
’ಭೀಮಪಲಾಸ’ ಸಂಗೀತೋತ್ಸವ – ನವೆಂಬರ್ ೧೩
November 13, 2021 @ 5:30 pm - 8:30 pm IST
Free
ಧಾರವಾಡ: ಭಾರತರತ್ನ ಪಂ. ಭೀಮಸೇನ ಜೋಶಿ ಅವರ ಜನ್ಮಶತಮಾನೋತ್ಸವದ ಅಂಗವಾಗಿ ನ. ೧೩ ರಂದು ಸಂಜೆ ೫.೪೫ಕ್ಕೆ ಸೃಜನಾ ರಂಗಮAದಿರದಲ್ಲಿ ಸಂಗೀತದ ರಸಮಾಧುರ್ಯ ಹರಿದುಬರಲಿದೆ. ಮೈಸೂರಿನ ಪಿ.ಶ್ರೀಮತಿದೇವಿ ಹಾಗೂ ಪುಣೆಯ ರಮಾಕಾಂತ ಗಾಯಕವಾಡ ಅವರಿಂದ ಗಾನಸುಧೆ ಮೂಡಿಬರಲಿದೆ.
ವಿವಿಡ್ಲಿಪಿ ಸಂಸ್ಥೆಯು ಈ ಕಾರ್ಯಕ್ರಮದ ನೇರಪ್ರಸಾರವನ್ನು ಮಾಡಲಿದೆ.
Youtube Live: https://www.youtube.com/vividlipi/live
Facebook Live: https://www.facebook.com/vividlipi/live
Twitter Live: https://twitter.com/vividlipi
Download VIVIDLIPI Mobile APP– https://www.vividlipi.com/app
ರಮಾಕಾಂತ ಗಾಯಕವಾಡ, ಮುಂಬೈ (ಗಾಯನ)
ಸಂಗೀತಗಾರರ ಮನೆತನದಲ್ಲಿ ಜನಿಸಿದ ರಮಾಕಾಂತ ಗಾಯಕವಾಡ ಹಿಂದುಸ್ತಾನಿ ಸಂಗೀತದ ಉದಯೋನ್ಮುಖ ಪ್ರತಿಭೆ. ತಂದೆ ಪಂ. ಸೂರ್ಯಕಾಂತ ಹಾಗೂ ತಾಯಿ ಸಂಗೀತಾ ಗಾಯಕವಾಡ, ಅವರಿಬ್ಬರೂ ಸಂಗೀತ ಶಿಕ್ಷಕರು. ರಮಾಕಾಂತ ಅವರ ಗಾಯನ ಕಲಿಕೆ ಪ್ರಾರಂಭಗೊAಡಾಗ ಅವರಿಗೆ ಕೇವಲ ಆರು ವರ್ಷ. ತಂದೆ ಸೂರ್ಯಕಾಂತ ಅವರು ನಡೆಸುವ ಹರಿ ಓಂ ಸಂಗೀತ ಕಲಾ ಮಂಚ್ ಸಂಸ್ಥೆಯಲ್ಲಿ ಪಟಿಯಾಲಾ ಘರಾಣೆ ಶೈಲಿಯಲ್ಲಿ ಶಾಸ್ತೊçÃಕ್ತ ಆಳವಾದ ಸಂಗೀತಾಭ್ಯಾಸ ಮಾಡಿದರು. ನಂತರ ಡಾ. ಸತೀಶ ಕೌಶಿಕ್ ಅವರಲ್ಲಿ ಕಿರಾನಾ ಘರಾಣೆ ಹಾಗೂ ಪಂ. ಜಗದೀಶ ಪ್ರಸಾದ ಅವರಿಂದ ಪಟಿಯಾಲಾ ಘರಾಣೆಯ ಆಳವಾದ ಮಾರ್ಗದರ್ಶನ ಪಡೆದು ಅತೀ ಚಿಕ್ಕ ವಯಸ್ಸಿನಲ್ಲಿಯೇ ಓರ್ವ ಭರವಸೆಯ ಗಾಯಕನಾಗಿ ಹೊರಹೊಮ್ಮಿದರು.
ಗಂಧರ್ವ ಮಹಾವಿದ್ಯಾಲಯದಿಂದ ವಿಶಾರದ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಹಾಗೂ ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿರುವ ರಮಾಕಾಂತ ಅವರು ಪಂ. ರಾಮ ಮರಾಠೆ ಪುರಸ್ಕಾರ, ಪಂ. ಜಗನ್ನಾಥಬುವಾ ಪುರೋಹಿತ ಪುರಸ್ಕಾರ, ಪಂ.ಜಿತೇAದ್ರ ಅಭಿಷೇಕಿ ಪುರಸ್ಕಾರ, ಪಂ. ವಸಂತರಾವ ದೇಶಪಾಂಡೆ ಪುರಸ್ಕಾರ, ಇನ್ನೂ ಅನೇಕ ಪುರಸ್ಕಾರಗಳಿಗೆ ಪಾತ್ರರಾಗಿರುವ ಅತೀ ಕಡಿಮೆ ವಯಸ್ಸಿನ ಸಂಗೀತ ಪ್ರತಿಭೆ. ಮುಂಬೈ, ಪುಣೆ, ಕೊಲ್ಹಾಪುರ, ಜೈಪುರ, ಹೈದರಾಬಾದ ಅಲ್ಲದೇ ಅಮೆರಿಕದ ಅನೇಕ ಸ್ಥಳಗಳಲ್ಲಿ ತಮ್ಮ ಸಂಗೀತ ಸುಧೆಯನ್ನು ಹರಿಸಿದ್ದಾರೆ.
ಶ್ರೀಮತಿದೇವಿ, ಮೈಸೂರು (ಗಾಯನ)
ಕೀರ್ತನಕಾರರ ಮನೆತನದ ಹಿನ್ನೆಲೆಯುಳ್ಳ ಶ್ರೀಮತಿದೇವಿ ಅವರು ನಾಡಿನ ಪ್ರಬುದ್ಧ ಹಿಂದುಸ್ತಾನಿ ಗಾಯಕಿ. ತಂದೆ ಜಗದೀಶ ದಾಸ ಅವರು ಹರಿಕಥಾ ವಿದ್ವಾನರು. ತಾಯಿ ಗಿರಿಜಾಬಾಯಿ ಕೂಡ ಗಾಯಕಿ. ಸಹಜವಾಗಿ ಶ್ರೀಮತಿದೇವಿಯವರಿಗೆ ಬಾಲ್ಯದಿಂದಲೇ ಸಂಗೀತದತ್ತ ಒಲವು ಮೂಡಿತು. ಧಾರವಾಡದ ಪಂ. ಚಂದ್ರಶೇಖರ ಪುರಾಣಿಕಮಠ ಹಾಗೂ ಹೊನ್ನಾವಾರದ ಪಂ. ನಾರಾಯಣ ಪಂಡಿತ ಅವರಲ್ಲಿ ಆಳವಾದ ಸಂಗೀತಾಧ್ಯಯನಗೈದು ಉದಯೋನ್ಮುಖ ಗಾಯಕಿಯಾಗಿ ಹೊರಹೊಮ್ಮಿದರು. ನಂತರದ ದಿನಗಳಲ್ಲಿ ವಿದುಷಿ ಪದ್ಮಾ ತಳವಲಕರ, ಪಂ. ವ್ಯಾಸಮೂರ್ತಿ ಕಟ್ಟಿ, ಪಂ. ರವಿಕಿರಣ ಮಣಿಪಾಲ ಅವರಲ್ಲಿ ಅಭ್ಯಾಸ ನಡೆಸಿದರು. ಪ್ರಸ್ತುತವಾಗಿ ಮುಂಬೈನ ವಿದುಷಿ ಅಪೂರ್ವಾ ಗೋಖಲೆ ಅವರಿಂದ ಹೆಚ್ಚಿನ ಮಾರ್ಗದರ್ಶನ ಪಡೆಯುತ್ತಿದ್ದಾರೆ. ವಿವಿಧ ಶಿಷ್ಯವೇತನ, ತಾಮಣಕರ ಪುರಸ್ಕಾರ, ವಾಮನದಾಜಿ ಪುರಸ್ಕಾರಗಳಿಗೆ ಭಾಜನರಾಗಿರುವ ಶ್ರೀಮತಿದೇವಿ ಅವರು ಅಮೆರಿಕ, ತಮಿಳುನಾಡು, ಮಹಾರಾಷ್ಟç, ಕರ್ನಾಟಕದ ಅನೇಕ ಪ್ರತಿಷ್ಠಿತ ವೇದಿಕೆಗಳಲ್ಲಿ ತಮ್ಮ ಗಾನಸುಧೆಯನ್ನು ಹರಿಸಿ ಸೈ ಎನಿಸಿಕೊಂಡಿದ್ದಾರೆ.