Your Cart

Need help? Call +91 9535015489

📖 Print books shipping available only in India. ✈ Flat rate shipping

ಪರಿತ್ಯಕ್ತ ಮತ್ತು ಇತರ ಕತೆಗಳು

Deepika Chate
$0.44

Product details

Category

Short stories

Author

Deepika Chate

Publisher

VIVIDLIPI

Language

Kannada

Book Format

Ebook

Year Published

2007

ಪರಿತ್ಯಕ್ತ ಮತ್ತು ಇತರ ಕತೆಗಳು
ಮೊದಲ ಸ್ಪಂದನ
ಕನ್ನಡದ ಸಣ್ಣ ಕಥಾ ಸಾಹಿತ್ಯದ ಪ್ರಕಾರಕ್ಕೆ ಕೇವಲ, ನೂರು ವರ್ಷದ ಚರಿತ್ರೆ ಇದೆ ಮತ್ತು ಶತಮಾನದ ಸಾಮಾಜಿಕ ಆಶಯಗಳು ಅನೇಕ ಕಥೆಗಳಲ್ಲಿ ಪ್ರತಿಫಲಿಸಿವೆ ಎಂಬುದು ಹೆಮ್ಮೆಯ ಅಂಶ. ರಂಜನೆ, ಬೋಧನೆಗಳ ಆಚೆಗೆ, ಸಮುದಾವನ್ನೇ ಸಂಚಲನಗೊಳಿಸಬಲ್ಲ ಕೊಡುಗೆಗಳೂ ಈ ಪ್ರಕಾರದಲ್ಲಿ ಸೇರಿವೆ ಎಂಬುದು ಸಣ್ಣ ಮಾತಲ್ಲ.
‘ಹೆಣ್ಣಿನ ಒಡಲು ಕಥೆಗಳ ಕಡಲು’ ಎಂಬ ಮಾತಿನ ಹೋದರೆ ಮಾನವನ ಸಾಮಾಜಿಕ ಬದುಕೇ ತೆರೆದುಕೊಳ್ಳುತ್ತದೆ. ಹೆಣ್ಣೇ ಕಥೆಗಳ ಮೂಲತರ್ಕ ಎಂದು ಸಮ್ಮತಿಸುವಂಥ ಸಾಮಾಜಿಕ ಹಿನ್ನೆಲೆ, ಗೋಚರಿಸುತ್ತದೆ.
ಒಂದು ಕಾಲಕ್ಕೆ ಸಾಮಾಜಿಕ ಪ್ರವೇಶವಂಚಿತಳಾದ ಮಹಿಳೆ, ಬಿಡುವಿನ ವೇಳೆಯನ್ನು ಮಕ್ಕಳಿಗೆ ಹಿಡಿಸುವ ರಮ್ಯ ಅದ್ಭುತ ಕಥೆಗಳ ರಚನೆಯಲ್ಲಿ ತೊಡಗಿದ್ದು ಇಂದು ಇತಿಹಾಸ, ಜಾನಪದ ರೀತಿಯಲ್ಲಿ ಕಥೆ ಹೇಳುವ ಅಜ್ಜಿಯವರಿಗಂತೂ ನಮ್ಮಲ್ಲಿ ಬರವಿಲ್ಲ. ನವೋದಯದಿಂದ ಆರಂಭವಾಗಿ, ಇಂದಿನವರೆಗೆ, ನವ್ಯೋತ್ತರವರೆಗೆ ಕಥಾ ಸಾಹಿತ್ಯದ ಹರಹಿದೆ.
ಇವರ ‘ಪರಿತ್ಯಕ್ತ ಮತ್ತು ಇತರ ಕಥೆಗಳು’ ಎಂಬ ಪ್ರಥಮ ಕಥಾ ಸಂಕಲನದಲ್ಲಿ ಆಧುನಿಕ ಪರಿಸರದಲ್ಲಿ ಮಹಿಳಾ ಸಂವೇದನೆ ಕುರಿತ ಕಥೆಗಳೇ ಇವೆ. ವಿವಿಧ ಪತ್ರಿಕೆಗಳಲ್ಲಿ ಅನೇಕ ವೈಚಾರಿಕ ಲೇಖನಗಳನ್ನು ಪ್ರಕಟಿಸಿದ ಲೇಖಕಿ ಅದರ ಮುಂಬಡ್ತಿ ಎಂಬಂತೆ ಕಥೆಗಳಿಗೆ ಕೈ ಇಕ್ಕಿರುವುದು ಸಹಜವೇ ಆಗಿದೆ. ಹತ್ತು ಕಥೆಗಳ ಹರಹಿನಲ್ಲಿ ಅವರ ಅನುಭವಗಳು ಅನಾವರಣಗೊಂಡಿವೆ.