ರಚನೆ ಯುಮ್ನಾಮ್ ರಾಜೇಂದ್ರ ಸಿಂಗ್ ಇಂಗ್ಲೀಷ್ ಅನುವಾದ ಹೈಸ್ನಾಮ್ ನೋರೆನ್ ಸಿಂಗ್ ಕನ್ನಡ ಅನುವಾದ ಬಿ.ಆರ್. ವೆಂಕಟರಮಣ ಐತಾಳ ಮತ್ತು ನೇಹಾ ಶಿಶಿರ

ರಚನೆ ಯುಮ್ನಾಮ್ ರಾಜೇಂದ್ರ ಸಿಂಗ್ ಇಂಗ್ಲೀಷ್ ಅನುವಾದ ಹೈಸ್ನಾಮ್ ನೋರೆನ್ ಸಿಂಗ್ ಕನ್ನಡ ಅನುವಾದ ಬಿ.ಆರ್. ವೆಂಕಟರಮಣ ಐತಾಳ ಮತ್ತು ನೇಹಾ ಶಿಶಿರ
ಟಿ.ಪಿ.ಅಶೋಕ ಅವರ ಬರಹವೊಂದರಿಂದ ಆಯ್ದ ಭಾಗಗಳು ಈ ನಾಟಕವನ್ನು ಒಂದು ಸ್ವತಂತ್ರ ನಾಟಕವಾಗಿಯೂ ಹಾಗೂ ಅಕ್ಷರ ಅವರ ಹಿಂದಿನ ನಾಟಕಗಳಾದ “ಸ್ವಯಂವರ ಲೋಕ” ಮತ್ತು “ಭಾರತ ಯಾತ್ರೆ”ಗಳ ಮುಂದುವರೆದ ಭಾಗವಾಗಿಯೂ ಓದಬಹುದು. “ಸ್ವಯಂವರ ಲೋಕ” ನಾಟಕವು ಹಳೆಯೂರು ಎಂಬ ದ್ವೀಪವೊಂದರಲ್ಲಿ ನಡೆಯುತ್ತದೆ. `ಅಭಿವೃದ್ಧಿ’ಗಾಗಿ ನದಿಯೊಂದಕ್ಕೆ ಅಣೆಕಟ್ಟು ಕಟ್ಟಿದ ಪರಿಣಾಮವಾಗಿ ಹಳೆಯೂರು ಒಂದು ದ್ವೀಪವಾಗಿದೆ. ಅದು ಒಂದು `ಹಿಂದುಳಿದ’ ಪ್ರದೇಶ…..
ನಾಟಕದ ಬಗ್ಗೆ: ಇದು ಈವತ್ತಿನ ಕಾಲದಲ್ಲಿ ಜರುಗುವ ನಾಟಕ. ರೋಚಕ ಕಥೆಯೊಂದರ ಬೆನ್ನಟ್ಟಿ ಹೋದ ಪತ್ರಕರ್ತನೊಬ್ಬನಿಗೆ ಎದುರಾಗುವ ಜಗತ್ತು ಇಲ್ಲಿ ಹಲವು ಪಾತಳಿಗಳಲ್ಲಿ ಬಿಚ್ಚಿಕೊಳ್ಳುತ್ತ ಹೋಗುತ್ತದೆ. ಅವನು ಸೃಷ್ಟಿಸಿದ ಸುದ್ದಿಯ ಮುಖಾಂತರ ಅವನ ಜೀವನದೊಳಕ್ಕೆ ಬರುವ ಜನರು ಅವರವರ ಕಥೆಗಳನ್ನು ಮುಂಚೂಣಿಗೆ ತರುತ್ತಾರೆ ಮತ್ತು ಆ ಮೂಲಕ ಪಲ್ಲಟದ ನೋವು, ಶಹರದ ಬದುಕಿನ ಢಾಂಬಿಕತೆ, ಪೊಳ್ಳು ಸಂಬಂಧಗಳ ಅಸಹನೀಯತೆ, ನಗರವೆಂಬ ಬೆಂಕಿಯೊಳಗೆ ಬಿದ್ದು ಉರಿದುಹೋಗುತ್ತಿರುವ ಜೀವನಕ್ರಮಗಳು ಅನಾವರಣಗೊಳ್ಳುತ್ತವೆ.