ಕಥನ ಕುತೂಹಲ
(ಕಥಾ ಸಂಕಲನ)

ಲೇ: ರಾಜೇಂದ್ರ.ಬಿ.ಶೆಟ್ಟಿ.

ಹಲವು ಚಿಕ್ಕ ಕಥೆಗಳು, ಕೆಲವು ತುಸು ದೀರ್ಘ ಕಥೆಗಳು, ಅಷ್ಟೇ ಸರಳ ರೂಪ. ವೇಗದ ಜಗತ್ತಿನಲ್ಲಿ ಬಿಡುವಿಲ್ಲದ ಜನತೆಗೆ ಶೆಟ್ಟಿಯವರ ಕಥೆಗಳ ಅವಶ್ಯವಿದೆ. ಮೇಲ್ನೋಟದಲ್ಲಿ ಕಾಲ್ಪನಿಕ ಕಥೆಗಳಂತೆ ಕಂಡರು ಆಂತರ್ಯದಲ್ಲಿ ಸತ್ಯ ಘಟನೆಗಳಂತೆ ತೋರುತ್ತವೆ. ಭೂತ ಪ್ರೇತದ ಅಸ್ಮಿತೆ ಕಥೆಯಾಗಿರಬಹುದು,ಸ್ನೇಹಮಯಿ,ನಿಗೂಢರಾತ್ರಿ ಕಥೆಯಾಗಿರಬಹುದು. ಇವೆಲ್ಲ ಮೇಲಿನ ಮಾತಿಗೆ ಉದಾಹರಣೆಯಾಗಿವೆ.
ಹೆಂಗರುಳು ಕಥೆಯಲ್ಲಿ ರವಿಯ ಬೆಳದ ವಾತಾವರಣ, ಸ್ತ್ರೀಪಾತ್ರ ಅಭಿನಯ, ಮದುವೆ, ಮಕ್ಕಳು ಮತ್ತು ಡಿವೋರ್ಸ ಹಾದಿ ಹಿಡಿದು ,ಹೆಂಡತಿ ಮರಳಿ ಬಂದು ಓದುಗನ ಮನ ಗೆಲ್ಲುವುದಿದೆಯಲ್ಲ ಅದು ವರ್ಣಿಸಲಸಾಧ್ಯ. ಹೀಗೆ ಸಣ್ಣ ಕಥೆಗಳಲ್ಲಿ ರೋಚಕತೆ,ನೀತಿಪಾಠಗಳು, ಜೀವನಾನುಭವಗಳು ಓದಬೇಕೆಂದನಿಸಿದರೆ ನೀವು ಲೇಖಕ ರಾಜೇಂದ್ರ.ಬಿ.ಶೆಟ್ಟಿಯವರ ಪುಸ್ತಕ ಕೈಗೆತ್ತಿಕೊಳ್ಳಲೇ ಬೇಕು.

Additional information

Category

Author

Publisher

Book Format

Ebook

Language

Kannada

Pages

152

Year Published

2020

Reviews

There are no reviews yet.

Only logged in customers who have purchased this product may leave a review.