ಶ್ರೀನಿವಾಸ ವೈದ್ಯ
ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ೧೯೩೬ ಏಪ್ರಿಲ್ ೪ರಂದು ಜನಿಸಿದ ಶ್ರೀನಿವಾಸ ವೈದ್ಯ ಅವರು ಧಾರವಾಡದಲ್ಲಿ ವಿದ್ಯಾಭ್ಯಾಸ ಮಾಡಿ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದು ನಿವೃತ್ತರಾದವರು. ಇವರ ಹೆಚ್ಚಿನ ಬರವಣಿಗೆಗಳು ಆರಂಭವಾಗಿದ್ದೇ ಇವರ ವೃತ್ತಿ-ನಿವೃತ್ತಿಯ ಸುಮಾರಿಗೆ. ಶೀನೂ ಎಂಬ ಕಾವ್ಯನಾಮದೊಂದಿಗೆ ‘ಅಪರಂಜಿ’ ಪತ್ರಿಕೆಯಲ್ಲಿ ಹಾಸ್ಯಪ್ರಧಾನ ಬರಹಗಳಿಂದ ಆರಂಭಿಸಿದ ವೈದ್ಯ ಅವರು, ಬಳಿಕ, ಲಘು-ಗಂಭೀರವೆಂದು ವಿಭಾಗ ಮಾಡಲಾಗದ ಹಾಗೂ ಕಥೆ-ಪ್ರಬಂಧಗಳೆಂದು ಪ್ರತ್ಯೇಕಿಸಲಾಗದ ವಿಶಿಷ್ಟ ಬರಹಗಳನ್ನು ರಚಿಸುತ್ತ ಬಂದಿದ್ದಾರೆ. ‘ಹಳ್ಳ ಬಂತು ಹಳ್ಳ’ ಎಂಬ ಕಾದಂಬರಿಯನ್ನಲ್ಲದೆ ‘ತಲೆಗೊಂದು ತರತರ’, ‘ಮನಸುಖರಾಯನ ಮನಸು’, ‘ರುಚಿಗೆ ಹುಳಿಯೊಗರು’, ‘ಅಗ್ನಿಕಾರ್ಯ’ ಎಂಬ ನಾಲ್ಕು ಪ್ರಬಂಧ/ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಇವರ ‘ಹಳ್ಳ ಬಂತು ಹಳ್ಳ’ ಕಾದಂಬರಿಗೆ ರಾಜ್ಯ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳು ದೊರಕಿವೆ. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ವೈದ್ಯ ಅವರು ಸಾಹಿತ್ಯ-ಸಂಸ್ಕೃತಿ ಚಟುವಟಿಕೆಗಳನ್ನು ನಡೆಸುವ ‘ಸಂವಾದ’ ಸಂಸ್ಥೆಯ ರೂವಾರಿಯೂ ಆಗಿದ್ದಾರೆ.

ಪರಕಾಯ
ಶ್ರದ್ಧಾ
ತ್ರಯಸ್ಥ
ಗಂಡಭೇರುಂಡ
ರುದ್ರ​ಪ್ರಯಾಗ
ಸಹಪ್ರಯಾಣ
ಅಗ್ನಿಕಾರ್ಯ
ಶ್ರೀನಿವಾಸ ವೈದ್ಯ – ಮುಖ್ಯ ಕೃತಿಗಳು

 

Additional information

Category

Book Format

Ebook

Author

Language

Kannada

Publisher

Reviews

There are no reviews yet.

Only logged in customers who have purchased this product may leave a review.