ಸಮಕಾಲೀನ ಭಾರತೀಯ ಲೇಖಕಿಯರಲ್ಲೇ ತುಂಬ ವಿಶಿಷ್ಟರೆಂದೂ, ಮಹತ್ವದವರೆಂದೂ ಮನ್ನಣೆ ಪಡೆದಿರುವ ಲೇಖಕಿ ವೈದೇಹಿ.  ವೈದೇಹಿ ಕಳೆದ ಮೂರು ದಶಕಗಳಲ್ಲಿ ಬೆಳೆದಿರುವ ಪರಿ ಒಂದು ಸಂತಸಭರಿತ ಅಚ್ಚರಿ. ಈ ಅವಧಿಯಲ್ಲಿ ಅವರ ಕಥನಕೌಶಲ ಮತ್ತು ಕಾವ್ಯ ಪ್ರತಿಭೆಗಳು ಹೊಸ ಎತ್ತರಗಳಿಗೆ ಏರಿರುವಂತೆ ಅವರ ಲೋಕಗ್ರಹಿಕೆ ಮತ್ತು ಲೋಕದೃಷ್ಟಿಗಳೂ ಹೆಚ್ಚು ಹೆಚ್ಚು ಸೂಕ್ಷ್ಮವಾಗುತ್ತ, ಪ್ರಬುದ್ಧವಾಗುತ್ತ ಬಂದಿವೆ. ಅಷ್ಟೇ ಅಲ್ಲ, ಈ ಅವಧಿಯಲ್ಲಿ ಅವರ ಸಾಹಿತ್ಯವು ಸಾಧಿಸಿಕೊಂಡಿರುವ ಪ್ರಕಾರವೈವಿಧ್ಯವೂ ಗಮನಾರ್ಹವಾಗಿದೆ. ಸಣ್ಣಕತೆಯಿಂದ ಆರಂಭವಾಗಿ ಕಾವ್ಯ, ಕಾದಂಬರಿ, ಪ್ರಬಂಧ, ಮಕ್ಕಳ ನಾಟಕ, ಅಂಕಣಬರಹಗಳಂಥ ವಿವಿಧ ಪ್ರಕಾರಗಳಲ್ಲಿ ವಿಸ್ತರಿಸಿಕೊಂಡಿರುವ ಅವರ ಪ್ರಯೋಗಶೀಲತೆ ಮತ್ತು ಸಾಧನೆ ಎದ್ದುಕಾಣುವಂತಿವೆ. ವೈದೇಹಿ ಬರಹಗಳ ಕೇಂದ್ರ ಹೆಣ್ಣು. ಈ ಹೆಣ್ಣು ವಿವಿಧ ಜಾತಿ, ವಯಸ್ಸು, ಅಂತಸ್ತು, ಸಂವೇದನೆಗಳಲ್ಲಿ ಕಾಣಿಸಿಕೊಳ್ಳುತ್ತಾಳೆ. ವೈದೇಹಿ ಹೆಣ್ಣಿನ ಸಿದ್ಧ ಮಾದರಿಯೊಂದನ್ನು ನಮ್ಮ ಮುಂದೆ ಇಡುತ್ತಿಲ್ಲ. ತೀರಾ ಸಂಪ್ರದಾಯಸ್ಥರಿಂದ ತೀರಾ ಆಧುನಿಕರವರೆಗೆ, ಅವಿವಾಹಿತೆಯರಿಂದ ವಿಧವೆಯರವರೆಗೆ, ಗೃಹಿಣಿಯರಿಂದ ವೇಶ್ಯೆಯರವರೆಗೆ ಈ ಪ್ರಪಂಚ ಹರಡಿಕೊಳ್ಳುತ್ತದೆ. ಇಲ್ಲಿ ವಿದ್ಯಾವಂತರು, ಅವಿದ್ಯಾವಂತರು, ಕಳ್ಳರು, ಹುಚ್ಚರು ಇದ್ದಾರೆ; ಶೋಷಿಸುವವರು, ಶೋಷಣೆಗೆ ಒಳಗಾದವರು ಇದ್ದಾರೆ. ಅಂದರೆ ವೈದೇಹಿ ಕತೆಗಳಲ್ಲಿ ಹೆಣ್ಣು ವಿವಿಧ ಆಕೃತಿಗಳಲ್ಲಿ, ಭಾವಸ್ಥಿತಿಗಳಲ್ಲಿ ಕಾಣಿಸಿಕೊಳ್ಳುತ್ತಾಳೆ.  ಇ ಪುಸ್ತಕವು  25 ಕಥೆಗಳನ್ನು ಒಳಗೊಂಡಿದೆ.

Additional information

Category

Book Format

Ebook

Author

Language

Kannada

Publisher

Reviews

There are no reviews yet.

Only logged in customers who have purchased this product may leave a review.