Need help? Call +91 9535015489

📖 Print books shipping available only in India. ✈ Flat rate shipping

Loading Events

« All Events

ಭೀಮಪಲಾಸ ಸಂಗೀತೋತ್ಸವ -16.10.2021

October 16 @ 5:00 am - 8:30 pm IST

ಭಾರತರತ್ನ ಪಂ. ಭೀಮಸೇನ ಜೋಶಿ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಅ. 16 ರಂದು ಶನಿವಾರ, ಸಂಜೆ 5 ಗಂಟೆಗೆ ಹುಬ್ಬಳ್ಳಿಯ ಸವಾಯಿ ಗಂಧರ್ವ ಕಲಾಮಂದಿರದಲ್ಲಿ ನವದೆಹಲಿಯ ಪಂ. ಹರೀಶ ತಿವಾರಿ ಹಾಗೂ ವಿಜಯಪುರದ ಕೃತ್ತಿಕಾ ಜಂಗಿನಮಠ ಅವರಿಂದ ಕಲಾಪ್ರದರ್ಶನ ನಡೆಯಲಿದೆ. ಸಹಕಲಾವಿದರಾಗಿ ಪಾಲ್ಗೊಳ್ಳಲಿರುವ ಪಂ. ರಘುನಾಥ ನಾಕೋಡ, ಕಾರ್ತಿಕ ಜಂಗಿನಮಠ ತಬಲಾ ಹಾಗೂ ಪಂ. ಸುಧಾಂಶು ಕುಲಕರ್ಣಿ ಹಾರ್ಮೋನಿಯಂ ಸಾಥ್ಸಂಗತ್ ಮಾಡಲಿದ್ದಾರೆ.

ಧಾರವಾಡದ ವಿವಿಡ್ಲಿಪಿ ಸಂಸ್ಥೆಯು ಈ ಕಾರ್ಯಕ್ರಮದ ನೇರಪ್ರಸಾರವನ್ನು ಮಾಡಲಿದೆ.

Facebook Live : https://www.facebook.com/vividlipi/live

Youtube Live : https://www.youtube.com/vividlipi/live

Download VIVIDLIPI Mobile App : www.vividlipi.com/app

 

ಧಾರವಾಡದ ಜಿ. ಬಿ. ಜೋಶಿ ಮೆಮೊರಿಯಲ್ ಟ್ರಸ್ಟ್ ಹಾಗೂ ಹುಬ್ಬಳ್ಳಿಯ ಕ್ಷಮತಾ ಸಂಸ್ಥೆಗಳು ಜಂಟಿಯಾಗಿ ಭೀಮಪಲಾಸ ಸಂಗೀತೋತ್ಸವವನ್ನು ರಾಜ್ಯಾದ್ಯಂತ ವರ್ಷಪೂರ್ತಿ ಹಮ್ಮಿಕೊಂಡಿವೆ. ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆ, ಇನ್ಫೋಸಿಸ್ ಫೌಂಡೇಶನ್, ಭಾರತೀಯ ಜೀವ ವಿಮಾ ನಿಗಮ, ಎಲ್ಐಸಿಯ ಹೌಸಿಂಗ್ ಫೈನಾನ್ಸ್ಗಳ ಸಹಪ್ರಾಯೋಜಕತ್ವದಲ್ಲಿ ಆಯೋಜನೆಗೊಂಡಿದೆ.

ಡಾ. ಹರೀಶ ತಿವಾರಿ, ನವದೆಹಲಿ (ಗಾಯನ)

ಕಿರಾನಾ ಘರಾಣೆಯ ಪ್ರಬುದ್ಧ ಪ್ರತಿಭೆ ನವದೆಹಲಿಯ ಪಂ. ಹರೀಶ ತಿವಾರಿ ಅವರು. ಬಾಲ್ಯದಿಂದಲೇ ಸಂಗೀತದತ್ತ ಒಲವು ಬೆಳೆಸಿಕೊಂಡ ಹರೀಶ ಅವರು ತಮ್ಮ ಪ್ರಾಥಮಿಕ ಸಂಗೀತ ಶಿಕ್ಷಣ ಪಡೆದದ್ದು ಉತ್ತರ ಪ್ರದೇಶದ ಸಂಗೀತಗಾರ ಪಂ. ಠಾಕೂರ್ ಚೌಬೆ ಅವರಲ್ಲಿ. ನಂತರ ಬನಾರಸ ಹಿಂದು ವಿಶ್ವವಿದ್ಯಾಲಯದಲ್ಲಿ ದಿ. ಅಜಿತ ಭಟ್ಟಾಚಾರ್ಯ ಹಾಗೂ ಆಚಾರ್ಯ ನಂದನ ಅವರಲ್ಲಿ ಗ್ವಾಲಿಯರ್ ಘರಾಣೆಯ ಅಧ್ಯಯನ ಮುಂದುವರಿಸಿದರು. ಮುಂದಿನ ದಿನಗಳಲ್ಲಿ ಆಚಾರ್ಯ ಕುಂದನಲಾಲ್ ಶರ್ಮಾ ಅವರಿಂದ ಶಾಮಚೌರಾಸಿ ಘರಾಣೆಯ ಕುರಿತು ಅಭ್ಯಾಸ ಮಾಡಿದರು. ಕಿರಾನಾ ಘರಾಣೆಯತ್ತ ಹೆಚ್ಚು ಆಕರ್ಷಿತರಾದ ಹರೀಶ ಅವರಿಗೆ ಸ್ವರಾಧಿರಾಜ ಪಂ. ಭೀಮಸೇನ ಜೋಶಿ ಅವರ ಮಾರ್ಗದರ್ಶನ ದೊರೆತಿದ್ದು ಓರ್ವ ಪ್ರಬುದ್ಧ ಗಾಯಕರಾಗುವಲ್ಲಿ ಪ್ರಮುಖ ಪಾತ್ರ ವಹಿಸಿತು.
ಆಕಾಶವಾಣಿಯ ಎ ಶ್ರೇಣಿಯ ಕಲಾವಿದರಾಗಿರುವ ಹರೀಶ ತಿವಾರಿ, ಪಂ. ಬಲರಾಮ ಪಾಠಕ ಸ್ಮಾರಕ ಪ್ರಶಸ್ತಿ, ಮುಂಬೈ ಸುರ ಸಂಸದ್ ಪರಿಷತ್ತಿನಿಂದ ‘ಸುರಮಣಿ’ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ‘ಸಂಗೀತ ಮಂಚ ಪ್ರದರ್ಶನದಲ್ಲಿ ಕಲಾವಿದ ಹಾಗೂ ಶ್ರೋತೃಗಳ ಪಾತ್ರ’ ವಿಷಯ ಕುರಿತು ಮಂಡಿಸಿದ ಪ್ರಬಂಧಕ್ಕೆ ದೆಹಲಿ ವಿಶ್ವವಿದ್ಯಾಲಯವು ಡಾಕ್ಟರೇಟ್ ಪ್ರದಾನ ಮಾಡಿ ಗೌರವಿಸಿದೆ. ಡಾ. ಹರೀಶ ಅವರು ಗ್ವಾಲಿಯರ್, ಜಲಂಧರ, ನವದೆಹಲಿ, ಲಖನೌ, ವಾರಣಾಸಿ, ಪಾಟ್ನಾ, ಮುಂಬೈ, ಭೋಪಾಲ್, ಅಲಹಾಬಾದ್, ಧಾರವಾಡ ಹೀಗೆ ದೇಶದ ನಾನಾ ಸಂಗೀತೋತ್ಸವಗಳಲ್ಲಿ ಪಾಲ್ಗೊಂಡಿದ್ದಾರೆ.

ಕು. ಕೃತ್ತಿಕಾ ಜಂಗಿನಮಠ, ವಿಜಯಪುರ (ಬಾನ್ಸುರಿ ವಾದನ)

ನಾಡಿನ ಯುವ ಪ್ರತಿಭಾವಂತ ಬಾನ್ಸುರಿ ವಾದಕಿ ವಿಜಯಪುರದ ಕೃತ್ತಿಕಾ ಜಂಗಿನಮಠ ಅವರು. ಬಾಲ್ಯದಿಂದಲೂ ಗಾಯನ ಹಾಗೂ ಕೊಳಲು ವಾದನದಲ್ಲಿ ಆಸಕ್ತಿ ಹೊಂದಿದವರು. ಆರಂಭದಲ್ಲಿ ಸಜ್ಜನ ಗಾಯಕ ಧಾರವಾಡದ ಪಂ. ಚಂದ್ರಶೇಖರ ಪುರಾಣಿಕಮಠ ಅವರಲ್ಲಿ ಮೂರು ವರ್ಷಗಳ ಕಾಲ ಗಾಯನದ ತರಬೇತಿ ಪಡೆದರು. ನಂತರ ಇವರ ಚಿತ್ತ ಬಾನ್ಸುರಿ ವಾದನದತ್ತ ಹರಿಯಿತು. ಕೃತ್ತಿಕಾಳಿಗೆ ಕೊಳಲುವಾದನಲ್ಲಿ ಅತೀವ ಆಸಕ್ತಿ, ಶ್ರದ್ಧೆ, ಸಾಧನೆಯ ಇಚ್ಛಾಶಕ್ತಿಯನ್ನು ಗಮನಿಸಿದ ದೇಶದ ಕೊಳಲು ಮಾಂತ್ರಿಕ ಪಂ. ಹರಿಪ್ರಸಾದ ಚೌರಾಸಿಯಾ ಅವರು ಶಿಷ್ಯೆಯನ್ನಾಗಿ ಸ್ವೀಕರಿಸಿದರು. ಇಂದಿಗೂ ಕೂಡ ಅವರಲ್ಲಿ ಆಳವಾದ ಮಾರ್ಗದರ್ಶನ ಪಡೆಯುತ್ತಿರುವ ಕೃತ್ತಿಕಾ, ಆಕಾಶವಾಣಿಯ ಬಿ ಹೈಗ್ರೇಡ್ ಕಲಾವಿದೆಯಾಗಿದ್ದಾರೆ. ಮಹಿಳಾ ವಿಶ್ವವಿದ್ಯಾಲಯದಲ್ಲಿ ಸಂಗೀತದಲ್ಲಿ ಎಂ.ಎ. ಅಭ್ಯಾಸ ಮಾಡುತ್ತಿದ್ದಾರೆ. ನಾಡಿನಾದ್ಯಂತ ಬಾನ್ಸುರಿಯ ನಿನಾದವನ್ನು ಹರಿಸಿರುವ ಕೃತ್ತಿಕಾ ಅವರಿಗೆ ಇತ್ತೀಚೆಗಷ್ಟೆ ಸ್ವರಸಾಮ್ರಾಟ್ ಪಂ. ಬಸವರಾಜ ರಾಜಗುರು ಪ್ರತಿಷ್ಠಾನವು ರಾಷ್ಟಿçÃಯ ಯುವ ಪುರಸ್ಕಾರವನ್ನು ಪ್ರದಾನಿಸಿ ಗೌರವಿಸಿದೆ.

Details

Date:
October 16
Time:
5:00 am - 8:30 pm IST
Event Category:
Event Tags:
, , , , , ,

Organiser

Mooka Trust
Phone:
+91 9535015489
Email:
support@vividlipi.com