Need help? Call +91 9535015489

📖 Print books shipping available only in India. ✈ Flat rate shipping

Loading Events

« All Events

‘ಭೀಮಪಲಾಸ’ ಸಂಗೀತೋತ್ಸವ – ಅರ್ಜುನ ವಠಾರ , ಮೊಹಸಿನ್ ಖಾನ್

September 25 @ 6:00 pm - 8:30 pm IST

’ಭೀಮಪಲಾಸ’ ಸಂಗೀತೋತ್ಸವ – ಸೆ. ೨೪ರಿಂದ ಎರಡು ದಿನಗಳ ಗಾಯನ-ವಾದನ

LIVE on VIVIDLIPI
Download VIVIDLIPI Mobile APP – www.vividlipi.com/app

ಭಾರತರತ್ನ ಪಂ. ಭೀಮಸೇನ ಜೋಶಿ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಸೆ. ೨೫ ರಂದು ಸಂಜೆ ೫.೩೦ಕ್ಕೆ ಸೃಜನಾ ರಂಗಮಂದಿರದಲ್ಲಿ ಯುವ ಪ್ರತಿಭೆಗಳ ಕಲಾಪ್ರದರ್ಶನ ನಡೆಯಲಿದೆ. ಧಾರವಾಡದ ಸಿತಾರ ವಾದಕ ಮೊಹಸಿನ ಖಾನ್, ಯಾದಗೀರ ಜಿಲ್ಲೆಯ ಶಹಾಪುರದವರಾದ  ಡಾ. ಅರ್ಜುನ ವಠಾರ ಅವರಿಂದ ಗಾನಸುಧೆ ಮೂಡಿಬರಲಿದೆ.

ಧಾರವಾಡದ ಜಿ.ಬಿ. ಜೋಶಿ ಮೆಮೊರಿಯಲ್ ಟ್ರಸ್ಟ್ ಹಾಗೂ ಹುಬ್ಬಳ್ಳಿಯ ಕ್ಷಮತಾ ಸಂಸ್ಥೆಗಳು ಜಂಟಿಯಾಗಿ ಭೀಮಪಲಾಸ ಸಂಗೀತೋತ್ಸವವನ್ನು ರಾಜ್ಯಾದ್ಯಂತ ವರ್ಷಪೂರ್ತಿ ಹಮ್ಮಿಕೊಂಡಿವೆ. ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆ, ಇನ್ಫೋಸಿಸ್ ಫೌಂಡೇಶನ್, ಭಾರತೀಯ ಜೀವ ವಿಮಾ ನಿಗಮ, ಎಲ್ಐಸಿಯ ಹೌಸಿಂಗ್ ಫೈನಾನ್ಸ್ಗಳ ಸಹಪ್ರಾಯೋಜಕತ್ವದಲ್ಲಿ ಆಯೋಜನೆಗೊಂಡಿದೆ.

ಸಹಕಲಾವಿದರಾಗಿ ಪಾಲ್ಗೊಳ್ಳಲಿರುವ  ಅಲ್ಲಮಪ್ರಭು ಕಡಕೋಳ, ನಿಸಾರ್ ಅಹಮದ್ ತಬಲಾ ಹಾಗೂ ಪರಶುರಾಮ ಕಟ್ಟಿಸಂಗಾವಿ ಹಾರ್ಮೋನಿಯಂ ಸಾಥ್ ಸಂಗತ್ ಮಾಡಲಿದ್ದಾರೆ.

ವಿವಿಡ್ಲಿಪಿ ಸಂಸ್ಥೆಯು ಈ ಕಾರ್ಯಕ್ರಮದ ನೇರಪ್ರಸಾರವನ್ನು ಮಾಡಲಿದೆ.

Youtube Live: https://www.youtube.com/vividlipi/live
Facebook Live –  https://www.facebook.com/vividlipi/live
Twitter Live – https://twitter.com/vividlipi

ಮೊಹಸಿನ ಖಾನ್ (ಸಿತಾರ ವಾದನ)

ಧಾರವಾಡ ಘರಾಣೆಯ ಪ್ರತಿಭಾವಂತ ಯುವ ಸಿತಾರ ವಾದಕರಲ್ಲಿ ಮೊಹಸಿನ್ ಖಾನ ಅವರು. ಧಾರವಾಡದಲ್ಲಿ ಜನಿಸಿದ ಇವರು ಸಿತಾರ ರತ್ನ ರಹಿಮತ್ ಖಾನರ ಮರಿಮೊಮ್ಮಗ. ಇವರದು ಪಾರಂಪರಿಕ ಸಿತಾರ ವಾದಕರ ಮನೆತನ.  ಇಂದೋರ್‌ನ ಬೀನಕಾರ ಘರಾಣೆಯ (ಈಗ ಇದು ಧಾರವಾಡ ಘರಾಣೆಯಂದೇ ಪ್ರಸಿದ್ಧಿ ಪಡೆದಿದೆ.) ೭ನೇ ತಲೆಮಾರಿನ ಸಿತಾರ ವಾದಕ. ಅಜ್ಜ ಪ್ರೊ. ಅಬ್ದುಲ್ ಕರೀಮ್ ಖಾನರಲ್ಲಿ ತಮ್ಮ ೫ನೇ ವಯಸ್ಸಿನಿಂದಲೇ ಸಿತಾರ ವಾದನದ ಕಲಿಕೆ ಪ್ರಾರಂಭಿಸಿದರು. ನಂತರ ತಂದೆ ಡಾ. ಹಮೀದ ಖಾನ್ ಅವರಲ್ಲಿ ಆಳವಾದ ಮಾರ್ಗದರ್ಶನ ಪಡೆದು ಉದಯೋನ್ಮುಖ ಸಿತಾರ ವಾದಕರಾಗಿ ಹೊರಹೊಮ್ಮಿದರು.  ಆಕಾಶವಾಣಿಯ ಎ ಶ್ರೇಣಿಯ ಕಲಾವಿದರಾಗಿರುವ ಇವರು ಅತ್ಯಂತ ಕಡಿಮೆ ಅವಧಿಯಲ್ಲಿ ವಿವಿಧ ವಾಹಿನಿಗಳಲ್ಲಿ ತಮ್ಮ ಸಿತಾರ ವಾದನದ ಪ್ರತಿಭೆಯನ್ನು ಮೆರೆದಿದ್ದಾರೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಕೊಡಮಾಡುವ ಅನೇಕ ಶಿಷ್ಯವೇತನಗಳಿಗೆ ಪಾತ್ರರಾಗಿರುವ ಮೊಹಸಿನ, ನಾದಕಿಶೋರ, ಕಲಾಕಿರಣ, ಸಂಸ್ಕೃತಿ ಪೋಷಕ ಪ್ರಶಸ್ತಿಗಳಿಗಿ ಭಾಜರಾಗಿರುವ ಮೊಹಸಿನ್ ಖಾನ ಅವರು ಗೋವಾ, ಮಹಾರಾಷ್ಟç, ಆಂಧ್ರಪ್ರದೇಶ, ಕೋಲ್ಕತಾ, ರಾಜಸ್ಥಾನ, ನವದೆಹಲಿ ಅಲ್ಲದೇ ಜರ್ಮನಿ, ರಷ್ಯಾ, ಫ್ರಾನ್ಸ್, ನೇಪಾಳ, ದಕ್ಷಿಣ ಕೋರಿಯಾ, ನೆದರ್‌ಲ್ಯಾಂಡ್, ಇಂಡೋನೇಷಿಯಾ, ಸಿಂಗಾಪೂರ, ಕ್ರೋವೇಷಿಯಾ ಹಾಗೂ ರಷ್ಯಾ ಗಳಲ್ಲಿ ಸಿತಾರ ವಾದನವನ್ನು ಪ್ರಸ್ತುತಪಡಿಸಿ ಸೈ ಎನಿಸಿಕೊಂಡಿದ್ದಾರೆ.

ಡಾ. ಅರ್ಜುನ ವಠಾರ (ಗಾಯನ)

ಮೂಲತಃ ಯಾದಗೀರ ಜಿಲ್ಲೆಯ ಶಹಾಪುರದವರಾದ  ಡಾ. ಅರ್ಜುನ ವಠಾರ, ನಾಡಿನ ಉದಯೋನ್ಮುಖ ಗಾಯಕರು. ೧೯೮೩ ಏಪ್ರಿಲ್, ೨೨ರಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಜನನ. ಸಂಗೀತ ಸಾಧಕರ ತಪೋಧಾಮ ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಗಾನಯೋಗಿ ಪುಟ್ಟರಾಜ ಗವಾಯಿಗಳ ಆಶೀರ್ವಾದದೊಂದಿಗೆ ಹಲವು ವರ್ಷಗಳವರೆಗೆ ಸಂಗೀತ ಶಿಕ್ಷಣ ಪಡೆದರು. ನಂತರ ಸಜ್ಜನ ಗಾಯಕ ಪಂ. ಚಂದ್ರಶೇಖರ ಪುರಾಣಿಕಮಠ ಅವರ ಪದತಲದಲ್ಲಿ ಕುಳಿತು ಆಳವಾದ ಮಾರ್ಗದರ್ಶನ ಪಡೆದು ಪ್ರತಿಭಾವಂತ ಗಾಯಕರಾಗಿ ಹೊರಹೊಮ್ಮಿದರು.   ಡಾ. ವಿ.ಆರ್. ಹೂಗಾರ ಅವರ ಮಾರ್ಗದರ್ಶನದಲ್ಲಿ ‘ಹಿಂದುಸ್ತಾನಿ ಸಂಗೀತದಲ್ಲಿ ಗುರು-ಶಿಷ್ಯ ಪರಂಪರೆ-ಒAದು ಅಧ್ಯಯನ’ ವಿಷಯದ ಕುರಿತು ಸಂಶೋಧನಾ ಪ್ರಬಂಧವನ್ನು ಮಂಡಿಸಿ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ. P.Àವಿ.ವಿ.ಯಿಂದ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅರ್ಜುನ ವಠಾರ, ಬಿ.ಮ್ಯೂಸಿಕ್‌ನಲ್ಲಿ ದ್ವಿತೀಯ ರ‍್ಯಾಂಕ್ ಪಡೆದಿದ್ದಾರೆ. ಆಕಾಶವಾಣಿಯ ಅನುಮೋದಿತ ಕಲಾವಿದರಾಗಿರುವ ಡಾ. ಅರ್ಜುನ ವಠಾರ, ಬೆಂಗಳೂರಿನ ಸಂಗೀತ ನೃತ್ಯ ಅಕ್ಯಾಡೆಮಿಯ ಯುವ ಪುರಸ್ಕಾರ ಗೌರವಕ್ಕೆ ಪಾತ್ರರಾಗಿದ್ದಾರೆ. ನಾಡಿನ ವಿವಿಧೆಡೆಗಳಲ್ಲಿ ತಮ್ಮ ಗಾನಸುಧೆಯನ್ನು ಹರಿಸುತ್ತಿರುವ ಅರ್ಜುನ ವಠಾರ ಅವರು ಕಳೆದ ೧೦ ವರ್ಷಗಳಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Details

Date:
September 25
Time:
6:00 pm - 8:30 pm IST
Event Category:
Event Tags:
, , , , ,

Organiser

Mooka Trust
Phone:
+91 9535015489
Email:
support@vividlipi.com