Your Cart

Need help? Call +91 9535015489

📖 Print books shipping available only in India. ✈ Flat rate shipping

ಒಂದು ಅರ್ಥಪೂರ್ಣ ಸತ್ಯ

Himanshu Joshi
$1.09

Product details

Author

Himanshu Joshi

Translator

J S Kusumageeta

Publisher

Nava Karnataka

Book Format

Ebook

Language

Kannada

Pages

124

Year Published

2021

Category

Stories

ಖ್ಯಾತ ಹಿಂದಿ ಲೇಖಕ ಹಿಮಾಂಶು ಜೋಶಿ ಅವರ ಕಥಾ ಜಗತ್ತು ಅತ್ಯಂತ ವ್ಯಾಪಕ. ವಿವಿಧ ಆಯಾಮಗಳನ್ನೊಳಗೊಂಡ ಇವರ ಕೃತಿಗಳಲ್ಲಿ ಜೀವನದ ಯಥಾರ್ಥ ಸಹಜವಾಗಿ ಮೂಡಿ ಬಂದಿದೆ. ಇವರ ಸಜೀವ ಪಾತ್ರಗಳ ದರ್ಪಣದಲ್ಲಿ ಪ್ರತಿಬಿಂಬಿತಗೊಂಡಿರುವ ಜಗತ್ತು ಓದುಗನಿಗೆ ತನ್ನ ಸುತ್ತಮುತ್ತಲಿನದೇ ಎನಿಸತೊಡಗುತ್ತದೆ- ತನ್ನದೇ ಅನುಭೂತಿಗಳ ವಿವಿಧ ಬಿಂಬಗಳಂತೆ. ಇಂದಿನ ಕಥಾಜಗತ್ತಿನಲ್ಲಿ ತನ್ನದೇ ಆದ ಒಂದು ಸ್ಥಾನವನ್ನು ಗುರುತಿಸಿಕೊಂಡಿರುವ ಈ ಕತೆಗಳಲ್ಲಿ ಮುಂಬರುವ ನಾಳಿನ ಕತೆಗಳ ಸ್ಪರೂಪದ ಹೊಳಪು ಕಾಣುತ್ತದೆ. ‘ಹಿಮಾಂಶು ಜೋಶಿ ಕೀ ಲೋಕಪ್ರಿಯ ಕಹಾನಿಯಾಂ’ ಮತ್ತು ‘ಸಾಗರ್ ತ‍ಟ್ ಕೇ ಶಹರ್’ -ಈ ಎರಡು ಕಥಾಸಂಕಲನಗಳಿಂದ ಆಯ್ದ ಹದಿನಾರು ಕತೆಗಳು ಲೇಖಕರ ಜೀವನಾನುಭವ ಹಾಗೂ ಅನುಭೂತಿಗಳಿಂದ ಸುತ್ತಮುತ್ತಲಿನ ಪರಿಸರ -ವಿಶೇಷವಾಗಿ ಪರ್ವತ ಪ್ರದೇಶ, ಜನಜೀವನ, ಮಣ್ಣಿನ ಸೊಗಡು, ಹೆಣ್ಣಿನ ಬವಣೆ, ಸ್ವಾತಂತ್ರ್ಯ ಹೋರಾಟಗಾರರ ನೋವು ಹಾಗೂ ಹಿರಿಯ ನಾಗರಿಕರ ಅಸಹಾಯಕತೆ-ಇವುಗಳನ್ನು ನಾನಾ ರೂಪಗಳಲ್ಲಿ, ನಾನಾ ಬಣ್ಣಗಳಲ್ಲಿ ಚಿತ್ರಿಸಿದ್ದಾರೆ. ಕನ್ನಡದ ಓದುಗರ ಆಸ್ವಾದನೆಗಾಗಿ ಹಿಂದಿಕತೆಗಳನ್ನು ಅನುವಾದಿಸಿದವರು ಡಾ.ಜೆ.ಎಸ್.ಕುಸುಮಗೀತ.