Need help? Call +91 9535015489

📖 Print books shipping available only in India. ✈ Flat rate shipping

Loading Events

« All Events

ಭೀಮಪಲಾಸ ಸಂಗೀತೋತ್ಸವ – March 2021 – ಮುಗ್ಧಾ ವೈಶಂಪಾಯನ, ಹೇಮಂತ ಜೋಶಿ

March 6 @ 5:30 pm - 8:00 pm IST

Free

ಭಾರತರತ್ನ ಪಂ. ಭೀಮಸೇನ ಜೋಶಿ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಧಾರವಾಡದ ಜಿ. ಬಿ. ಜೋಶಿ ಮೆಮೊರಿಯಲ್ ಟ್ರಸ್ಟ್ ಹಾಗೂ ಹುಬ್ಬಳ್ಳಿಯ ಕ್ಷಮತಾ ಸಂಸ್ಥೆಗಳು ಜಂಟಿಯಾಗಿ ‘ಭೀಮಪಲಾಸ’ ಸಂಗೀತೋತ್ಸವವನ್ನು ವರ್ಷಪೂರ್ತಿ ಹಮ್ಮಿಕೊಂಡಿವೆ. ಇದರಂಗವಾಗಿ ಮಾ. 06 ರಂದು ಸಂಜೆ 5.30ಕ್ಕೆ ಸೃಜನಾ ರಂಗಮಂದಿರದಲ್ಲಿ ಯುವ ಪ್ರತಿಭೆಗಳಿಂದ ಗಾಯನ-ವಾದನಗಳ ನಿನಾದ ಮೂಡಿಬರಲಿದೆ.
LIC of India, Infosys Foundation, LIC Housing Finance Ltd ಹಾಗೂ ಕೇಂದ್ರ ಸರ್ಕಾರದ ಸಂಸ್ಕøತಿ ಇಲಾಖೆ, ಸಹಪ್ರಾಯೋಜಕತ್ವದಲ್ಲಿ ಆಯೋಜನೆಗೊಂಡಿರುವ ಈ ಕಾರ್ಯಕ್ರಮದಲ್ಲಿ ಯುವ ಪ್ರತಿಭೆಗಳಾದ ಮುಗ್ಧಾ ವೈಶಂಪಾಯನ ಅವರ ಗಾಯನ ಹಾಗೂ ಹೇಮಂತ ಜೋಶಿ ಅವರ ತಬಲಾ ಸೋಲೊ ರಿಂಗಣಿಸಲಿದೆ. ಸಹಕಲಾವಿದರಾಗಿ ಶ್ರೀಧರ ಮಾಂಡ್ರೆ, ಸಾರಂಗ ಕುಲಕರ್ಣಿ ಹಾಗೂ ಅಭಿಷೇಕ ಶಿಂಕರ ಪಾಲ್ಗೊಳಲಿದ್ದಾರೆ.
ಮುಗ್ಧಾ ವೈಶಂಪಾಯನ (ಗಾಯನ)
ತನ್ನ ಸುಮಧುರ ಕಂಠದಿಂದ ಅತ್ಯಂತ ಕಿರುವಯಸ್ಸಿನಲ್ಲಿಯೇ ಸಂಗೀತ ದಿಗ್ಗಜರಿಂದ ಸೈ ಎನಿಸಿಕೊಂಡ ಗಾಯಕಿ ಮುಗ್ಧಾ ವೈಶಂಪಾನಯನ ಅವರು. ಮಹಾರಾಷ್ಟ್ರದ ಅಲಿಬಾಗದ ಮುಗ್ಧಾ, ಝಿ ವಾಹಿನಿ 2008-09 ರಲ್ಲಿ ನಡೆಸಿದ ಲಿಟಲ್ ಚಾಂಪ್ಸ್ನಲ್ಲಿ ಮಿಂಚಿದ ಕಲಾವಿದೆ. ಬಾಲ್ಯದಿಂದಲೇ ಸಂಗೀತದತ್ತ ಒಲವನ್ನು ತೋರಿಸಿದ ಮುಗ್ಧಾಳ ತಾಯಿ ಭಾಗ್ಯಶ್ರೀ ತಂದೆ ಭಗವಾನ ಎರಡನೇ ವಯಸ್ಸಿನಿಂದಲೇ ಸಂಗೀತದ ವಾತಾವರಣದಲ್ಲಿ ಬೆಳೆದರು. ಸುನೀಲ ಮ್ಹಾತ್ರೆ, ಶೀತಲ್ ಕುಂಟೆ, ಅನುರಾಧಾ ವೇಲಣಕರ ಹಾಗೂ ತಂದೆಯಲ್ಲಿ ಆಳವಾದ ಅಧ್ಯಯನಗೈದು ಪ್ರತಿಭಾವಂತ ಗಾಯಕಿಯಾಗಿ ಹೊರಹೊಮ್ಮಿದರು. 2016ರಲ್ಲಿ ಉಪಾಂತ್ಯ ವಿಶಾರದ ಸಂಗೀತ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಮುಗ್ಧಾ, ರಾಯಘಡ ಭೂಷಣ, ಕಲಾಭೂಷಣ, ಮಾಣಿಕ ವರ್ಮಾ ಪುರಸ್ಕಾರ, ಷಣ್ಮುಖ ಸಂಗೀತ ಶಿರೋಮಣಿ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. ವಿವಿಧ ಮರಾಠಿ ಚಲನಚಿತ್ರಗಳಲ್ಲಿ ಹಿನ್ನೆಲೆ ಗಾಯಕಿಯಾಗಿ ಮಿಂಚಿರುವ ಮುಗ್ಧಾ ವೈಶಂಪಾಯನ ದೇಶದ ಅನೇಕ ಕಡೆಗಳಲ್ಲದೆ ಅಮೆರಿಕ, ಆಸ್ಟ್ರೇಲಿಯಾ, ಅರಬ್ ರಾಷ್ಟ್ರಗಳಲ್ಲಿ ತಮ್ಮ ಸಂಗೀತ ಸುಧೆ ಹರಿಸಿದ್ದಾರೆ.
ಹೇಮಂತ ಜೋಶಿ (ತಬಲಾ ಸೋಲೊ)
2006ರಲ್ಲಿ ಜನಿಸಿದ ಧಾರವಾಡದ ಹೇಮಂತ ಜೋಶಿ ನಾಡಿನ ಪ್ರತಿಭಾವಂತ ಕಿರಿಯ ತಬಲಾ ವಾದಕ. ಸಂಗೀತಗಾರರ ಮನೆತನದ ಹಿನ್ನೆಲೆಯುಳ್ಳ ಹೇಮಂತರ ತಂದೆ ವೇಣುಗೋಪಾಲ ಒಳ್ಳೆಯ ಗಾಯಕ. ಹೇಮಂತನಿಗೆ ತಬಲಾ ಕಲಿಕೆಯತ್ತ ಒಲವಿದ್ದವನ್ನು ಕಂಡುಕೊಂಡ ತಂದೆ ಗೋವಾದ ಸತೀಶ ಹೆಗಡೆಯವರಲ್ಲಿ ಆರಂಭಿಕ ಹಂತದ ತಬಲಾ ಅಧ್ಯಯನವನ್ನು ಆರಂಭಿಸಿದರು. ನಂತರ ಶ್ರೀವತ್ಸ ಕೌಲಗಿಯವರಲ್ಲಿ ಮುಂದಿನ ತಬಲಾ ಅಧ್ಯಯನವನ್ನು ಮುಂದುವರಿಸಿದ ಹೇಮಂತ ಜೋಶಿ ಯುವ ಪ್ರತಿಭಾವಂತ ತಬಲಾ ವಾದಕರಾಗಿ ಹೊರಹೊಮ್ಮಿದರು. ತಬಲಾ ಸೋಲೊ ನುಡಿಸುವಲ್ಲಿ ಪ್ರಾವೀಣ್ಯತೆಯನ್ನು ಸಾಧಿಸಿರುವ ಹೇಮಂತ, ಪ್ರಸ್ತುತವಾಗಿ ಪುಣೆಯ ಪಂ. ರಾಮದಾಸ ಫಳಸುಲೆ ಅವರಲ್ಲಿ ಹೆಚ್ಚಿನ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಸುಮಾರು 200ಕ್ಕೂ ಹೆಚ್ಚು ಸೋಲೊ ಕಾರ್ಯಕ್ರಮಗಳನ್ನು ನೀಡಿರುವ ಹೇಮಂತ ಸ್ಪಿಕ್ ಮೇಕೆಯ ನಾದಭೇದ, ಆಳ್ವಾಸ ವಿರಾಸತ್, ಸುರ್ ಸಾಗರ, ಸ್ವರಶ್ರೀ, ಸಪ್ತಕ, ಮೈಸೂರು ದಸರಾ ಉತ್ಸವಗಳಂಥ ಪ್ರತಿಷ್ಠಿತ ವೇದಿಕೆಗಳ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಪುಟ್ಟಶ್ರೀ, ತಬಲಾ ನವಾಜ್, ಅಸಾಧಾರಣ ತಬಲಾ ಕಲಾವಿದ ಪ್ರಶಸ್ತಿಗಳ ಗೌರವ ಪಡೆದಿರುವ ಹೇಮಂತ ಜೋಶಿ, ಇತೀಗಷ್ಟೆ ಭಾರತ ರತ್ನ ಡಾ. ಎಂ.ಎಸ್. ಸುಬ್ಬಲಕ್ಷ್ಮೀ ಸಂಗೀತ ಫೆಲೊಶಿಪ್ಗೆ ಪಾತ್ರರಾಗಿದ್ದಾರೆ.

Details

Date:
March 6
Time:
5:30 pm - 8:00 pm IST
Cost:
Free
Event Category:
Event Tags:
, , ,
https://www.vividlipi.com/events/

Venue

Srujana – Dr Annajirao Sirur Auditorium
Karnataka College Campus
Dharwad, Karnataka 580020 India
+ Google Map