥನದ ಆಶಯ, ಸ್ವರೂಪಗಳ ಬಗ್ಗೆ ತಮ್ಮ ಕಾವ್ಯದಲ್ಲೇ ಅರ್ಥಪೂರ್ಣವಾದ ಸೂಚನೆಗಳನ್ನು ನೀಡಿರುವುದು ಉಂಟು.
ಕಥನ ಕುತೂಹಲ ಅವರ ನಾಲ್ಕನೆಯ ಪ್ರಬಂಧ ಸಂಕಲನ ಹಾಗೂ ಕನ್ನಡದಲ್ಲಿ ಒಂಬತ್ತನೆಯ ಕೃತಿ.