Your Cart

Need help? Call +91 9535015489

📖 Print books shipping available only in India. ✈ Flat rate shipping

“ಜಾನಪದ ಕಲೆಗಾರ ಡೊಳ್ ಚಂದ್ರು”,

ಸೊಂಟಕ್ಕೆ ಡೊಳ್ಳು ಕಟ್ಟಿಕೊಂಡು, ಆ ಕಡೆ, ಈ ಕಡೆ ಬಡಿಯುತ್ತಾ, ಬಡಿತದ ಶಬ್ಧಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದರೆ, ಸುತ್ತಲು ನಿಂತು ವೀಕ್ಷಿಸುತ್ತಿದ್ದವರೂ ಇವರ ಡೊಳ್ಳಿನ ತಾಳಕ್ಕೆ ಹೆಜ್ಜೆ ಹಾಕಲಾರಂಭಿಸುತ್ತಾರೆ. ಹೀಗೆ ವಿನೂತನ ಶೈಲಿಯಲ್ಲಿ ಡೊಳ್ಳು ನುಡಿಸುವುದರಿಂದಲೇ ಅವರಿಗೆ ‘ಡೊಳ್ ಚಂದ್ರು’ ಎಂದೇ ಹೆಸರು.ರಾಮನಗರ ಜಿಲ್ಲೆಯ ಅಂಕನಹಳ್ಳಿಯ 24ರ ಹರೆಯದ ಎ.ಎಸ್‌.ಚಂದ್ರಕುಮಾರ್, ರಾಜ್ಯ, ದೇಶ, ವಿದೇಶಗಳಲ್ಲಿ ಡೊಳ್ಳು ಕುಣಿತ ನೀಡುತ್ತಾ, ಗೆಳೆಯರ ಪಾಲಿಗೆ ಡೊಳ್‌ ಚಂದ್ರು ಎಂದೇ ಪರಿಚಿತರಾಗಿದ್ದಾರೆ.ಶ್ರೀನಿವಾಸ–ಸುಶೀಲಮ್ಮ ದಂಪತಿಯ ಪುತ್ರ ಚಂದ್ರು. ಬಡತನದ ಕುಟುಂಬದಲ್ಲಿ ಬೆಳೆದವರು. ಅವರಿಗೆ […]

“ಬಣ್ಣಿಸಲೆಂತು ಭರತನಾಟ್ಯದ ವೈಭವ! “,

ದಕ್ಷಿಣ ಕನ್ನಡ ಕಡಲಿನ ಒಡಲು. ಇದು ವಿಭಿನ್ನ ಜಾತಿ, ಮತ, ಭಾಷೆಗಳನ್ನು ಒಳಗೊಂಡ ಸೌಹಾರ್ದದ ತವರೂರು. ದೇವ–ದೈವಸ್ಥಾನಗಳ ನೆಲೆವೀಡಾದ ಇಲ್ಲಿನ ಸ್ಥಳೀಯ ಕಲೆಗಳಿಗೂ ವಿಶೇಷ ಸ್ಥಾನಮಾನವಿದೆ. ಹಾಗೆಯೇ, ಪತ್ರಿಯೊಂದು ಕಲೆಗೂ ಇಲ್ಲಿ ಗೌರವ ಮತ್ತು ಪುರಸ್ಕಾರ ದೊರೆಯುತ್ತಿದೆ. ಇಂತಹ ನಾಡಿನಲ್ಲಿ ಭರತನಾಟ್ಯಕ್ಕೆ ಭವ್ಯಯುತವಾದ ಪರಂಪರೆ ಇದೆ. ಇಂತಹ ಕಲೆಯನ್ನೇ ಜೀವವನ್ನಾಗಿಸಿಕೊಂಡವರು ಡಾ. ಚೇತನಾ ರಾಧಾಕೃಷ್ಣ.ಇವರು ಪ್ರಸಿದ್ಧ ಭರತನಾಟ್ಯ ಕಲಾವಿದೆ. ಭರತನಾಟ್ಯ ಶಿಕ್ಷಕಿಯಾಗಿ, ಕಲಾವಿದೆಯಾಗಿ, ನೃತ್ಯ ಸಂಯೋಜಕಿಯಾಗಿ ನಾಟ್ಯ ಕ್ಷೇತ್ರದಲ್ಲಿ ತನ್ನದೇ ಹೆಜ್ಜೆಗುರುತುಗಳನ್ನು ಮೂಡಿಸಿದ್ದಾರೆ. ವಿವಿಧ ರೀತಿಯ ಸಾಧನೆಗಳನ್ನು […]

ದೇಗುಲಗಳ ಸಮೂಹದ ಹೂಲಿ

ದೇಗುಲಗಳ ಸಮೂಹದ ಹೂಲಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಹೂಲಿ ಗ್ರಾಮವನ್ನು ಕರ್ನಾಟಕದ ವಾಸ್ತುಶಿಲ್ಪ ಪ್ರದರ್ಶಿಸುವ ತಾಣ ಎಂದು ಕರೆಯುತ್ತಾರೆ. ಇದು ಒಂಬತ್ತು ದೇವಾಲಯಗಳಿವೆ. ಅದರಲ್ಲಿ ಪಂಚಲಿಂಗೇಶ್ವರ ತನ್ನ ವಿಶಿಷ್ಟತೆಯಿಂದ ಗಮನ ಸೆಳೆಯುತ್ತದೆ. ಇದು ಕಲ್ಯಾಣ ಚಾಲುಕ್ಯ ಕಾಲದಲ್ಲಿ ನಿರ್ಮಾಣಗೊಂಡಿದೆ. ಸವದತ್ತಿಯಿಂದ 9 ಕಿ.ಮೀ ದೂರವಿರುವ ಈ ಗ್ರಾಮದಲ್ಲಿರುವ ದೇವಾಲಯಗಳು ವಿಶಿಷ್ಟ ಶಿಲ್ಪಕಲೆ, ವಾಸ್ತುಶಿಲ್ಪ ಪರಿಚಯಿಸುತ್ತವೆ. ಹಾಗೆಯೇ, ಆ ದೇವಾಲಯಗಳಿಗೆ ಬೇಕಾದ ಸಾಕ್ಷ್ಯಗಳನ್ನು ನುಡಿಯುವ ಶಾಸನಗಳೂ ಇವೆ. ಇಲ್ಲಿ ಸರ್ವಧರ್ಮ ಸಮನ್ವಯತೆ ಸಾಧಿಸಿದ ಹಾಗೂ ಸಾಂಸ್ಕೃತಿಕ ಪರಂಪರೆ […]

“ಕಲೆಯ ಹೆಜ್ಜೆಯೊಂದಿಗೆ ಜೀವನ ಪಯಣ”,

ಕಲೆಯ ಯಾವುದೇ ಪ್ರಕಾರವೇ ಇರಲಿ, ಅದು ಬಹಳ ಪರಿಣಾಮಕಾರಿಯಾಗಿರುತ್ತದೆ; ನಮ್ಮಲ್ಲಿ ಸೌಂದರ್ಯಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ; ಸಂಸ್ಕಾರ–ಸಂಸ್ಕೃತಿಯನ್ನು ಕಲಿಸುತ್ತದೆ. ಈ ಕಲೆ ಸೃಷ್ಟಿಯಾಗುವುದೇ ದೇಹ ಮತ್ತು ಮನಸ್ಸಿನ ಸಮ್ಮಿಲನದಿಂದ. ಈ ಸಮ್ಮಿಲನ ಉತ್ತಮ ಸಂವಹನಕ್ಕೆ ನಾಂದಿಯಾಗುತ್ತದೆ. ಉತ್ತಮ ಸಂವಹನಕ್ಕೆ ಒಳಪಡುವ ವ್ಯಕ್ತಿಯು ಸಂಸ್ಕಾರಯುತನಾಗಿ ಬೆಳೆಯುತ್ತಾನೆ. ಈ ನಿಟ್ಟಿನಲ್ಲಿ ಕಲೆ ವ್ಯಕ್ತಿತ್ವನಿರ್ಮಾಣದ ಹಂತಗಳಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತದೆ.ಹಿಂದೆ ಗುರುಕುಲಪದ್ಧತಿಯಲ್ಲಿ ಕಲಿಯಲು ಮಾತ್ರ ಅವಕಾಶ ಇದ್ದ ಸಾಂಪ್ರದಾಯಿಕ ಕಲೆಗಳು ಇದು ಕಾಲಕ್ಕೆ ತಕ್ಕಂತೆ ಬದಲಾಗಿದೆ ಎನ್ನುವುದೂ ಸತ್ಯ. ಶಾಲಾ ಓದು ಹಾಗೂ ಇನ್ನೀತರ […]

“ಕಂಚಿನ ಕುದುರೆ ಸವಾರ”

ಕಂಚಿನ ಕುದುರೆ ಸವಾರನ ಪ್ರತಿಮೆ ಇರುವುದು ರಷ್ಯಾದ ಸೇಂಟ್‌ ಪೀಟರ್ಸ್‌ಬರ್ಗ್‌ನಲ್ಲಿ. ಇದನ್ನು ಆ ನಗರದ ಸ್ಥಾಪಕ ಪೀಟರ್‌ ದಿ ಗ್ರೇಟ್‌ನ ನೆನಪಿಗೆ ನಿರ್ಮಿಸಲಾಗಿದೆ. ಈ ಪ್ರತಿಮೆಯು ನೇವಾ ನದಿಯತ್ತ ಮುಖ ಮಾಡಿ ನಿಂತಿದೆ.ಕ್ಯಾಥರೀನ್‌ ದಿ ಗ್ರೇಟ್‌, ತನ್ನ ಪೂರ್ವಿಕ ಪೀಟರ್‌ನಿಗಾಗಿ ಈ ಪ್ರತಿಮೆಯ ನಿರ್ಮಾಣ ಆರಂಭಿಸಿದಳು. ಕ್ಯಾಥರೀನ್‌ ಹುಟ್ಟಿನಿಂದ ಜರ್ಮನ್‌ ಆಗಿದ್ದ ಕಾರಣ, ಆಕೆಗೆ ರಷ್ಯಾದ ಹಿಂದಿನ ಮಹಾರಾಜರ ಜೊತೆ ನಂಟು ಬೆಸೆದುಕೊಳ್ಳುವ ಆಸೆ ಹೊಂದಿದ್ದಳು. ಈ ಸ್ಮಾರಕದಲ್ಲಿ ಇರುವ ಒಂದು ಶಾಸನದಲ್ಲಿ ರಷ್ಯನ್ ಹಾಗೂ ಲ್ಯಾಟಿನ್ […]

“ಕಲಾಕೃತಿಗಳಲ್ಲಿ ನಿಸರ್ಗ ಸೌಂದರ್ಯ”,

ಕಲಾವಿದ ಎಚ್.ಪಿ.ರಂಗಸ್ವಾಮಿ ಅವರು ರಚಿಸಿರುವ ನಿಸರ್ಗ ಚಿತ್ರಕಲಾ ಪ್ರದರ್ಶನವು ನಗರದ ಗೋಕುಲಂನ ‘ಆರ್ಟ್ಜ್ ಗ್ಯಾಲರಿ’ಯಲ್ಲಿ ನಡೆಯುತ್ತಿದೆ.ಮೈಸೂರಿನ ಹೆಸರಾಂತ ಸ್ಥಳಗಳಲ್ಲಿ ಖುದ್ದು ಭೇಟಿ ನೀಡಿ ರಚಿಸಿ ತಂದ 54ಕ್ಕೂ ಹೆಚ್ಚು ಕಲಾಕೃತಿಗಳು ಪ್ರದರ್ಶನಗೊಂಡಿವೆ.ಚಾಮುಂಡಿ ಬೆಟ್ಟ, ನಂದಿ, ಡಾ. ರಾಜಕುಮಾರ್ ಉದ್ಯಾನ, ಇರ್ವಿನ್ ರಸ್ತೆ, ಸ್ವತಂತ್ರ ಹೋರಾಟಗಾರರ ಉದ್ಯಾನ, ಗಂಗೋತ್ರಿಯ ಹಲವು ಸ್ಥಳಗಳು, ಶಿವಾಜಿರಸ್ತೆ, ಶ್ರೀರಂಗಪಟ್ಟಣದ ಬೇಸಿಗೆ ಅರಮನೆ, ವಿಧಾನಸೌಧ, ಮೈಸೂರು ಅರಮನೆ, ಜಯಚಾಮರಾಜ ಒಡೆಯರ್ ವೃತ್ತ, ಹಾರೋಹಳ್ಳಿಯ ಹಳ್ಳಿಚಿತ್ರ, ನಂಜನಗೂಡಿನ ಮಂಟಪ, ಹುಲ್ಲಹಳ್ಳಿಯಲ್ಲಿನ ಬಾಗಿಲಚಿತ್ರ, ನಗರದ ರಸ್ತೆಗಳಲ್ಲಿರುವ ಗಲ್‌ಮೊಹರ್ […]

“ಶಂಭಣ್ಣ–ನಾಣ್ಬಾವ: ಯಕ್ಷಲೋಕದಲ್ಲೀಗ ಅಭಾವ ಭಾವ!”,

ಇತ್ತೀಚೆಗೆ ನಿಧನರಾದ ರಂಗನಟ, ಮಾತಿನ ಮೋಡಿಗಾರ ಮಾಸ್ಟರ್ ಹಿರಣ್ಣಯ್ಯ ಮನುಷ್ಯರ ಬಗ್ಗೆ ಒಂದು ಮಾತನ್ನು ಪದೇ ಪದೇ ಹೇಳುತ್ತಿದ್ದರು. ಮನುಷ್ಯರಲ್ಲಿ ಎರಡು ವಿಧ. ಒಂದು ಇದ್ದೂ ಸತ್ತಂತೆ ಇರುವವರು. ಇನ್ನೊಂದು ವಿಧ ಎಂದರೆ ಸತ್ತ ಮೇಲೂ ಬದುಕಿರುವವರು. ಇದ್ದೂ ಸತ್ತಂತೆ ಇರುವವರು ವಿಧಾನಸೌಧ, ವಿಕಾಸಸೌಧದಲ್ಲಿ ಇರುತ್ತಾರೆ. ಟೇಬಲ್ ಕೆಳಗೆ ಆಗಾಗ ಕೈ ಚಾಚುತ್ತಿರುವುದರಿಂದ ಅವರು ಬದುಕಿದ್ದಾರೆ ಎನ್ನಬಹುದೇ ವಿನಾ ಯಾರ ಪಾಲಿಗೆ ಅವರು ಬದುಕಿರಬೇಕಿತ್ತೋ ಅವರ ಪಾಲಿಗೆ ಅವರು ಯಾವಾಗಲೋ ಸತ್ತು ಹೋಗಿದ್ದಾರೆ. ಇನ್ನು ಸತ್ತ ಮೇಲೂ […]

‘ಪಾರಿಜಾತ’ದ ಪಗಡೆ ಜಾತ್ರೆ”

ಶಾಮಿಯಾನದ ಕೆಳಗೆ, ಹಸಿರು ಚಾದರ ಮೇಲೆ ಚಚ್ಚೌಕದ ಪಗಡೆಯ ಹಾಸು. ಚೌಕಗಳಲ್ಲಿ ಜೋಡಿಸಿರುವ ಕಾಯಿಗಳು. ಹಾಸಿನ ಎದುರು ಕುಳಿತಿದ್ದವರ ಅಂಗೈಯಲ್ಲಿ ಕವಡೆಗಳು ಕುಲು ಕಾಡುತ್ತಿದ್ದವು. ಸುತ್ತಲೂ ಕಾತುರ ತುಂಬಿದ ಕಣ್ಣುಗಳು ಕವಡೆಯತ್ತ ದೃಷ್ಟಿ ನೆಟ್ಟಿದ್ದವು. ಪಗಡೆ ಹಾಸಿನ ಪಕ್ಕದಲ್ಲಿ ಕವಡೆ ಉರುಳುತ್ತಿದ್ದಂತೆ, ‌ಅಕ್ಕಪಕ್ಕದಲ್ಲಿದ್ದವರು ಪಂಚ್ವಿಸ್, ದಶಾ, ಭಾರಾ, ಚಕ್ಕಾ, ಚಾರೀ, ತೀನೀ, ದೋನಿ.. ಎಂದು ಕೂಗುತ್ತಾ ಸ್ಪರ್ಧಾಳುಗಳನ್ನು ಹುರಿದುಂಬಿಸುತ್ತಿದ್ದರು.ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಕುಲಗೋಡದಲ್ಲಿ ನಡೆಯುವ ವಾರ್ಷಿಕ ‘ಪಾರಿಜಾತ ಪಗಡೆ ಆಟದ ಸ್ಪರ್ಧೆ’ಯ ಒಂದು ಝಲಕ್ ಇದು. […]

“ಗಿರಡ್ಡಿ: ಸಾಹಿತ್ಯಿಕ- ಸಾಂಸ್ಕೃತಿಕ ವ್ಯಕ್ತಿತ್ವ”

‘ಗಿರಡ್ಡಿಯವರ ಶೈಲಿಯ ಪಾರದರ್ಶಕತೆಯ ಬಗ್ಗೆ ಹೆಚ್ಚು ಹೇಳುವ ಕಾರಣವಿಲ್ಲ. ಅವರ ಭಾಷೆಯಲ್ಲಿ ವೈಚಾರಿಕ ಗೊಂದಲಕ್ಕೆ ಅವಕಾಶವೇ ಇಲ್ಲ. ವೈಚಾರಿಕ ಬಿಕ್ಕಟ್ಟು ತಲೆದೋರಿದಾಗಲೆಲ್ಲ – ಅದು;ಗ್ರಂಥಕ್ಕೆ ಸಂಬಂಧಿಸಿದ್ದಾಗಿರಬಹುದು ಇಲ್ಲವೆ ವಿಮರ್ಶಕನ ತಿಳಿವಳಿಕೆಯಲ್ಲಿಯೇ ಇರಬಹುದು – ಅದರ ಪರಿಹಾರ ಹೇಗೆ ಆಗಬಹುದೆಂದು ಗಿರಡ್ಡಿಯವರ ಭಾಷೆಗೇ ಗೊತ್ತಿರುತ್ತದೆ. ಭಾಷೆ ಸೂಚಿಸುವ ಪರಿಹಾರವನ್ನು ಒಪ್ಪಲೇಬೇಕೆಂಬ ಹಟವೂ ಅವರ ಭಾಷೆಗೆ ಇಲ್ಲ. ಮುಖ್ಯವಾಗಿ ಅವರ ಭಾಷೆ ಯಾವುದೇ ಬಗೆಯ ಆವೇಶದಿಂದ, ತನ್ಮಯತೆಯಿಂದ ಬೀಗುವುದಿಲ್ಲ. ಎತ್ತಿಕೊಂಡ ವಿಷಯದೊಡನೆ ಚಕ್ಕಂದವಾಡುತ್ತ, ಆಟದಲ್ಲಿ ತನ್ಮಯವಾಗದೆ, ಉದ್ದೇಶ ಪೂರ್ತಿಯಾದೊಡನೆ, ಅದರಿಂದ […]