Your Cart

Need help? Call +91 9535015489

📖 Print books shipping available only in India. ✈ Flat rate shipping

ಭಾರತಯಾತ್ರೆ

D.T. Rangaswami
70.00

Product details

Category

Travelogue

Author

D.T. Rangaswami

Publisher

Samaja Pustakalaya

Pages

174

Year Published

1966

Language

Kannada

Book Format

Printbook

ನಮ್ಮ ನಾಡಿನ ಪರಮ ಪುಣ್ಯದ ಫಲವಾಗಿ  ನಮಗೆ ಲಭಿಸಿರುವ  ಪ್ರಕೃತಿಯ ವರಗಳಲ್ಲಿ ಹಿಮಾಲಯ, ವಿಂಧ್ಯಾದ್ರಿಗಳು, ಪೂರ್ವ- ಪಶ್ಚಿಮ  ಘಟ್ಟಗಳು ಅನೇಕ ಪರ್ವತ ಸ್ತೋಮಗಳು ಮತ್ತು ಗಂಗೆ, ಯಮುನೆ, ಗೋದೆ, ಕಾವೇರಿ ಮೊದಲಾದ ಪುಣ್ಯನದಿ ಗಳು ಮುಖ್ಯವಾಗಿದೆ. ಇವು ಭಾರತೀಯರ ‘ಇಹ’ ದ ಪ್ರಯೋಜನಕ್ಕೂ ‘ಪರ’ ದ ಶ್ರೇಯಸ್ಸಿಗೂ ಕಾರಣವಾಗಿವೆ.

ಹಿಂದಿನಿಂದಲೂ ಭಾರತೀಯರು ತೀರ್ಥ ಕ್ಷೇತ್ರಗಳಲ್ಲಿ ಭಗವಂತನ ಶ್ರೀಮದೂರ್ಜಿತವಾದ ಅಂಶವನ್ನು ಮನಗಾಣುತ್ತ ಶ್ರೇಯ, ಪ್ರೇಯಗಳನ್ನು ಪಡೆಯುತ್ತಾ ಬಂದಿದ್ದಾರೆ. ಪವಿತ್ರ ನದಿಗಳ ತೀರ್ಥ ಸ್ಥಳ, ಕ್ಷೇತ್ರ ಮಹಾತ್ಮೆಯ ಪುಣ್ಯ ಸ್ಥಳಗಳಲ್ಲಿ ಗುಡಿ- ಗೋಪುರಗಳನ್ನು ನಿರ್ಮಿಸಿ  ಭಕ್ತಿ  ಶ್ರದ್ಧೆ , ಕಲಾ   ನೈಪುಣ್ಯ ತೋರಿ ಮೆರೆದಿದ್ದಾರೆ.

ಶ್ರೀ ರಾಮನ ಬಗ್ಗೆ ರಾಮಾಯಣದ ಬಗ್ಗೆ ಭಾರತೀಯರಿಗಿರುವ ಅಚಲ ಅಭಿಮಾನವನ್ನು ತಿಳಿಯಪಡಿಸುತ್ತದೆ.  ಹೀಗೆ ಅನೇಕ ಯೋಗಿಗಳ , ತಪಸ್ವಿಗಳ ಸಾಧು- ಸಂತರ ಮಹಾತ್ಮೆಯಿಂದ ಪ್ರಸಿದ್ಧ ಪಡೆದ ಸ್ಥಳಗಳು ಪುಣ್ಯ ಕ್ಷೇತ್ರ ಗಳೆನಿಸಿವೆ.