Your Cart

Need help? Call +91 9535015489

📖 Print books shipping available only in India. ✈ Flat rate shipping

ಹುಚ್ಚರಾಯಪ್ಪನ ಹೊಸ ಪ್ರಣಾಳಿಕೆ

ಹುಚ್ಚರಾಯಪ್ಪನ ಹೊಸ ಪ್ರಣಾಳಿಕೆ ಆಹಾರ ಭದ್ರತೆಯ ಮಸೂದೆಯು ಬೇರೆ ವಿಷಯದ ವಿವಾದದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ಚುನಾವಣಾ ಹಗ್ಗ ಜಗ್ಗಾಟದಲ್ಲಿ ಅತಂತ್ರವಾಗಿ ಆಹಾರಕ್ಕಾಗಿ ಬಾಯ್ತೆರೆದು ಕೂತ ಬಡವರೊಟ್ಟಿಗೆ ಬಾಯಿ ಬಾಯಿ ಬಿಡುತ್ತಿರುವುದಾಗಿ ಎಲ್ಲ ಪೇಪರು ಟಿವಿ ನ್ಯೂಜ್ ಚಾನಲ್ಗಳಲ್ಲಿ ರೋಚಕವಾಗಿ ಚರ್ಚೆಯಾಗುತ್ತಿದ್ದ ಸುದ್ದಿಯನ್ನು ಬೆಳಗಿನ ಪೇಪರಿನಲ್ಲಿ ಓದುತ್ತಾ ಬಡವರ ಅಭದ್ರತೆಯನ್ನು ನೆನೆಯುತ್ತಾ ಕೂತಿದ್ದಾಗ ನನ್ನವಳು ಕಾಫೀ ಲೋಟವನ್ನು ಸಿಟ್ಟಿನಿಂದ ತಂದು ನನ್ನೆದುರು ಕುಕ್ಕಿದಳು. ಹಾಲು ಸಕ್ಕರೆ ಕಾಫೀ ಇದ್ದೂ ಇಲ್ಲದಂತಿರುವ ಕಲಗಚ್ಚಿನಂತಹ ಕಾಫಿಯನ್ನು ಒಮ್ಮೆ ಅವಳನ್ನೊಮ್ಮೆ […]

ಯಾವುದೋ ಗಿರಿಗೆ ಪ್ರಯಾಣ

ನಗಿಸುವುದು ಒಂದು ಕಲೆಯಾದರೆ, ನಗುವುದು ಒಂದು ಕಲೆ ಅನ್ನೋದು ನನ್ನ ಅಭಿಪ್ರಾಯ. ಎಲ್ಲರಿಗೂ ನಗಿಸಕ್ಕೆ ಬರೋಲ್ಲ ಹಾಗೇ ಎಲ್ಲರಿಗೂ ಹಾಸ್ಯ ಅರ್ಥ ಆಗಲ್ಲ. ನಗಿಸುವುದರಲ್ಲಿ ನಮ್ಮ ಈ ಪುಟ್ಟ ಮಕ್ಕಳದ್ದು ಒಂದು ಕೈ ಮೇಲೇ ಅನ್ನಬಹುದು. ಈಗಿನ ಮಕ್ಕಳಿಗೆ ಬಲು ಬುದ್ಧಿ. ತಮ್ಮ ಜ್ಞಾನದಾಹ, ಕುತೂಹಲ ಹಾಗು ಮುಗ್ಧತೆ ಮಿಶ್ರಿತ ಸವಾಲುಗಳಿಂದ ದೊಡ್ಡವರ ಬೆವರನ್ನು ಸಲೀಸಾಗಿ ಇಳಿಸಬಲ್ಲ ಪುಟಾಣಿಗಿವರು. ಹಾಗೆ, ಅವರ ಮುಗ್ಧತೆಯ ಉತ್ತರಗಳು, ಉಚ್ಛಾರಗಳು ತಲೆತಲಾಂತರಗಳಿಂದ ದೊಡ್ಡವರನ್ನು ನಗಿಸುತ್ತಾ ಬಂದಿದೆ. ನಮ್ಮ ನಿಮ್ಮ ಮನೆಯ ಪುಟ್ಟ […]

ಪ್ರೀತಿಯ ಅಂತ್ಯ

     ಒಂದು ಸುಂದರವಾದ ದ್ವೀಪವಿತ್ತು. ಅಲ್ಲಿ ಎಲ್ಲಾ ಭಾವನೆಗಳೂ ಸಾಮರಸ್ಯದಿಂದ ಬಾಳುತ್ತಿದ್ದವು. ಒಂದು ದಿನ ದೊಡ್ಡ ಪ್ರವಾಹ ಬಂದು ದ್ವೀಪ ಮುಳುಗುವ ಸ್ಥಿತಿ ಉಂಟಾಯಿತು. ಎಲ್ಲಾ ಭಾವನೆಗಳೂ ಜೀವಭಯದಿಂದ ತತ್ತರಿಸಿದವು. ಜೀವ ಉಳಿಸಿಕೊಳ್ಳಲು ಪರದಾಡಿದವು. ಆಗ ಪ್ರೀತಿ ಒಂದು ದೋಣಿಯನ್ನು ಸಿದ್ಧಪಡಿಸಿತು. ಎಲ್ಲಾ ಭಾವನೆಗಳೂ ಜೀವ ಉಳಿದರೆ ಸಾಕೆಂದುಗಡಿಬಿಡಿಯಲ್ಲಿ ದೋಣಿ ಎರಿದವು. ಒಂದು ಭಾವನೆ ಮಾತ್ರ ದೋಣಿಯಲ್ಲಿ ಕಾಣಲಿಲ್ಲ. ಪ್ರೀತಿ ದೋಣಿ ಇಳಿದು ಬಂದು ನೋಡಿದರೆ ದುರಭಿಮಾನ ಮುಖ ಊದಿಸಿಕೊಂಡು ಒಂದುಕಡೆ ಕುಳಿತಿತ್ತು. ಅದನ್ನು ದೋಣಿ […]

ಹಂಚಿ ತಿಂದರೆ ಹಬ್ಬದ ಊಟ … (ಸಣ್ಣ ಕಥೆ)

ಅಂದು ಸಾರ್ವಜನಿಕ ರಜೆ, ಬಸ್ಸುಗಳು ಕೊಂಚ ವಿರಳವಾಗಿದ್ದ ಹೊತ್ತು. ಯಾವುದೂ ಕೆಲಸದ ನಿಮಿತ್ತ ಮಾರ್ಕೆಟಿಗೆ ಹೋಗುವ ಬಸ್ ಏರಿ ಕುಳಿತಿದ್ದೆ. ಬಸ್ಸು ಹೊರಡುವ ಸಮಯ. ಸೀಟುಗಳೆಲ್ಲಾ ಆಗಲೇ ಭರ್ತಿಯಾಗಿದ್ದವು. ಪ್ರಯಾಣಿಕರೆಲ್ಲ ಡ್ರೈವರ ನಿರೀಕ್ಷೆಯಲ್ಲಿದ್ದರು. ಆ ಹೊತ್ತಿಗೆ ಹಸುಗೂಸೊಂದನ್ನು ಸೊಂಟಕ್ಕೇರಿಸಿಕೊಂಡು ಬಸ್ಸು ಏರಿದ ಹೆಂಗಸು, ದಯಾದ್ರರ್ ಳಾಗಿ ಅಕ್ಕಾ…. ಅಣ್ಣಾ….. ಅಮ್ಮಾ…. ತಾಯಿ…. ಎನ್ನುತ್ತಾ, ತನ್ನ ಹಸುಗೂಸನ್ನು ತೋರಿಸುತ್ತ ಕಾಸಿಗಾಗಿ ಕೈ ಚಾಚಿ ಕಾಡತೊಡಗಿದಳು. ಪ್ರಯಾಣಿಕರಿಂದ ಅಷ್ಟೋ – ಇಷ್ಟೋ ಕಾಸು ಗಿಟ್ಟಿಸಿಕೊಂಡು ಬಸ್ಸಿನಿಂದಿಳಿದವಳು, ಅಲ್ಲೇ ಪಕ್ಕದ ಮರದ […]

ಸಂಜೆಯ – ಒಂದು ನೆನಪಿನ ಕನಸಿನಲ್ಲಿ

ಒಂದು ಸಂಜೆ ಇಂಗ್ಲೆಂಡಿನ ಉದ್ಯಾನದಲ್ಲಿ ಆಹ್ಲಾದಕರ ವಾತಾವರಣ ಸವಿಯುತ್ತ, ಆಟ ಆಡುವ ಮಕ್ಕಳ ಸಂತೋಷದಲ್ಲಿ ಭಾಗಿಯಾಗುತ್ತ, ತಿಳಿಯಾದ ಗಾಳಿ ಸೇವಿಸುತ್ತ ಸುತ್ತುತ್ತಿದ್ದೆ. ಸೂರ್ಯ ಮುಳುಗುವ ಸಮಯವದು, ಅದನ್ನು ನೋಡುತ್ತಾ ಮನಸ್ಸು ಸುಬ್ರಾಯ ಚೊಕ್ಕಾಡಿ ಅವರು ಬರೆದ ಕವನ ಮೆಲಕು ಹಾಕತೊಡಗಿತು ಸಂಜೆಯ ರಾಗಕೆ ಬಾನು ಕೆಂಪೇರಿದೆ ತಿಂಗಳು ಮೂಡಿ ಬೆಳೆಕಿನ ಕೋಡಿ ಚೆಲ್ಲಾಡಿದೆ ಈಗ ರಂಗೇರಿದೆ…… ನಾವು ಚಿಕ್ಕವರಿದಾಗ ಅನುಭವಿಸಿದ ಸಂಜೆಯ ಸೊಬಗಿಗೂ ಈಗಿನ ಸಂಜೆಗೂ ಎಷ್ಟು ವ್ಯತ್ಯಾಸ… ಬಣ್ಣ ಬಣ್ಣದ ಗೋಲಿ ಆಟ, ಚಿನ್ನಿ ದಾಂಡು, […]