Your Cart

Need help? Call +91 9535015489

📖 Print books shipping available only in India. ✈ Flat rate shipping

ದೇವರಿಗೊಂದು ಪತ್ರ!- 41

ದೇವರಿಗೊಂದು ಪತ್ರ!( 41) ಓ ಯಶೋದಾ ನಂದನ ಈ ಪತ್ರ ಓದಿ ನೀ ನಗಬಹುದು ಇಂದು ಹೇಳುವೆ ಕೇಳು ರಾಧರಮಣ ನಾನಾಚರಿಸಿದ ಪರಿ ನಿನ್ನ ಜನ್ಮದಿನ ಮೊದಲೆರಡು ದಿನದಿಂದ ಅಮಿತ ಆನಂದ ಹರಿ ಮನದೊಳಗೆ ಸಾಲು ಯೋಚನೆ ಹತ್ತು ಹಲವು ಯೋಜನೆ ಏನ ಮಾಡಲಿ ಹರಿಯ ಜನ್ಮದಿನಕ್ಕೆ ಅಂದುಕೊಂಡಿದ್ದೆಲ್ಲ ದೇಹದೊಳಗಿನ ಆತ್ಮ ಮಾಡಿ ಮುಗಿಸಿತ್ತು ಕ್ಷಣಕ್ಕೆ ಇರಲಿ ಕೇಳು ಬಾಹ್ಯ ಆಡಂಬರವು ಮಾಡಲಿಚ್ಚಿಸಿತು ಮನವು ಪೋದೆ ಹುಡುಕುತ ನಿನಗಿಷ್ಟದ ಸುಘಂದ ಭರಿತ ಪುಷ್ಪ ಆಯ್ದು ತರಲು ಮತ್ತೆ […]

ಅಮ್ಮ ಕಲಿಯಲೇ ಇಲ್ಲ!

ಅಮ್ಮ ಕಲಿಯಲೇ ಇಲ್ಲ! ಜನ್ಮ ಕೊಟ್ಟ ಕ್ಷಣದಿಂದ ಮೊಲೆಯುಣಿಸಿದಳು ವರ್ಷಗಟ್ಟಲೆ ಶಕ್ತಿವಂತನಾಗಲಿ ಕೂಸೆಂದೆನಿಸಿ ಬೆಳೆಸಿದಳು ನೋವಾಗುವುದು ಸಾಕು ಬಿಡು ಎನ್ನುವುದ ಕಲಿಯಲಿಲ್ಲ ಅವಳು! ಜಾತ್ರೆ ಉತ್ಸವಗಳಿಗೆ ಬಿಡದೆ ಟೊಂಕದಿ ಹೊತ್ತು ಮೆರೆದಳು ಆ ಕೈಗೊಮ್ಮೆ ಈ ಕೈಗೊಮ್ಮೇ ರಟ್ಟೆ ಬಿಗಿದು ಸೋತರೂ ಹುಸಿನಗುವಳು ಬಿಟ್ಟು ಹೋಗುವೆನಿಲ್ಲೇ ಬಾರದಿರು ಎನ್ನುವುದ ಕಲಿಯಲೇ ಇಲ್ಲ ಅವಳು ಹಾಡಿ ಪಾಡಿ ಅಂಗಳವೆಲ್ಲ ಸುತ್ತಾಡಿ ಚಂದಿರನ ತೋರಿ ತುತ್ತಿಟ್ಟಳು ಜೋಗುಳವ ಹಾಡಿ ತೊಟ್ಟಿಲ ತೂಗಿ ತೂಗಿ ಮಲಗಿಸಿದಳು ಕೂಸು ಉಣ್ಣದೆ ಮಲಗದೆ ಹಸಿವು […]

ದೀಪ

ದೀಪ ಕತ್ತಲೆಯ ಬೆತ್ತಲಾಗಿಸಿ ಕಿರುನಗೆಯ ಸೂಸಿ ತನ್ನಿರುವಿಕೆಯಾ ಮೆರೆಯುತಿದೆ ಹಣತೆಯ ದೀಪ ಸುತ್ತಲೂ ಬೆಳದಿಂಗಳ ಬೆಳಕು ಚೆಲ್ಲಿ ಲಾಸ್ಯವಾಡುತಿದೆ ಅಲ್ಲಿ ತಾನೇ ಕೊರಗೀ ಕರಗೀ ಬೆಳಕ ನೀಡಿ ಸಂಭ್ರಮಿಸುತಿದೆ ಮೇಣದಾ ದೀಪ ನಕ್ಷತ್ರ ಪುಂಜಗಳೂ ತಮ್ಮ ಪರಿಧಿಯಲಿ ಮಿಣುಮಿಣುಕ ಬೆಳಕ ಹರಡಿ ಪಯಣಿಗನಿಗೆ ದಾರಿದೀಪವಾಗಿವೆ ಚಂದ್ರ ಚಕೋರನೂ ಭಾವನೆಗಳ ಏರಿಳಿತಕ್ಕೊಳಗಾಗಿ ನಾಡಿನ ಕಾಡಿನ ತುಂಬೆಲ್ಲ ಬೆಳದಿಂಗಳ ಬೆಳಕೊಮ್ಮೆ ಕತ್ತಲೆಯ ಮುಸುಕೊಮ್ಮೆ ಹೊದ್ದು ಮೆರೆಯುತಿಹ ಜಗದಕಲಕೂ ತನ್ನ ಪ್ರತಿಭೆ ಮೂಡಿಸಿ ಜೀವ ಜೀವಕೂ ಆಧಾರವಾಗಿಹ ರವಿ ತಾ ಆಕಾಶದಿ […]

ಪರಾಜಯ…

ಪರಾಜಯ… (ಅಲ್ಲಗಳೆಯಲಾಗದ ಒಂದು ವಾಸ್ತವ) ನನ್ನ ಬದುಕಿದು, ನನ್ನದು- ನಾನೇ ಆಳುವವ ಅಂದೆ, ಕಾಣದ ಕೈಯೊಂದು ಹೊಸಕಿ ಹಾಕಿದೆ… ನನ್ನ ಜನ, ನನ್ನ ಆಪದ್ಬಂಧುಗಳು ಅಂದುಕೊಂಡೆ, ಕೈಬೀಸಿ ತಿರುಗಿ ನೋಡದೇ- ಮರೆಯಾಗುತ್ತಿದ್ದಾರೆ… ನನ್ನ ಗಳಿಕೆ, ನನ್ನ ಉಳಿಕೆ, ನನ್ನದೇ ಸಂತಸಕ್ಕೆಂದು ಕನಸು ಕಂಡೆ, ಬೋರಲು ಬಿದ್ದ ತುಂಬು ಬಿಂದಿಗೆ ಬರಿದಾಗುತ್ತಿದೆ… ನನ್ನ ವಿದ್ಯೆ, ನನ್ನ ಹೆಮ್ಮೆ ಎಂದೆಣಿಸಿದ್ದೆ… ಎಷ್ಟಿದ್ದರೂ ದಕ್ಕುವುದು ‘ಅಂಗೈ ಗೆರೆ’ಯಷ್ಟೇ… ಸಾಬೀತಾಗಿದೆ… ನನ್ನ ಮಕ್ಕಳೆನ್ನ ಅಂತ್ಯ ಕಾಲಕ್ಕೆ- ಅಂದುಕೊಂಡೆ… ” ಯಾರಿಗೆ ಯಾರೋ ಪುರುಂದರ […]

ಕಾವ್ಯಕನ್ನಿಕೆಯು ಮನ ಮೆತ್ತಿಹಳು

ಕಾವ್ಯಕನ್ನಿಕೆಯು ಮನ ಮೆತ್ತಿಹಳು ಕಾವ್ಯ ಕನ್ನಿಕೆಯು ಮನ ಮೆತ್ತಿಹಳು ಶ್ರಾವಣದ ಐಸಿರಿಯ ಕಂಡು ಚಿಗುರು ಹೂವ ಹಸಿರ ಅರಳಿಸಿ ಹೂವ ಗಂಧ ಸುಗಂಧ ಪಸರಿಸಿ ಭುವಿಯ ಚೆಲುವು ಇಮ್ಮಡಿಸಿ ಬಂದಿತಿದೋ ಶ್ರಾವಣಾ ಶ್ರಾವಣವು ಹೆಬ್ಬಾಗಿಲು ಹಬ್ಬಹರಿದಿನಗಳ ಸಾಲು ಸಾಲು ಬಿಟ್ಟೊಬಿಡದೇ ರಚ್ಚೆ ಹಿಡಿವಂತೆ ಮಗು ಸುರಿಯುತಿದೆ ಮಳೆಯ ಗುನುಗು ಗಿರಿಕಂದರ ಶಿಖರಗಳಿಗೆಲ್ಲ ಹಚ್ಚನೆಯ ಮೇಲ್ಹೊದಿಕೆ ಮೈಮೆತ್ತಿ ಸೌಂದರ್ಯದ ಖನಿಯಾದಂತೆ ಪ್ರಕೃತಿಮಾತೆಯ ಚೆಲುವು ನೂರ್ಮಡಿಸಿದಂತೆ ಇಬ್ಬನಿಯ ಹನಿಗಳಿಲ್ಲ ಇಂದು ಅಂಬರದ ತುಂಬೆಲ್ಲ ಕಪ್ಪನೆಯ ಮೇಘಗಳು ಒಂದನ್ನೊಂದು ಹಿಂದಿಕ್ಕಿ ಸುರಿಯುತಿಹವು […]

ಹರಿಯುವ ನದಿ ಸಾಗರವಾ ಸೇರಲೇ ಬೇಕು

ಹರಿಯುವ ನದಿ ಸಾಗರವಾ ಸೇರಲೇ ಬೇಕು… ಬದುಕು ಮಾಗುವ ಮುನ್ನ ಪಯಣ ಮುಗಿಸುವ ಮುನ್ನ ನದಿಯು ಮನದಾಳದಲಿ ಬೆದರಿರುವದು… ಗಿರಿ, ಗುಡ್ಡ, ಕಣಿವೆಗಳ, ಅಲ್ಲಲ್ಲಿ ತಿರುವುಗಳ ದಾಟಿ ಬಂದದ್ದನ್ನು ನೆನಪಿಡುವುದು… ತನ್ನೆದುರು ಬಾಯ್ದೆರೆದ ಸಾಗರವ ದಿಟ್ಟಿಸುತ ಒಂದಾಗೊ ಭಯದಲ್ಲಿ ನಡುಗಿರುವುದು… “ಒಮ್ಮೆ ಹೊಕ್ಕರೆ ಅದನು ಮತ್ತೆ ಹೊರಬರಲುಂಟೇ?” -ಇದ್ದಷ್ಟು ಧೈರ್ಯವೂ ಉಡುಗಿರುವುದು… ಬೇರೆ ದಾರಿಯೇ ಇಲ್ಲ. ತಿರುಗಿ ಹರಿವುದು ಸಲ್ಲ, ಆ ದಾರಿ ಬದುಕಿನಲಿ ಮುಚ್ಚಿದಂತೆ. ಏನಿದ್ದರೂ ಮುಂದೆ ಹರಿವುದೊಂದೇ ದಾರಿ ಹರಿಯುತ್ತಲಿರಬೇಕು ದಾರಿ ಬಿಚ್ಚಿದಂತೆ… ಏನೇನು […]

ದೇವರಿಗೊಂದು ಪತ್ರ! (40)

ದೇವರಿಗೊಂದು ಪತ್ರ! (40) ಪತ್ರವಿದು ವಿಶೇಷ ಓ ಹರಿಯೆ ಓದು ಈ ಕ್ಷಣಕ್ಕೆ ತಪ್ಪದೆ ನೀನು! ಈ ನಾಲ್ಕು ದಿನದಿಂದ ಅತೀತ ಆನಂದದಲ್ಲಿ ಮನವೆನ್ನ ಮುಳುಗಿಹುದು! ಅರಿಯದ ಸಂತಸದ ಭಾವ ಅನುಭಾವದಲಿ ಆತ್ಮವಿದು ತೇಲುತಿಗುದು ಆನಂದಭಾಷ್ಪ ಕಣ್ಣಂಚಲಿ ಬಿಡದೆ ಜಿನುಗುತಿಹುದು ನೋಡಿದವರು ಎನೆನ್ನುವರೀಪರಿಯ ಭ್ರಾಂತಿಗೆ ಎಂಬಳಕು ಮನದೊಳಿಹುದು! ನೀ ಹುಟ್ಟಿದಾಷ್ಟಮಿಯು ಇಂದು ಜನ್ಮಾಷ್ಟಮಿ ನಿನ್ನದಿಹುದು! ಇಂದು ಕುಳಿತಲ್ಲಿ ನಿಂತಲ್ಲಿ ನಿನ್ನದೇ ಧ್ಯಾನದಲ್ಲಿ ನಾ ಭಿನ್ನ ಪಾತ್ರದಲ್ಲಿ ಕಲ್ಪಿಸಿಹೆನು ನೀ ಹುಟ್ಟಿದಂತೆ ಈ ಕ್ಷಣಕ್ಕೆ ನಾ ದಾದಿಯಾಗಿ ನಿನ್ನ […]

ಸಂಗೊಳ್ಳಿ ರಾಯಣ್ಣ

ಸಂಗೊಳ್ಳಿ ರಾಯಣ್ಣ ಕನ್ನಡ ನಾಡಿನ ಕಲಿ ಗಡಿನಾಡಿನ ಹುಲಿ ಕೆಚ್ಚೆದೆಯದಿ ಗಂಡುಗಲಿ ನಮ್ಮ ಸಂಗೊಳ್ಳಿರಾಯಣ್ಣ ಮುಳುಗದ ಸೂರ್ಯನ ನಾಡಿನರಸರಿಗೆ ಸಿಂಹಸ್ವಪ್ನ ನೀನಾದೆ ಜಮೀನ್ದಾರಿ ಜನರ ಆರ್ಭಟದ ನೀ ಮುರಿದೆ ಭಾರತಾಂಬೆಯ ತನುಜ ನೀನು ಚೆನ್ನಮ್ಮನ ಅನುಜನಾದೆ ನೀನು ಆಕೆಯ ಹೆಜ್ಜೆಗಳಿಗೆ ನೆರಳಾಗಿ ಕಾಯ್ದೆ ನಾಡನು ಸಿಂಹವಾಗಿ ಸಾವಿರ ಕಂಬನಿಗಳಲಿ ಬಿಸಿರಗುತದ ಧಮನಿಗಳಲಿ ನಿನ್ನದೇ ಛಾಯೆ ಪಡಿಮೂಡಿಸುತಲಿ ಸ್ವಾತಂತ್ರ್ಯ ಸಂಗ್ರಾಮಕೆ ಕಹಳೆ ಮೊಳಗಿಸುತಲಿ ಮೋಸದಲಿ ಲಕ್ಕಪ್ಪ ನಿನ್ನ ಸೆರೆ ಹಿಡಿಸಿದ ಕೊನೆಯುಸಿರುವವರೆಗೂ ನಾಡರಕ್ಷಣೆ ನಿನ್ನಿಂದ ನಿನ್ನ ಸಾವು ಜನಮನದಲಿ […]

ಶ್ರಾವಣ ಬಂತು

ಶ್ರಾವಣ ಬಂತು ಶ್ರಾವಣ ಬಂತು ಆನಂದ ತಂತು ಹಬ್ಬ ಹರಿದಿನಗಳ ಶುಭವೇಳೆ ತಂತು ಕಡಬು ಹೋಳಿಗೆ ಪಾಯಸಗಳ ಆಗರ ಮನೆ ಮನೆಯಲೂ ಆನಂದದ ಸಾಗರ ನೀಲಾಕಾಶ ಬದಲಾಯಿತು ಮೈಬಣ್ಣ ಕಪ್ಪಾಯಿತು ಕಪ್ಪು ಮೈಯ್ಯಲಿ ಮೇಘಗಳಾವೃತ ಗಿರಿಪರ್ವತಗಳಿಗೂ ಮುತ್ತನಿಕ್ಕುತ ಸುರಿಸುತಿಹ ಜಲಧಾರೆ ಭುವಿಗೆ ಧರೆಯಲ್ಲಿ ಮೆರೆದೀತು ತಂಪು ರಮಣೀಯತೆಯ ಕಂಪು ಹಕ್ಕಿಗಳ ಉಲಿಯುವಿಕೆಯ ಇಂಪು ಭೂತಾಯಿ ಮೈಬಸಿರು ಅದಕಾಗೇ ತೊಡೆವಳು ಹಸಿರು ಭೂಗಿರಿ ಕಂದರಗಳೆಲ್ಲದರ ಮೇಲೆ ಹಸಿರು ಹೊದಿಕೆ ಶುಭ್ರ ಜಲಧಾರೆ ಆಗಸದಿ ಭೂಮಡಿಲ ಪದರಕೆ ರವಿ ತಾ […]