Your Cart

Need help? Call +91 9535015489

📖 Print books shipping available only in India. ✈ Flat rate shipping

ಡಾ. ವೀಣಾ ಶಾಂತೇಶ್ವರ ಎಂಬ ಸ್ತ್ರೀಪರ ಚಿಂತಕಿ 

ಡಾ. ವೀಣಾ ಶಾಂತೇಶ್ವರ ಎಂಬ ಸ್ತ್ರೀಪರ ಚಿಂತಕಿ “ಬೆಳೆದದ್ದು ಕನಸು ಕಾಣುತ್ತಲೇ… ಕಂಡ ಕನಸು ಸಾಕಾರಗೊಳಿಸಿಕೊಳ್ಳಲು ಪಟ್ಟ ಪ್ರಯತ್ನ ಅಷ್ಟಿಷ್ಟಲ್ಲ… ಈಗ ಕನಸು ಸಾಕಾರಗೊಂಡಿವೆ… ಆದರೂ ಮತ್ತೇನಾದರೂ ಮಾಡಬೇಕೆಂಬ ಹಂಬಲ, ತುಡಿತ…” ಇದು ಡಾ ವೀಣಾರವರ ಬಗ್ಗೆ ಹೇಳಬಹುದಾದ ಮಾತು. ಸಂತೂಬಾಯಿಯವರ ಶತಮಾನದ ಹಿಂದಿನ ಕನಸಿಗೆ ತಮ್ಮ ಕಥೆ, ಕಾದಂಬರಿಗಳ, ವೈಚಾರಿಕ ಬರಹಗಳ ಮೂಲಕ ಜೀವ ತುಂಬುತ್ತ ಅವರು ನಡೆದ ಕಾಲುದಾರಿಯನ್ನೇ ಹೆದ್ದಾರಿಯಗಿ ವಿಸ್ತರಿಸಲು ಪ್ರಯತ್ನಿಸಿದ ಲೇಖಕಿಯರ ಸಾಧನೆಯಲ್ಲಿ ಡಾ. ವೀಣಾ ಅವರ ಪಾಲು ಗಮನಾರ್ಹವಾದುದು. ಅನನ್ಯ […]

ನಮ್ಮ ಮನೆ ಪೂರಾ ನಮ್ಮದಾಗಲಿ…

ನಮ್ಮ ಮನೆ ಪೂರಾ ನಮ್ಮದಾಗಲಿ… ಬಹಳ ದಿನಗಳ ಹಿಂದೆ, ಮರಾಠಿ ಮೂಲದ ಕನ್ನಡ ಅನುವಾದ ,’ ನಮ್ಮ ಮನೆ ನಮ್ಮದೆಷ್ಟು ‘ ಲೇಖನವನ್ನು ಕಸ್ತೂರಿ ಮಾಸ ಪತ್ರಿಕೆಯಲ್ಲಿ ಓದಿದ್ದೆ. ಅಷ್ಟೊಂದು ಆಸೆಪಟ್ಟು, ದುಡಿದ ಹಣವನ್ನೆಲ್ಲ ವ್ಯಯಿಸಿ, ಕಟ್ಟಿಸಿದ ಮನೆಯಲ್ಲಿ ಒಬ್ಬ ಮನುಷ್ಯ ಎಷ್ಟು ಕಾಲ ಇರುತ್ತಾನೆ ಎಂಬುದರ ವಿಶ್ಲೇಷಣೆಯಿತ್ತು ಅದರಲ್ಲಿ. ಒಬ್ಬ ಮನುಷ್ಯ ಪೂರ್ಣವಾಗಿ ನೂರು ವರ್ಷ ಬದುಕಿದರೂ ಬದುಕಿನ ಹೋರಾಟ, ಬದುಕಿಗಾಗಿ ಸಂಪಾದನೆ, ಅನ್ನುತ್ತ ಬೆಳಿಗ್ಗೆ ಹತ್ತರಿಂದ ಸಾಯಂಕಾಲ ಆರರ ವರೆಗೆ ಅಂದರೆ ಮೂರರ ಒಂದು […]

ಬಾವಿಗಳಿಗೆ ಕಾಯಕಲ್ಪ…!

ಬಾವಿಗಳಿಗೆ ಕಾಯಕಲ್ಪ…! ನೀರಿನ ಸೌಕರ್ಯ ಒದಗಿಸುವವನನನ್ನು ಪುಣ್ಯಾತ್ಮ ಎನ್ನುತ್ತೇವೆ. ಬಿರುಬೇಸಗೆಯಲ್ಲಿ ದಾಹವನ್ನು ತಣಿಸಿದರೆ ಅಶ್ವಮೇಧ ಯಾಗ ಮಾಡಿದ ಮಹಾಫಲವಂತೆ ಕೆರೆಯಂ ಕಟ್ಟಿಸು, ಬಾವಿಯಂ ಸವೆಸು, ದೇವಾಗಾರಮಂ… ಮಾಡಿಸು ಎಂದು ಮುಂತಾಗಿ ಒಳ್ಳೆಯ ಕೆಲಸಗಳನ್ನೇ ಮಾಡಬೇಕೆಂಬ ಪಾಠ ಹಿಂದೆ ಎಳವೆಯಲ್ಲೇ ಬೋಧನೆಯಾಗುತ್ತಿತ್ತು ಆದರೆ ಇಂದು…? ಆಯಾ ಊರಿನಲ್ಲಿ ನೀರಿನ ಉಗ್ರಾಣಗಳಂತಿದ್ದ ಕೆರೆ, ಬಾವಿಗಳಿಂದು ಹಾಳು ಬಿದ್ದು ಕಸದ ತೊಟ್ಟಿಗಳಾಗಿವೆ. ಕೊಳವೆ ಬಾವಿಗಳ ಅಬ್ಬರದಲ್ಲಿ ತೆರೆದ ಬಾವಿಗಳನ್ನು ಮರೆತೇಬಿಟ್ಟಿದ್ದೇವೆ. ಒಂದು ಕಾಲದಲ್ಲಿ ಅಂತರ್ಜಲ ಕಾಪಾಡುತ್ತಿದ್ದ, ಮಳೆ ನೀರು ಸಂಗ್ರಹಿಸುತ್ತಿದ್ದ ತೆರೆದ […]

ಎಲ್ಲರೊಳಗೊಂದಾಗು ಮಂಕು ತಿಮ್ಮ…

ಎಲ್ಲರೊಳಗೊಂದಾಗು ಮಂಕು ತಿಮ್ಮ… ನಿನ್ನೆ ಎಲ್ಲಾ ಪೂರ್ತಿ ಹೊಸ ವರ್ಷದ ಮುದ… ಮುಂಬರುವ ಬದುಕಿನಲ್ಲಿ ಬದಲಾವಣೆ ಇರುತ್ತೋ ,ಇಲ್ಲವೋ, ಆ ಒಂದು ದಿನ ಮಾತ್ರ ಒಂದು ವಿಶಿಷ್ಠವಾದ ಭಾವವಂತೂ ಕೆಲಸ ಮಾಡುತ್ತಿರುತ್ತದೆ- ಒಂದು ಸಮೂಹ ಸನ್ನಿಯಂತೆ… ಕೆಲವರಂತೂ ಹೊಸ ವರ್ಷಕ್ಕೆ ಅಂತಾನೇ ಕೆಲವು resolutions ಮಾಡುತ್ತಿರುತ್ತಾರೆ.ಪಾಲಿಸಲು ಅಲ್ಲವಾದರೂ ಮುಂದೊಮ್ಮೆ ಮುರಿಯಲಾದರೂ ಬೇಕಲ್ಲ. ‌‌ ಒಂದು ಮಾತು ಮೊದಲೇ ಹೇಳಿಬಿಡುವದು ವಾಸಿ.ನನಗೆ ಇವೆಲ್ಲವುಗಳ ಬಗ್ಗೆ ಖಾಸಾ ಮೋಹವಾಗಲಿ/ವಿರೋಧವಾಗಲಿ ಇಲ್ಲ. ಬಹುಶಃ ನಮ್ಮ ಬಾಲ್ಯದ ಹಳ್ಳಿಯ ಪರಿಸರದಿಂದ ಇಲ್ಲಿಯವರೆಗೆ ಪಯಣಿಸಿದ […]

ಹೆಣ್ಣೇಕೆ ಶ್ವೇತಸುಂದರಿಯಾಗಿರಬೇಕು?

ಹೆಣ್ಣೇಕೆ ಶ್ವೇತಸುಂದರಿಯಾಗಿರಬೇಕು? ಸೌಂದರ್ಯವೆನ್ನುವುದು ನೋಡುಗರ ಕಣ್ಣಿನಲ್ಲಿದೆ ಎಂದು ಶೇಕ್ಸಪಿಯರ್ ನಂಥ ಮಹಾನ್ ಸಾಹಿತಿಯೇ ಹೇಳಿದ್ದಾನೆ.. ಆದರೂ ಸೌಂದರ್ಯದ ಅಳತೆಗೋಲುಗಳು ಇದ್ದೇ ಇವೆ. ಅವೇನೂ ಸೌಂದರ್ಯ ಸ್ಪರ್ಧಾಳುಗಳಿಗೆಂದು ಮಾಡಲಾದವುಗಳಲ್ಲ. ಸಾಮಾನ್ಯರ ದೃಷ್ಟಿಯಲ್ಲಿಯ ಅಳತೆಗೋಲುಗಳೇ. ಸೌಂದರ್ಯವೆಂದರೆ ಹಾಲುಬಿಳುಪು ಬಣ್ಣ, ಎತ್ತರವಾದ ಆದರೆ ತೆಳುವಾದ ಹಾಗೂ ಒಳ್ಳೆಯ ಉಬ್ಬು ತಗ್ಗುಗಳನ್ನು ಹೊಂದಿದ ಮೈಕಟ್ಟು, ಸ್ವಚ್ಛವಾದ ಹಾಗೂ ಹೊಳಪುಳ್ಳ ಚರ್ಮ, ಕೂದಲು ಉದ್ದ ಅಥವಾ ಗಿಡ್ಡ ಹೇಗೇ ಇರಲಿ, ಅದರೆ ದಟ್ಟವಾದ ಹಾಗೂ ನಯವಾದ ಕೇಶರಾಶಿ ಇರಬೇಕು… ದೊಡ್ಡ ದೊಡ್ಡ ಕಣ್ಣುಗಳು, ಚೂಪನೆಯ […]

ಕೋಲೆ ಬಸವ…!

ಕೋಲೆ ಬಸವ…! ಆಧುನಿಕತೆಯ ಭರಾಟೆಯಿಂದಾಗಿ ನೇಪಥ್ಯಕ್ಕೆ ಸರಿಯುತ್ತಿರುವ ಅನೇಕ ಜಾನಪದ ಆಟಗಳು ಹಾಗೂ ಕಲೆಗಳಲ್ಲಿ ಕೋಲೆ ಬಸವನ ಆಟ ಒಂದು. ಕೋಲೆ ಬಸವ ನೋಡಲು ಬಹಳ ಸುಂದರ. ಅವುಗಳ ಭುಜಗಳನ್ನು ಎತ್ತರವಾಗಿ ಕಾಣುವಂತೆ ಬಣ್ಣ ಬಣ್ಣದ ಜೂಲುಗಳಿಂದ ಅಲಂಕಾರ ಮಾಡಿ, ಕೋಡಿನ ತುದಿಗೆ ಬಣ್ಣದ ರಿಬ್ಬನ್ ಗಳನ್ನು ಕಟ್ಟಿ ಸಿಂಗರಿಸುತ್ತಾರೆ. ಕಾಲುಗಳಿಗೆ ಗಗ್ಗರ, ಹಣೆಗೆ ದೇವರ ಪಟದೊಂದಿಗೆ ಕವಡೆ ಸರದ ಅಲಂಕಾರ. ಈ ರೀತಿ ಶೃಂಗಾರಗೊಂಡ ಗೋವುಗಳು ತಮ್ಮ ಯಜಮಾನನ ಅಣತಿಯಂತೆ ವಿವಿಧ ಆಟಗಳನ್ನು ಪ್ರದರ್ಶಿಸುತ್ತಾ ನೆರೆದ […]

ಧಾರವಾಡದ ಜೆ ಎಸ್ಎಸ್ ಕಾಲೇಜಿನ ನನ್ನ ಮೊದಲ ದಿನ…

ಧಾರವಾಡದ ಜೆ ಎಸ್ಎಸ್ ಕಾಲೇಜಿನ ನನ್ನ ಮೊದಲ ದಿನ… ನಮ್ಮದು ತಾಲೂಕೂ ಅಲ್ಲದ ಅತಿ ಚಿಕ್ಕ ಹಳ್ಳಿ, ರಟ್ಟೀಹಳ್ಳಿ.ಅಲ್ಲಿಂದ ಮೊಟ್ಟ ಮೊದಲಿಗೆ ಧಾರವಾಡಕ್ಕೆ ಬಂದದ್ದು ೧೯೬೫ ರಲ್ಲಿ, ನಾನು ಹತ್ತೊಂಬತ್ತು ವರ್ಷದವಳಿದ್ದಾಗ…ಅದೂ ಪಿ.ಯು.ಸಿ ಗೆ ಅಂದರೆ ಯಾರಿಗೂ ಸಹಜವಾಗಿಯೇ ಆಶ್ಚರ್ಯವಾದೀತು. ಹೌದು, ಶಿಕ್ಷಣ ಇದ್ದುಳ್ಳವರ ಸೊತ್ತು ಎಂಬಂತಿದ್ದ ಕಾಲಮಾನವದು. ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆಯಂತೂ ಒಂದು ರೀತಿಯ ದಿವ್ಯ ನಿರ್ಲಕ್ಷ್ಯ. ಇದ್ದವರು ಮಕ್ಕಳನ್ನು ಹತ್ತಿರದ ರಾಣೆಬೆನ್ನೂರು, ಹಾವೇರಿ ಹೆಚ್ಚೆಂದರೆ ಧಾರವಾಡದಲ್ಲಿ ಬಂಧುಗಳ ಮನೆಯಲ್ಲಿ ಇಟ್ಟು ಓದಿಸುತ್ತಿದ್ದರು. ಉಳಿದವರು […]

ಮರದ ಮನೆ…!

ಮರದ ಮನೆ…! ಪ್ರಕೃತಿಯ ಮಡಿಲಲ್ಲಿ ಮರದ ಮೇಲಿನ ಮನೆಯನೇರಿ ಕಾಲ ಕಳೆಯುವುದು ಅದ್ಭುತ ಅನುಭವ. ಹಕ್ಕಿಗಳ ಚಿಲಿಪಿಲಿ ನಾದದ ಜೊತೆಗೆ ತಂಪಾದ ಗಾಳಿ, ಬೆಳದಿಂಗಳು, ಸೂಯೋದಯದ ಸೊಬಗಿನ ಕ್ಷಣವನ್ನು ಮನದಣಿಯೆ ಆಸ್ವಾದಿಸಲು ಮರದ ಮನೆ ಹೆಚ್ಚು ಸೂಕ್ತ. ಅಪರೂಪ ಎನ್ನುವಂತಿರುವ ಇದು ತನ್ನ ವಿಶೇಷ ವಿನ್ಯಾಸದಿಂದ ಗಮನ ಸೆಳೆಯುತ್ತದೆ. ಈ ಟ್ರೀ ಹೌಸ್ ಇರುವುದು ಶಿಕಾರಿಪುರದಿಂದ ಮೂರು ಕಿಲೋಮೀಟರ್ ದೂರದ ಇಕ್ಬಾಲ್ ಅಹಮದ್ ರವರ ತೋಟದ ಮನೆಯಲ್ಲಿ ನಟರೂ ನಾಟಕಕಾರರೂ ಆಗಿರುವ ಇವರ ಕೈ ಚಳಕದಿಂದ ಹಸಿರ […]

ವೈವಾಹಿಕ ಜೀವನದ ಯಶಸ್ಸಿಗೆ ಹೊಂದಾಣಿಕೆ ಹಾಗೂ ಸಾಮರಸ್ಯ ಮುಖ್ಯ

ವೈವಾಹಿಕ ಜೀವನದ ಯಶಸ್ಸಿಗೆ ಹೊಂದಾಣಿಕೆ ಹಾಗೂ ಸಾಮರಸ್ಯ ಮುಖ್ಯ ಬದುಕಿನ  ಪ್ರಮುಖ ನಿರ್ಧಾರಗಳಲ್ಲಿ ವಿವಾಹವೂ ಒಂದು. ಹೊಸದಾಗಿ ಮದುವೆ ಮಾಡಿಕೊಂಡು ತನ್ನ ಸಂಗಾತಿಯೊಂದಿಗೆ ಜೀವನ ಹಂಚಿಕೊಳ್ಳುವ ಉತ್ಸಾಹ ಒಂದು ಕಡೆಯಾದರೆ, ಮತ್ತೊಂದು ಕಡೆ  ಹೊಸ ಪರಿಸರ, ಹೊಸ ಸಂಗಾತಿಯೊಂದಿಗೆ ಅಪರಿಚಿತ  ವಾತಾವರಣದಲ್ಲಿ ವಾಸಿಸುವುದು ಸವಾಲಿನ ಸಂಗತಿಯಾಗಿರುತ್ತದೆ. ಇದು ಹೆಣ್ಣು ಹಾಗೂ ಗಂಡು ಇಬ್ಬರಿಗೂ ಕೂಡ ಅನ್ವಯವಾಗುತ್ತದೆ. ಆದರೂ ಹೊಸ ಬದುಕಿಗೆ ಹೊಂದಿಕೊಳ್ಳುವುದು ಎಂದರೆ ಗಂಡಿಗಿಂತಲೂ ಹೆಣ್ಣಿಗೇ ತೀವ್ರ ಒತ್ತಡಕರ ವಿಷಯ. ಏಕೆಂದರೆ ಗಂಡಿಗೆ ಕೇವಲ ಹೆಂಡತಿಯೊಬ್ಬಳೇ ಅಪರಿಚಿತಳಾದರೆ […]