ಅನಂತಮೂರ್ತಿಯವರ ಸಾಹಿತ್ಯ ಕೃಷಿ ತುಂಬ ಸಮೃದ್ಧವಾಗಿದೆ. ಅಂಥ ಕೆಲವು ಕೃತಿಗಳ ಬಗ್ಗೆ  ವಿವಿಧ ಪತ್ರಿಕೆಗಳಲ್ಲಿ ಬರೆದದ್ದೂ ಉಂಟು. ಹಿಂದಿನ ಪುಸ್ತಕ ಬರೆದ ಸುಮಾರು ಇಪ್ಪತ್ತು ವರುಷಗಳ ನಂತರ ಈಗ ಆ ಬರಹವನ್ನು ಪರಿಷ್ಕರಿಸಿದ್ದೇನೆ ಮತ್ತು ವಿಸ್ತರಿಸಿದ್ದೇನೆ. ಕಳೆದ ಇಪ್ಪತ್ತು ವರುಷಗಳಲ್ಲಿ ಪ್ರಕಟಿಸಿದ ಲೇಖನಗಳನ್ನು ಒತ್ತಟ್ಟಿಗೆ ತಂದಿರುವುದಲ್ಲದೆ ಈ ಸಂಪುಟಕ್ಕಾಗಿಯೇ ಹೊಸದಾಗಿ ಸಾಕಷ್ಟು  ಜೋಡಣೆಗೊಂಡು ‘ಅನಂತಮೂರ್ತಿ ವಾಙ್ಮಯ’ ಎಂಬ ಹೊಸ ಪುಸ್ತಕ ರೂಪುಗೊಂಡಿದೆ.  ಅನಂತಮೂರ್ತಿಯವರ ಮೊದಲ ಕೃತಿ “ಎಂದೆಂದೂ ಮುಗಿಯದ ಕಥೆ” ಎಂಬ ಆರು ಕಥೆಗಳ ಸಂಕಲನ ಪ್ರಕಟವಾದದ್ದು ೧೯೫೫ರಲ್ಲಿ. ಈ ಸಂಕಲನದ ಮೊದಲ ಕಥೆಯ ಶೀರ್ಷಿಕೆಯೂ “ಎಂದೆಂದೂ ಮುಗಿಯದ ಕಥೆ”. ಈ ಸಂಕಲನಕ್ಕೆ ಮುನ್ನುಡಿ ಬರೆದ ಗೋಪಾಲಕೃಷ್ಣ ಅಡಿಗರು ಎರಡು ಮುಖ್ಯ ಸಂಗತಿಗಳನ್ನು ಸೂಚಿಸಿದ್ದಾರೆ: ಇಲ್ಲಿನ ಕಥೆಗಳ ತಂತ್ರ ಹೊಚ್ಚ ಹೊಸದು; ಕನ್ನಡಕ್ಕೆ ನವ್ಯ ಎನ್ನುವಂಥದು… ಕವಿ ಮತ್ತು ಉತ್ತಮ ಕಥೆಗಾರ ಇವರ ನಡುವೆ ಯಾವ ವ್ಯತ್ಯಾಸವೂ ಇಲ್ಲ ಎಂಬ ಮಾತನ್ನು ಇಲ್ಲಿ ಈ ಕಥೆಗಳು ಸಾಧಿಸಿ ತೋರಿಸುತ್ತವೆ.

Additional information

Category

Book Format

Ebook

Author

Language

Kannada

Publisher

Reviews

There are no reviews yet.

Only logged in customers who have purchased this product may leave a review.