ಹತ್ತು ಕಥೆಗಾರ್ತಿಯರ ಹದಿನಾಲ್ಕು ಕಥೆಗಳು
(ಪರಿಚಯ – ಪ್ರಾಸ್ತಾವಿಕ – ಕಥೆ – ಸಂದರ್ಶನ)

ಮಲಯಾಳ ಸಾಹಿತ್ಯಾಂತರಿಕ್ಷದ ಒಂದು ನಕ್ಷತ್ರಪುಂಜವನ್ನು ಹತ್ತಿರದಿಂದ ಅಧ್ಯಯನ ಮಾಡಿ ತಾವು  ಕಂಡ ಸತ್ಯಗಳನ್ನು ಈ ಕೃತಿಯಲ್ಲಿ ದಾಖಲಿಸಿ ದ್ದಾರೆ.   ಕಥೆಗಾರ್ತಿಯರೆಂಬ ಸಾಮಾನ್ಯ ನಾಮಧೇಯದಿಂದ ನಾವು ಗುರುತಿಸುವ ಈ ಒಂದೊಂದು ನಕ್ಷತ್ರಗಳಿಗೂ ಎಂತಹ ಘನವಾದ ವ್ಯಕ್ತಿತ್ವವಿದೆ; ಅದು ಎಷ್ಟೊಂದು ಬಹುಮುಖಿಯಾಗಿದೆ !

ದೇಹದೊಳಗೆ ಸೇರಿಕೊಳ್ಳುವ ಹೊರಜಗತ್ತಿನ ಮಾಲಿನ್ಯವನ್ನಲ್ಲವೇ ಕಡಲ ಚಿಪ್ಪು ಮುತ್ತಾಗಿ ಪರಿವರ್ತಿಸುವುದು? ಅದೇರೀತಿ ಬದುಕು ಮತ್ತು ಸಮಾಜಗಳು ಕೊಟ್ಟ ನೋವು- ಆಘಾತಗಳನ್ನು ಅನೇಕ ಲೇಖಕಿಯರು ಬೆಳಕು ಸೂಸುವ ಕತೆಗಳಾಗಿ ಪರಿವರ್ತಿಸಿದ್ದಾರೆ.

ಸೂರ್ಯನ ಪ್ರಜ್ವಲಿಸುವ ಕೋಪವಿಲ್ಲದೆ, ಬೆಳದಿಂಗಳಿನ ಪರಾವಲಂಬನವಿಲ್ಲದೆ, ಸುತ್ತಲೂ ಶಾಂತವಾದ ಬೆಳಕನ್ನು ಹರಿಸಿ, ಪ್ರಕಾರಸೂಸುವ ಕಣ್ಣುಗಳಲ್ಲಿ ಕಾಂತಿ ಚಿಮ್ಮಿಸಿ, ತಮ್ಮ
ನೋವು-ಅರಿವುಗಳನ್ನು ಕಥೆಗಳಾಗಿ ಪ್ರಸ್ತುತಪಡಿಸಲು ಪ್ರಯತ್ನಿಸುವ ಬೆರಳೆಣಿಕೆಯ ನಕ್ಷತ್ರಗಳು ನಮ್ಮ ಕಥೆಗಾರ್ತಿಯರು. ಇವರ ನಿರ್ಮಲವಾದ ತೇಜಸ್ಸಿಲ್ಲದಿದ್ದರೆ ನಕ್ಷತ್ರಗಳಿಲ್ಲದ
ಆಕಾಶದ ವಾಗೆ ನೀರಸ ಪಾಗೂ ತೇಜೋಹೀನವಾಗಿ ಕಾಣಿಸಬಹುದು ಮಲಯಾಳದ ಕಥಾ ಅಂತರಿಕ್ಷ !

ಒಂದು ಮಗು ಹುಟ್ಟಿದ ಕೂಡಲೇ ಹೆಕ್ಟೋ ಗಂಡೋ ಎಂಬ ಪ್ರಶ್ನೆಯೊಂದಿಗೆ ಅದನ್ನು ಸ್ವಾಗತಿಸುವ ಸಮಾಜವು ಒಮ್ಮೆಯೂ ಹೆಣ್ಣಿಗೆ ತನ್ನ ಸ್ತ್ರೀತ್ವವನ್ನು ಮರೆಯಲು ಬಿಡುವುದಿಲ್ಲ. “ಅಂತಹ ಸ್ಥಿತಿಯಲ್ಲಿ ಬರವಣಿಗೆಯಲ್ಲಿ ನಿಷ್ಪಕ್ಷಪಾತ ತೋರಿಸಲು ಸ್ತ್ರೀಗೆ ಸಾಧ್ಯವೆ ಚಂದ್ರಿಕಾರ ಅಭಿಪ್ರಾಯದಲ್ಲಿ ಮಲಯಾಳದ ಅತ್ಯಂತ ಸುಂದರ ಪದಗಳಲ್ಲಿ ಒಂದು ಮಹಿಳೆ ಮತ್ತು ಸಾಹಿತ್ಯವೆಂಬ ಎರಡು ಪದಗಳು ಒಟ್ಟು ಸೇರುವಾಗ ‘ಮಹಿಳಾ ಸಾಹಿತ್ಯ’ ಎಂದಾಗುತ್ತದೆ. ಮಹಿಳೆ ಎಂಬ ಶಬ್ದಕ್ಕೆ ಕೀಳು ಎಂಬ ಧ್ವನಿಯಿದೆಯೆಂದು ಎಣಿಸುವುದಿಲ್ಲ.

ನಮ್ಮ ಹತ್ತಿರ ಅವರು ಹೇಗೆ ವರ್ತಿಸುತ್ತಾರೆಂಬುದನ್ನನುಸರಿಸಿ ನಮ್ಮ ಪ್ರತಿಕ್ರಿಯೆ ಇರುತ್ತದೆ. ನನ್ನನ್ನು ಬಸ್ಸಿನಲ್ಲಿ, ಪ್ರಯಾಣದಲ್ಲಿ, ಅಥವಾ ದಾರಿಯಲ್ಲಿ ಯಾವುದೇ ರೀತಿಯ ವ್ಯಕ್ತಿ ಗೌರವ ತೋರಿಸದೆ ಬರೇ ಹೆಣ್ಣು, ಕಾಮದಾಹವನ್ನು ಹಿಂಗಿಸಲಿಕ್ಕಾಗಿ ಉಪಯೋಗಿಸುವ ಒಂದು ವಸ್ತು ಎಂಬ ರೀತಿಯಲ್ಲಿ ಪುರುಷ ಜಗತ್ತು ನೋಡುತ್ತದೆ ಎಂದಾದರೆ ನಾನು ಖಂಡಿತವಾಗಿಯೂ ಸ್ವಾತಂತ್ರ್ಯ ಬೇಕೆಂದು ವಾದಿಸುತ್ತೇನೆ. ಗಂಡ ಹಿಂದಿನ ದಿನ ಪಾನಮತ್ತನಾಗಿ ಬಂದು ನನ್ನ ಗೆಳತಿ ಬರುವುದನ್ನು ಕೆಟ್ಟ ನೋಟದಿಂದ ನೋಡಿದರೆ ಆಗಲೂ ನಾನು ಸ್ತ್ರೀವಾದಿ.

Additional information

Category

Translator

Parvathi G. Aithal

Book Format

Ebook

Pages

256

Publisher

Language

Kannada

ISBN

978-93-81244-52-4

Author

Reviews

There are no reviews yet.

Only logged in customers who have purchased this product may leave a review.