Your Cart

Need help? Call +91 9535015489

📖 Print books shipping available only in India. ✈ Flat rate shipping

“ಹಿರಿಯ ಯಕ್ಷಗಾನ ಕಲಾವಿದ ನೆಬ್ಬೂರು ನಾರಾಯಣ ಭಾಗವತ ನಿಧನ

ಬೆಂಗಳೂರು: ಪ್ರಸಿದ್ಧ ಯಕ್ಷಗಾನ ಕಲಾವಿದ ನೆಬ್ಬೂರು ನಾರಾಯಣ ಭಾಗವತರು ಶನಿವಾರ ನಿಧನರಾದರು.ನೆಬ್ಬೂರರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ತಮ್ಮ ಶ್ರೀಮಂತ ಕಂಠದಿಂದ ಯಕ್ಷಗಾನದ ಕಲಾ ವ್ಯವಸಾಯದಲ್ಲಿ ಭಾಗವತರಾಗಿ ಪ್ರಸಿದ್ಧರಾದವರು. ಕೋಟ ಅಮೃತೇಶ್ವರಿ ಮೇಳ, ಇಡುಗುಂಜಿಯ ಕೆರೆಮನೆ ಮೇಳಗಳಲ್ಲಿ ಮೂರು ತಲೆಮಾರಿನ ಕಲಾವಿದರನ್ನು ಕುಣಿಸಿ, ಮೆರೆಸಿದ್ದಾರೆ.ದೇಶ, ವಿದೇಶಗಳಲ್ಲಿಯೂ ನೆಬ್ಬೂರರ ಸ್ವರಮಾಧುರ್ಯ ಕಲಾಸಹೃದಯರ ಕಿವಿಗಳಲ್ಲಿ ಅನುರಣಿಸಿದೆ. courtsey:prajavani.net https://www.prajavani.net/stories/stateregional/yakshagana-artist-death-635783.html

“ಪುನರುತ್ಥಾನದ ಸ್ಮಾರಕ”

“”ಪುನರುತ್ಥಾನದ ಸ್ಮಾರಕ” ಇದು ಸೆನೆಗಲ್ ದೇಶ ಫ್ರಾನ್ಸ್‌ನಿಂದ ಸ್ವಾತಂತ್ರ್ಯ ಪಡೆದ ಐವತ್ತನೆಯ ವರ್ಷದ ನೆನಪಿಗಾಗಿ ನಿರ್ಮಿಸಿದ್ದು. ಈ ಸ್ಮಾರಕದ ಉದ್ಘಾಟನೆ ಆಗಿದ್ದು 2010ರ ಏಪ್ರಿಲ್‌ನಲ್ಲಿ. ಸೆನೆಗಲ್‌ನ ರಾಜಧಾನಿ ಡಾಕಾರ್‌ನ ಹೊರವಲಯದ ಒಂದು ಬೆಟ್ಟದ ಮೇಲೆ ಇದು ನಿಂತಿದೆ. ಇದು ಆಫ್ರಿಕಾ ಖಂಡದ ಅತಿ ಎತ್ತರದ ಪ್ರತಿಮೆಯೂ ಹೌದು.ಇದರ ಎತ್ತರ 49 ಮೀಟರ್. ಒಬ್ಬ ಪುರುಷ, ಒಬ್ಬ ಮಹಿಳೆ ಮತ್ತು ಒಂದು ಮಗು ಜ್ವಾಲಾಮುಖಿಯಿಂದ ಮೇಲೆದ್ದು ಬಂದಂತೆ ಇದನ್ನು ನಿರ್ಮಿಸಲಾಗಿದೆ. ಈ ಮೂವರು ಅಟ್ಲಾಂಟಿಕ್‌ ಸಮುದ್ರದ ಕಡೆ ಮುಖ […]

ಪ್ರೇಕ್ಷಕರ ಮನಗೆದ್ದ ಸುರಕ್ಷಾ ವಿಜಯ ಯಕ್ಷಗಾನ ಪ್ರಸಂಗ

ಪ್ರೇಕ್ಷಕರ ಮನಗೆದ್ದ ಸುರಕ್ಷಾ ವಿಜಯ ಯಕ್ಷಗಾನ ಪ್ರಸಂಗ ಪಣಂಬೂರಿನ ಕೆಐಓಸಿಎಲ್ ಸಂಸ್ಥೆಯ ಬ್ಲಾಸ್ಟ್ ಫರ್ನೆಸ್ ಯೂನಿಟ್ ಸಭಾಂಗಣದಲ್ಲಿ ವಿಶ್ವಉಕ್ಕು ಸುರಕ್ಷತಾ ದಿನಾಚರಣೆ ಅಂಗವಾಗಿ, ಕಾರ್ಖಾನೆಗಳಲ್ಲಿ ಸುರಕ್ಷತೆ ಸಂದೇಶ ಸಾರುವ ‘ಸುರಕ್ಷಾ ವಿಜಯ’ ಯಕ್ಷಗಾನ ಪ್ರಸಂಗ ಹಮ್ಮಿಕೊಳ್ಳಲಾಗಿತ್ತು. ಜಂಟಿ ಪ್ರಧಾನ ವ್ಯವಸ್ಥಾಪಕ ಟಿ. ಗಜಾನನ ಪೈ ಅವರ ಪ್ರೇರಣೆಯಿಂದ, ಸಂಸ್ಥೆಯ ಉದ್ಯೋಗಿ ಜಯಪ್ರಕಾಶ್ ಹೆಬ್ಬಾರ್ ರಚಿಸಿ ನಿರ್ದೇಶಿಸಿದ ಒಂದು ಗಂಟೆ ಕಾಲ ಪ್ರಸಂಗ ಹೀಗೆ ಸಾಗುತ್ತದೆ. ಸುರಕ್ಷಿತ ಮಹಾರಾಜ ಬಿಳಿ ಕುದುರೆಯನ್ನೇರಿ ತನ್ನ ಆಳ್ವಿಕೆಯಲ್ಲಿರುವ ‘ಅಶ್ವಪುರ’ ಕ್ಕೆ ಬರುತ್ತಾನೆ. […]

ಸಂಗೀತಗಾರನಿಗೆ ಒಲಿದ ಶಿಲ್ಪಕಲೆ

ಸಂಗೀತಗಾರನಿಗೆ ಒಲಿದ ಶಿಲ್ಪಕಲೆ ಹುಟ್ಟಿದಾಗಿನಿಂದ ಸಂಗೀತದ ನೀನಾದ ಕೇಳಿಸಿಕೊಂಡು ಬೆಳೆದ ಹುಡುಗನನ್ನು ಸೆಳೆದದ್ದು ಶಿಲ್ಪಕಲೆ. ಸಂಗೀತವನ್ನು ಬಿಡದೆ, ಶಿಲ್ಪಕಲೆಯನ್ನೂ ಕರಗತ ಮಾಡಿಕೊಂಡ ಅವರು ಈ ಎರಡೂ ಕಲೆಯಲ್ಲೂ ಮಿಂಚುತ್ತಿದ್ದಾರೆ. ಶ್ರದ್ಧೆ ಮತ್ತು ಬದ್ಧತೆಯಿಂದ ಕಲಿತ ಕಾರಣಕ್ಕೆ ಎರಡೂ ವಿದ್ಯೆ ಒಲಿದಿದೆ ಎನ್ನುತ್ತಾರೆ ಅನಂತ ಸತ್ಯಂ. ಸಾಮಾನ್ಯವಾಗಿ ಸಂಗೀತ ಕಲಾವಿದರು ಶಿಲ್ಪಕಲೆಯತ್ತ ಆಸಕ್ತಿ ಬೆಳೆಸಿಕೊಳ್ಳುವುದು ಕಡಿಮೆ. ಶಿಲ್ಪ ಕಲಾವಿದರಿಗೆ ಸಂಗೀತದ ಆಸಕ್ತಿ ಇರುತ್ತದೆಯಾದರೂ, ಶಾಸ್ತ್ರ ಬದ್ಧವಾಗಿ ಅದನ್ನು ಕಲಿಯುವುದು ಕಡಿಮೆಯೇ. ಇಂಥವರಲ್ಲಿ ಅಪರೂಪದ ವ್ಯಕ್ತಿ ವಿದ್ವಾನ್‌ ಎನ್‌. ಅನಂತ […]

ಶಿಲ್ಪಕಲೆ ಮೋಡಿಗಾರ ಅಶೋಕ್

ಶಿಲ್ಪಕಲೆ ಮೋಡಿಗಾರ ಅಶೋಕ್ ಬೃಹತ್ ಮೂರ್ತಿಗಳ ಕೆತ್ತನೆಗೆ ಶಿಲ್ಪಿ ಅಶೋಕ್ ಗುಡಿಗಾರ್ ಹೆಸರುವಾಸಿ. ಆತ್ಮತೃಪ್ತಿಗಾಗಿ ಶಿಲ್ಪಕಲಾ ಕ್ಷೇತ್ರಕ್ಕೆ ಬಂದ ಅವರು ಇದುವರೆಗೆ ಆಂಜನೇಯ, ಕನಕದಾಸರ, ವಿವೇಕಾನಂದ ಸೇರಿದಂತೆ ಸಾವಿರಾರು ಮೂರ್ತಿಗಳನ್ನು ಕೆತ್ತನೆ ಮಾಡಿದ್ದಾರೆ.  ಶಿವಮೊಗ್ಗದ ಸಾಗರ ನಮ್ಮೂರು. ಕಲ್ಲಿನ ವಿಗ್ರಹಗಳ ಕೆತ್ತನೆ ಕುಲಕಸುಬು. ತಂದೆ ಚಿಕ್ಕಣ್ಣ ಗುಡಿಗಾರ್ ಸಣ್ಣಪುಟ್ಟ ವಿಗ್ರಹಗಳ ಕೆತ್ತೆನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಅವರಿಂದಲೇ ಈ ಕಲೆ ಕಲಿತೆ. ಅವರೇ ನನ್ನ ಮೊದಲ ಗುರು. ಶಿಲ್ಪಕಲೆ ಬಗ್ಗೆ ಚಿಕ್ಕಂದಿನಿಂದಲೂ ಅತಿಯಾದ ಆಸಕ್ತಿ. ಹೀಗಾಗಿ, 16ನೇ […]