
ಮಠದ ಹೋರಿ ಮತ್ತು ಈವರೆಗಿನ ಕತೆಗಳು
Hanumanta Haligeri$2.90 $1.74
Product details
Category | Stories |
---|---|
Author | Hanumanta Haligeri |
Publisher | VIVIDLIPI |
Language | Kannada |
Book Format | Ebook |
ಕತೆಗಾರನ ಮಾತಿನಲ್ಲಿ ಹನುಮಂತ ಹಾಲಿಗೇರಿ ಹೇಳಿಕೊಂಡಿರುವಂತೆ “ಇಲ್ಲಿನ ಎಲ್ಲ ಕತೆಗಳು ನಮ್ಮೂರು ಸೀಮೆಯಲ್ಲಿ ನೆಡಯುವಂಥವೆ. ಕಥೆ ನನ್ನೊಳಗಡೆ ಹುಟ್ಟುವುದಿಲ್ಲ . ದಿನನಿತ್ಯದ ಬದುಕಿನಲ್ಲಿ ಸಂಭವಿಸಿ, ನನ್ನೊಳಗೆ ಬೆಳೆದು ಕಥೆಯಾಗಿ ಹರಡಿಕೊಳ್ಳುತ್ತದೆ. ನನ್ನೂರು ಸೀಮೆಯಲ್ಲಿ ಇಲ್ಲಿನ ಪಾತ್ರಗಳೆಲ್ಲವೂ ಇನ್ನೂ ಜೀವಂತವಾಗಿವೆ. ಕಥೆಗಳಲ್ಲಿ ಅವುಗಳ ಸಂಕಷ್ಟ ಒಂದು ತಹಬಂದಿಗೆ ಬಂದಿದ್ದರೂ ಬದುಕಿನಲಿ ಇನ್ನೂ ಮುಂದುವರಿದೇ ಇದೆ.
ಓದುಗನಿಗೆ ಮನರಂಜನೆ ನೀಡುವುದಕ್ಕಾಗಿ ನನ್ನಂಥವರು ಕಥೆ ಕಟ್ಟುವುದಿಲ್ಲ. ಈ ಕತೆಗಳನ್ನು ಓದುವವರ ಮನದಲ್ಲಿ ರಂಜನೆ ಹುಟ್ಟುವುದಕ್ಕಿಂತಲೂ ತಳಮಳ ಹುಟ್ಟಿದರೆ, ಚಿಂತೆನೆಗ ಹಚ್ಚಿದರೆ ಅಷ್ಟರಮಟ್ಟಿಗೆ ಈ ಕತೆಗಳು ಸಾರ್ಥಕ್ಕೆ ಕಂಡಂತೆ.”
“ಕೇರಿ ಗಾಯಕ್ಕೆ ಕೆಂಡದ ಮುಲಾಮು…..” ಎನ್ನುವ ಕಥೆ ವರ್ತಮಾನದ ಸಂದಿಗ್ದಗಳನ್ನು ಕತೆ ಮಾಡಿ ಹೇಳುವ ಹನುಮಂತ ಹಾಲಿಗೇರಿಯ ಹಂಬಲಕ್ಕೆ ಮತ್ತೊಂದು ಒಳ್ಳೆಯ ಉದಾಹರಣೆಯಾಗಿದೆ.
‘ಕಾಂಕ್ರೀಟ್ ಹಕ್ಕಿಯ ಮೊಟ್ಟೆಗಳು’ ಕತೆ ಕೂಡ ವರ್ತಮಾನದ ಮತ್ತೊಂದು ಸಮಸ್ಯೆಯ ಚಿತ್ರಣವನ್ನು ಕೈಗೆತ್ತಿಕೊಂಡಿದೆ. ಕಾರ್ಖಾನೆ ಕಟ್ಟಲಿಕ್ಕಾಗಿ ಭೂಸ್ವಧೀನ ಮಾಡಿಕೊಳ್ಳುವ ಪ್ರಸ್ತಾಪ ಬರುವುದರೊಂದಿಗೆ ಶುರುವಾಗುವ ಕತೆ ಬಡ ರೈತ ಕಲ್ಲಜ್ಜನ ಮನೆಯ ಕತೆಯೊಂದಿಗೆ ಮುಂದುವರಿಯುತ್ತದೆ.
‘ಸಂವಿಧಾನ ಮತ್ತು ರಣಹದ್ದು’ ಕಥೆಯ ಹಂದರ ಸ್ವಲ್ಪ ಮಟ್ಟಿಗೆ ನಾಟಕೀಯವಾಗಿದೆಯಾದರೂ, ಮುಗ್ಧ ಹುಡುಗನೊಬ್ಬನ ಬಾಲ್ಯ ರಾಜಕೀಯ ಜಿದ್ದಾಜಿದ್ದಿನ ಪೈಪೋಟಿಯಲ್ಲಿ ನಶಿಸಿಹೋಗುವ ದಾರುಣ ಚಿತ್ರಣವನ್ನು ಕೊಡುತ್ತದೆ.
‘ಬೆಂಕಿ ಉಗುಳುವ ಪಂಕ’ ಕತೆ ಪ್ರಸ್ತುತ ಚಾಲ್ತಿಯಲ್ಲಿರುವ ಅಭಿವೃದ್ದಿ ಹೆಸರಿನ ಆಟಾಟೋಪಗಳಿಗೆ ಬಲಿಯಾಗಿ ತಮ್ಮ ಬದುಕಿನ ಊಲಾಧಾರಗಳಿಗೆ ಎರವಾಗುತ್ತಿರುವ ಜನ ಸಮುದಾಯಗಳ ವೇದನೆಯನ್ನು ಮಂಡಿಸುತ್ತಿದೆ.
‘ಡೈರಿ ಹಾಲಿಗೆ ಹುಳಿ ಬಿತ್ತು’ ಎಂಬ ಕತೆಯೂ ಕೂಡ, ಗ್ರಾಮೀಣ ಜನಜೀವನದಲ್ಲಿ ಹೊಸ ಬೆಳವಣಿಗೆಯ ವಿದ್ಯಮಾನಗಳು ಉಂಟು ಮಾಡುತ್ತಿರುವ ಪಲ್ಲಟಗಳನ್ನು , ಆ ಪಲ್ಲಟಗಳ ಹಿಂದೆ ಕ್ರಿಯಾಶೀಲವಾಗಿರುವ ವಿಭಿನ್ನ ಪ್ರೇರಕಾಂಶಗಳನ್ನೂ, ಅವುಗಳಿಂದ ಲಾಭ ಪಡೆಯುತ್ತಿರುವವರು, ಹಾನಿಗೊಳಗಾಗುತ್ತಿರುವ ಬೇರೆ ಬೇರೆ ಹಿತಾಸಕ್ತಿಗಳನ್ನು ಒಂದು ವಾಸ್ತವಾನುಭವದಂತೆ ದಾಖಲಿಸಿದೆ.
Customers also liked...
-
Kedambady Jathappa Rai
$0.97$0.58 -
Nagesh Kumar C S
$1.93$1.16 -
K.V. Savitramma
$8.00 -
Kaveri S. S
$0.79$0.47 -
Jayashree Kasaravalli
$1.33$0.80 -
K. Satyanarayana
$1.93$1.16