Shopping Cart

Need help? Call +91 9535015489

📖 Paperback books shipping available only in India.

✈ Flat rate shipping

Loading Events

« All Events

“ಹರಿದಾಸರ ೧೦೦೦೦ ಹಾಡು” ಬ್ರಹತ್ ಗ್ರಂಥ ಇ-ಪುಸ್ತಕ ಬಿಡುಗಡೆ

August 1 @ 6:00 pm - 7:30 pm IST

Event: International release of “Haridaasara 10000 Hadugalu”/ 10000 Songs collection of Haridaasaru
Event Date: 1st August 2020
Time: 6 PM IST / 1.30 PM BST
Book by: Dr. Aralumallige Parthasarathy
Release by: GBSRSB Team UK
Supported by: World Forum of Sri Vyasaraja Devotees – Michigan/New Jersey/ California – USA

೧ ಆಗಸ್ಟ್ ೨೦೨೦ ರಂದು ವಿದ್ಯಾ ವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅವರ ಹರಿದಾಸರ ೧೦೦೦೦ ಹಾಡುಗಳ ಬ್ರಹತ್ ಗ್ರಂಥ ಇ-ಪುಸ್ತಕ ರೂಪದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ಗ್ರೇಟ್ ಬ್ರಿಟನ್ ರಾಘವೇಂದ್ರ ಸ್ವಾಮಿ ಬೃಂದಾವನ (GBSRSB) ಅವರ ತಂಡದವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ.
ಅಂದು ಬಿಡುಗಡೆ ದಿನ ಪುಸ್ತಕ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ.

ಅಂದೇ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅವರು ದಾಸ ಸಾಹಿತ್ಯದ ಕಿರು ಪರಿಚಯ ಕೂಡಾ ಕೊಡಲಿದ್ದಾರೆ.

ಕನ್ನಡ ಭಕ್ತಿ ಸಾಹಿತ್ಯದಲ್ಲಿ ಒಂದು ವಿಶಿಷ್ಟ ಸ್ಥಾನ ದಾಸ ಸಾಹಿತ್ಯ ಪರಂಪರೆಗೆ. ಭಗವಂತನ ವಿವಿಧ ರೂಪ, ಗುಣ ಬಗ್ಗೆ ತಿಳಿಸುತ್ತ ಜನರಿಗೆ ಭಕ್ತಿಯ ಮಾರ್ಗ ತೋರಿಸುವ ಒಂದು ಪದ್ಧತಿ ದಾಸರು ನಡೆಸುಕೊಂಡು ಬಂದಿದ್ದಾರೆ.

‘ಹಿಂದೆ ದಾಸಸಾಹಿತ್ಯವನ್ನು ಸಾಹಿತ್ಯವೆಂದು ಎಣಿಸುತ್ತಿರಲಿಲ್ಲವೆಂದು ತೋರುತ್ತದೆ. ದಾಸರು ಕವಿಗಳ ಜೊತೆಗೆ ತಾವೂ ಕವಿಗಳೆಂದು ಹೇಳಿಕೊಳ್ಳದೇ ಇದ್ದುದು ಇದರ ಮುಖ್ಯ ಕಾರಣವಾಗಿರಬೇಕು…’ ಎಂದು ಡಾ. ಮಾಸ್ತಿ ಅವರು ಗುರುತಿಸಿದ್ದಾರೆ. ಆದರೆ ದಾಸರು ಈ ಬಗ್ಗೆ ಚಿಂತಿಸಿದವರಲ್ಲ. ‘ಸರ್ವೋತ್ತುಮನ ಸ್ತುತಿಸಲಿಕ್ಕೆ ಸರಿಬೆಸದಕ್ಷರದೆಣಿಕ್ಯಾಕೆ, ಯತಿ ಛಲ ಗಣ ಪ್ರಾಸವ್ಯಾಕೆ’ ಎಂದು ಕಾಖಂಡಕಿ ಮಹಿಪತಿ ದಾಸರು ಕೇಳಿದ್ದಾರೆ. ೧೨ನೆಯ ಶತಮಾನದ ಬಸವಣ್ಣನವರು ಇದೇ ರೀತಿಯಲ್ಲಿ ‘ತಾಳಮಾನ ಸರಿಸವನರಿಯೆ, ಓಜೆ ಬಜಾವಣೆಯ ಲೆಕ್ಕವನರಿಯೆ, ಅಮೃತಗಣ ದೇವಗಣವನರಿಯೆ, ಕೂಡಲಸಂಗಮದೇವಾ, ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ’ ಎಂದರು. ಶರಣರು, ದಾಸರೆಲ್ಲ ಸಾಹಿತಿಗೆ ಅವಶ್ಯಕವಾದ ರೀತಿಯಲ್ಲಿ ಅಧ್ಯಯನವನ್ನು ಮಾಡಿದವರಲ್ಲ. ಒಬ್ಬಿಬ್ಬರನ್ನು ಬಿಟ್ಟರೆ ಅವರು ಲೌಕಿಕ ಕಾವ್ಯಗಳನ್ನಾಗಲೀ, ಕಾವ್ಯ ಲಕ್ಷಣಗಳನ್ನಾಗಲೀ ಗಮನಿಸಿದವರಲ್ಲ. ಭಕ್ತಿಯ ನೆಲೆಯಲ್ಲಿ ಸೃಷ್ಟಿಯಾದ ಈ ಕೃತಿಗಳಿಗೆ ಅದರ ಅಗತ್ಯವೂ ಇರಲಿಲ್ಲ.

ಬನ್ನಿ, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ.

Airmeet Live: https://airmeet.com/e/9c258ee0-d0d5-11ea-83cc-ab4144132fa7

Facebook Live: https://www.facebook.com/vividlipi/live

Youtube Live: https://www.youtube.com/vividlipi/live

Live Video Platform: Airmeet is new virtual meeting software that is best experienced in Laptop/Desktop. Video chat with the presenter using Laptop/Desktop using the feature “Raise your hand”. Users joining through mobile has to type the questions.
Use Guest Login if you don’t prefer to login through Email or Social media login.