Your Cart

Need help? Call +91 9535015489

📖 Print books shipping available only in India. ✈ Flat rate shipping

ವೈಎಮ್ಮೆನ್ ಮೂರ್ತಿ – ವಿಚಾರಕ್ಕೂ ಸೈ, ವಿನೋದಕ್ಕೂ ಸೈ

ಪ್ರಜಾವಾಣಿಯ ಸುಧಾ ಬಳಗದ ಬರಹಗಾರ ಎನ್‌ ರಾಮನಾಥ್‌ ಅವರು ವೈಎಮ್ಮೆನ್ ಮೂರ್ತಿ ಅವರನ್ನು ಸಂದರ್ಶನ ಮಾಡಿದ್ದರು. ಇದು 2015ರ ಏಪ್ರಿಲ್‌ ತಿಂಗಳ ಸುಧಾ ವಾರ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಸಂದರ್ಶನದ ಪೂರ್ಣ ಪಾಠ ಇಲ್ಲಿದೆ…ತಲೆಗೆ ಪೇಸ್ಟ್ ಆಗಿರುವಂತಹ ರೀತಿಯ ಕಪ್ಪನೆಯ ಟೋಪಿ. ಎದ್ದು ಕಾಣುವ ಕನ್ನಡಕ. 88 ವಸಂತಗಳ ಪ್ರತಿ ಗೆರೆಯೂ ಎದ್ದು ಕಾಣುವ ಮುಖ. ಆದರೆ 88 ವಯಸ್ಸಿನವರು ‘ಅಯ್ಯೋ ನೋವು; ಅಯ್ಯೋ ಜೀವನ ಸಾಕಪ್ಪ’ ಎಂಬ ಮಾಮೂಲು ಭಾವ ತಪ್ಪಿಯೂ ಕಾಣದ ಕಿರುನಗೆಯ ನೋಟ; ಆ […]

ಶಾಲೆಗಳಲ್ಲಿ ಕನ್ನಡದ ಅಸಡ್ಡೆ

ಕರ್ನಾಟಕ ನಮಗೆಲ್ಲಾ ಸೂರು, ಅನ್ನ, ನೀರು ಕೊಡುತ್ತಿದೆ. ಕನ್ನಡವನ್ನು ಸಾಹಿತ್ಯ ಮುಖೇನ ಬೆಳೆಸುವ ಮೂಲಕ ನಾವೆಲ್ಲಾ ಕರ್ನಾಟಕದ ಋಣ ಸಂದಾಯ ಮಾಡುವುದು ಬೇಡವೇ? ಕರ್ನಾಟಕದಲ್ಲಿ ಬಹುತೇಕರಿಗೆ ಮೊದಲಿನಿಂದಲೂ ಆಂಗ್ಲ ಭಾಷೆಯ ವ್ಯಾಮೋಹ. ಆದರೆ ಶಾಲಾ ಕಾಲೇಜುಗಳಲ್ಲಿ ಸಾಹಿತ್ಯ ಮತ್ತು ಕನ್ನಡ ಸಂಘಗಳ ಮೂಲಕ ಕನ್ನಡ ಸಾಹಿತ್ಯವನ್ನು ಉಳಿಸುವ ಮತ್ತು ಪಸರಿಸುವ ಕೆಲಸ ಮಾಡುತ್ತಿದ್ದೆವು. 21ನೆಯ ಶತಮಾನದ ಎರಡನೇ ದಶಕದಲ್ಲಿ ಈ ಸಂಘಟನೆಗಳು ಕೂಡಾ ಸ್ತಬ್ಧವಾಗಿವೆ. ಬೇಕಾದರೆ ಒಂದು ಸಮೀಕ್ಷೆ ಮಾಡಿ ನೋಡಿ. ಶಾಲಾ ಕಾಲೇಜುಗಳಲ್ಲಿ ಸಾಹಿತ್ಯ ಮತ್ತು […]

ಶಿಕ್ಷಣದ ಹಾನಿಗಳು

ಬುಕರಾತರು ಯುವೋಸಿಯಾ ನಗರದ ಒಂದು ಗಲ್ಲಿಯಿಂದ ಹಾದು ಹೋಗುತ್ತಿದ್ದರು, ಆಗ ಕೆಲವರು ಅವರನ್ನು ತಡೆದು ಹೇಳಿದರು, ‘ಬುಕರಾತ್, ನಾವು ನಿಮ್ಮಲ್ಲಿ ಒಂದು ವಿಷಯವನ್ನು ಕೇಳಲು ಬಯಸುತ್ತೇವೆ.’‘ನಿಮಗೆ ಸ್ವಾಗತ’ ಎಂದರು ಬುಕರಾತ್.‘ಬುಕರಾತ್, ನೀವೇಕೆ ಶಿಕ್ಷಣವನ್ನು ವಿರೋಧಿಸುತ್ತೀರಿ? ನೀವು ನಿಮ್ಮ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಮಾಡಿಸಲಿಲ್ಲ. ನೆರೆಹೊರೆಯ ಮಕ್ಕಳು ವಿದ್ಯಾಭ್ಯಾಸವನ್ನು ಮಾಡದಂತೆ ತಡೆದಿರಿ. ನೀವು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ಯಾಕೆ ಶತ್ರುವಾಗಿದ್ದೀರ? ನೀವು ಶಾಲೆಗಳನ್ನು ನಾಶ ಮಾಡುತ್ತೀರಿ. ಇದರ ಹಿಂದಿನ ರಹಸ್ಯವೇನು?’ ಜನ ಪ್ರಶ್ನಿಸಿದರು. ಬುಕರಾತ್ ದೀರ್ಘವಾಗಿ ಉಸಿರೆಳೆದುಕೊಂಡರು. ತಮ್ಮ ಉತ್ತಮ […]

ಸ್ತ್ರೀವಾದ ಮತ್ತು ಲೈಂಗಿಕತಾವಾದ

ಮನುಷ್ಯ ಮೌಲ್ಯ ಕಳೆದುಕೊಂಡು ಬದುಕುತ್ತಿರುವ ಈ ಸಮಾಜದಲ್ಲಿ ಪುರುಷ ಧೋರಣೆಗಳು ಮಹಿಳೆಯರನ್ನು ಹತ್ತಿಕ್ಕುತ್ತಲೇ ಬಂದಿವೆ. ಶೋಷಣೆಗಳನ್ನೂ ಮೀರಿ ಸ್ತ್ರೀಯರು ಸಮಾಜದ ಮುನ್ನೆಲೆಗೆ ಬರುತ್ತಿರುವುದು ಒಂದೆಡೆ ಸಂತಸ ತಂದರೆ, ಮತ್ತೊಂಡೆ ಅಂಥವರನ್ನು ನೋಡುವ ದೃಷ್ಠಿಕೋನವೇ ಬೇರೆ.ಪ್ರತಿ ನಿತ್ಯ ಅತ್ಯಾಚಾರ, ಹಿಂಸೆಗಳು, ಲೈಂಗಿಕ ಕಿರುಕುಳಗಳು ವರದಿಯಾಗುತ್ತಲೇ ಇವೆ. ಇವುಗಳನ್ನು ಪ್ರಶ್ನಿಸುವ ಹಿನ್ನೆಲೆಯಲ್ಲಿ ಸ್ತ್ರೀವಾದಿಗಳು ಧನಿ ಎತ್ತಿದ್ದು, ನಿರಂತರ ಹೋರಾಟ ಮಾಡುತ್ತಲೇ ಇದ್ದಾರೆ. ಸ್ತ್ರೀವಾದ ಮತ್ತು ಲೈಂಗಿಕತಾವಾದಗಳು ಹೇಗೆ ಹುಟ್ಟಿದವು ಮತ್ತು ಪುರುಷ ಪ್ರಧಾನ ಸಮಾಜದಲ್ಲಿ ಸ್ತ್ರೀಯರ ಸ್ಥಾನಮಾನವನ್ನು ಹೇಳುವ ಪ್ರಯತ್ನವನ್ನು […]

ದ್ರೌಪದಿಯ ಮೋಹ

ಜಾಂಬವಂತನ ನೆಲದಲಿ ಜಂಬು ನೇರಳೆಯ ಕಥೆ ಕಟ್ಟಿ ಪಾಂಡವರಿಗೆ ದೊರಕಿದ ಹೆಣ್ಣಿನ, ಹಣ್ಣಿನ ಭಾಗ, ವಿಭಾಗ, ಪಾಲು ವಿಭಾಗ ಹಂಚಿದ್ದು ಹಂಚಿಕೆಯಾಗಿದ್ದು ಹಂಚಿಕೆಗೊಳಪಟ್ಟಿದ್ದು ದ್ರೌಪದಿ. ಭರತ ಖಂಡದಲಿ ಸತ್ಯ ಸಂಧತೆಯು ಮೆರೆದು ಭೀಮನು ಕಿತ್ತ ಜಂಬುನೇರಳೆ ಶಾಪ ವಿಮೋಚನೆಗೊಳಪಟ್ಟು ಸತ್ಯ ವಾಚನಕ್ಕೆ ಮತ್ತೆ ಮರ ಸೇರುವುದು ಭ್ರಮೆಯನ್ನುಟ್ಟು ಭ್ರಮೆಯಲಿ ಸಾಗಿ ಕೃಷ್ಣನೆಂಬ ಆಪತ್ಬಾಂಧವನಾಟವೋ ದ್ರೌಪದಿಯಾಡಿದ ಸುಳ್ಳೊ ಸತ್ಯವೋ ಸುಳ್ಳಿಗೆ ನಿಂತು ಸತ್ಯಕ್ಕೆ ಮೇಲ್ಸಾಗುವ ಜಂಬು ನೇರಳೆ ಇದು ದ್ರೌಪದಿಯ ಪರೀಕ್ಷೆಯೋಹೆಣ್ಣಿನ ಹೆಣ್ತನದ ಪರಿಕ್ಷೆಯೋ ಹೆಣ್ಣಿನೊಡಲಿನ ಸತ್ಯ ಬಗೆಬಗೆದು […]

ಶೆಟ್ಟರ್‌ ಶೈಲಿ ಪರಂಪರೆಯಿಂದ ಭಿನ್ನಗ್ರಹಿಕೆ

ಪ್ರೊ.ಷ. ಶೆಟ್ಟರ್‌ ಅವರು ನಮ್ಮ ನಡುವೆ ಈಗ ಇಲ್ಲವಾಗಿದ್ದಾರೆ. ಇತಿಹಾಸ, ಪ್ರಾಕ್ತನಶಾಸ್ತ್ರ, ಕಲಾ ಇತಿಹಾಸ ಹೀಗೆ ವಿವಿಧ ಶಿಸ್ತುಗಳಲ್ಲಿ ಪರಿಣತಿ ಪಡೆದಿದ್ದ ಅವರ ಹೆಸರು ಕರ್ನಾಟಕದ ಸಂಸ್ಕೃತಿ ಶೋಧನೆ, ಇತಿಹಾಸ ಅಧ್ಯಯನ, ಕಲಾ ಚರಿತ್ರೆಯ ಅಧ್ಯಯನ ಇವುಗಳಲ್ಲಿ ಹೊಸ ಬಗೆಯ ಹೊಳಹುಗಳನ್ನು ತೋರಿಸುವುದರ ಮೂಲಕ ಅಜರಾಮರವನ್ನಾಗಿಸಿಕೊಂಡಿದೆ. ಅನೇಕ ಪ್ರಸಿದ್ಧ ಇತಿಹಾಸ ಅಕಾಡೆಮಿಗಳ ಕಲಾ ಇನ್‌ಸ್ಟಿಟ್ಯೂಟ್‌ಗಳ ನಿರ್ದೇಶಕತ್ವವನ್ನು ನಿಭಾಯಿಸಿ ಪರಿಣಾಮಕಾರಿಯಾದ ಕೆಲಸವನ್ನು ಮಾಡಿದ ಕೀರ್ತಿ ಇವರದು. ಆಚಾರ್ಯ ಕುಂದಕುಂದ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ […]

ಹಳಗನ್ನಡ ಕೃತಿಗಳ ಒಳನೋಟ ಮತ್ತು ಪ್ರೋ. ಹಂ . ಪ . ನಾ ಅವರ ಸಾಹಿತ್ಯಲೋಕದ ಒಡನಾಟ

ಹಳಗನ್ನಡ ಕೃತಿಗಳ ಒಳನೋಟ ಮತ್ತು ಪ್ರೋ. ಹಂ . ಪ . ನಾ ಅವರ ಸಾಹಿತ್ಯಲೋಕದ ಒಡನಾಟ | ದಿನಾಂಕ : 22 . 03 . 2020 , ರವಿವಾರ ಸಮಯ : ಬೆಳಿಗ್ಗೆ 9 : 30 ರಿಂದ ಮಧ್ಯಾಹ್ನ 1 : 00 ಗಂಟೆ Brunei Gallary , Room 8103 , School of Oriental and African Studies , University of London ( SOAS ) . […]

ಬೇರು ಮೇಲಾದ ಸಸಿಗೆ ನೀರಿನ ಆರೈಕೆ

ಮರದೊಳಗಣ ಬೆಂಕಿ ತನ್ನ ತಾನೇ ಉರಿಯಬಲ್ಲುದೆ? ಶಿಲೆಯೊಳಗಣ ದೀಪ್ತಿ ಆ ಬೆಳಗ ತನ್ನ ತಾನೇ ಬೆಳಗಬಲ್ಲುದೆ? ಆ ತರನಂತೆ ಕುಟಿಲನ ಭಕ್ತಿ, ಕಿಸುಕುಳನ ವಿರಕ್ತಿ ಮಥನಿಸಿಯಲ್ಲದೆ ದಿಟಹುಸಿಯ ಕಾಣಬಾರದು ಸತ್ಯವನು ಅಸತ್ಯವನು ಪ್ರತ್ಯಕ್ಷ ಪ್ರಮಾಣಿಸಿದಲ್ಲದೆ, ನಿಶ್ಚಯವನರಿಯಬಾರದು ಗುರುವಾದಡೂ, ಲಿಂಗವಾದಡೂ, ಜಂಗಮವಾದಡೂ ಪರೀಕ್ಷಿಸಿ ಹಿಡಿಯದವನ ಭಕ್ತಿ, ವಿರಕ್ತಿ ತೂತಕುಂಭದಲ್ಲಿಯ ನೀರು, ಸೂತ್ರ ತಪ್ಪಿದ ಬೊಂಬೆ, ನಿಜನೇತ್ರ ತಪ್ಪಿದ ದೃಷ್ಟ ಬೇರು ಮೇಲಾದ ಸಸಿಗೆ ನೀರಿನಾರೈಕೆಯುಂಟೆ? ಇಂತು ಆವ ಕ್ರೀಯಲ್ಲಿಯೂ ಭಾವಶುದ್ಧಾತ್ಮನಾಗಿ ಆರೈಕೆ ಬೇಕು ಭೋಗಬಂಕೇಶ್ವರಲಿಂಗದ ಸಂಗದ ಶರಣನ ಸುಖ […]

ಇತಿಹಾಸಕಾರ ಷ.ಶೆಟ್ಟರ್ ನಿಧನ

ಬೆಂಗಳೂರು:  ಅಂತರರಾಷ್ಟ್ರೀಯ ಖ್ಯಾತಿಯ ಇತಿಹಾಸಕಾರ ಷ.ಶೆಟ್ಟರ್ (85) ಶುಕ್ರವಾರ ನಸುಕಿನ 3 ಗಂಟೆಗೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕಳೆದ ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಶ್ವಾಸಕೋಶದಲ್ಲಿ ನೀರು ತುಂಬಿಕೊಂಡು, ಉಸಿರಾಟಕ್ಕೆ ಸಮಸ್ಯೆಯಾಗಿತ್ತು. ಬನ್ನೇರುಘಟ್ಟ ರಸ್ತೆಯ ಸಾಗರ್ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹೆಂಡತಿ ಮತ್ತು ಇಬ್ಬರು ಹೆಣ್ಣುಮಕ್ಕಳು ಇದ್ದಾರೆ. ಭೂಪಸಂದ್ರದ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಂತ್ಯಕ್ರಿಯೆ ಬಗ್ಗೆ ಈವರೆಗೆ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಕುಟುಂಬದ ಮೂಲಗಳು ಹೇಳಿವೆ.ಹೊಸಕೋಟೆಯಲ್ಲಿ ಅವರಿಗೆ ಸೇರಿದ ಜಾಗ ಅಥವಾ ಚಾಮರಾಜಪೇಟೆಯ […]