Need help? Call +91 9535015489

📖 Print books shipping available only in India. ✈ Flat rate shipping

Loading Events

« All Events

Virtual Virtual Event
  • This event has passed.

‘ಭೀಮಪಲಾಸ’ ಸಂಗೀತೋತ್ಸವ – April 2021 – ಇಮಾನ್ ದಾಸ್, ಐಶ್ವರ್ಯ ದೇಸಾಯಿ

April 11 @ 5:30 pm - 8:00 pm IST

Virtual Virtual Event
Free

ಭಾರತರತ್ನ ಪಂ. ಭೀಮಸೇನ ಜೋಶಿ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಧಾರವಾಡದ ಜಿ.ಬಿ. ಜೋಶಿ ಮೆಮೊರಿಯಲ್ ಟ್ರಸ್ಟ್ ಹಾಗೂ ಹುಬ್ಬಳ್ಳಿಯ ಕ್ಷಮತಾ ಸಂಸ್ಥೆಗಳು ಜಂಟಿಯಾಗಿ ‘ಭೀಮಪಲಾಸ’ ಸಂಗೀತೋತ್ಸವವನ್ನು ರಾಜ್ಯಾದ್ಯಂತ ವರ್ಷಪೂರ್ತಿ ಹಮ್ಮಿಕೊಂಡಿವೆ. ಇದರಂಗವಾಗಿ ಏ. 11ರಂದು ಸಂಜೆ 5.30ಕ್ಕೆ ಸೃಜನಾ ರಂಗಮಂದಿರಲ್ಲಿ ಗಾಯನ ಕಾರ್ಯಕ್ರಮ ನಡೆಯಲಿದೆ. ಬೆಂಗಳೂರಿನ ಗಾಯಕ ಇಮಾನ್ ದಾಸ್ ಹಾಗೂ ಧಾರವಾಡದ ಐಶ್ವರ್ಯ ದೇಸಾಯಿ ಅವರ ಗಾಯನದ ನಿನಾದ ರಿಂಗಣಿಸಲಿದೆ.
ಕೇಂದ್ರ ಸರ್ಕಾರದ ಸಂಸ್ಕøತಿ ಇಲಾಖೆ, ಇನ್ಫೋಸಿಸ್ ಫೌಂಡೇಶನ್, ಭಾರತೀಯ ಜೀವ ವಿಮಾ ನಿಗಮ, ಎಲ್ಐಸಿಯ ಹೌಸಿಂಗ್ ಫೈನಾನ್ಸ್ಗಳ ಸಹಪ್ರಾಯೋಜಕತ್ವದಲ್ಲಿ ಆಯೋಜನೆಗೊಂಡಿರುವ ಈ ಕಾರ್ಯಕ್ರಮದಲ್ಲಿ ಸಹಕಲಾವಿದರಾಗಿ ಪಾಲ್ಗೊಳ್ಳಲಿರುವ ಕೇಶವ ಜೋಶಿ, ದೇಬಾಶಿಶ್ ಅಧಿಕಾರಿ ತಬಲಾ ಹಾಗೂ ಗುರುಪ್ರಸಾದ ಹೆಗಡೆ, ಸುಧಾಂಶು ಕುಲಕರ್ಣಿ ಹಾರ್ಮೋನಿಯಂ ಸಾಥ್ ಸಂಗತ್ ಮಾಡಲಿದ್ದಾರೆ. ಈ ಕಾರ್ಯಕ್ರಮವನ್ನು ವಿವಿಡ್ಲಿಪಿಯ ಮೂಲಕ ನೇರಪ್ರಸಾರದಲ್ಲಿ (www.youtube.com/vividlipi/live) ವೀಕ್ಷಿಸಬಹುದಾಗಿದೆ.

ಇಮಾನ್ ದಾಸ್, ಬೆಂಗಳೂರು

ಪಟಿಯಾಲಾ ಘರಾಣೆಯ ಪಂ. ಇಮಾನ ದಾಸ್ ದೇಶದ ಪ್ರಬುದ್ಧ ಪ್ರತಿನಿಧಿ. ಬಾಲ್ಯದಿಂದಲೇ ಸಂಗೀತ ಕಲಿಕೆಯತ್ತ ತೋರಿದ ಇಮಾನ್ ದಾಸ್ ಪಂ. ಅಜಯ ಚಕ್ರವರ್ತಿ ಅವರಲ್ಲಿ ಆಳವಾದ ಅಧ್ಯಯನಗೈದು ಅತ್ಯಂತ ಕಡಿಮೆ ಸಮಯದಲ್ಲಿ ಉದಯೋನ್ಮುಖ ಗಾಯಕರಾಗಿ ಹೊರಹೊಮ್ಮಿದರು. ಆಕಾಶವಾಣಿ ಹಾಗೂ ದೂರದರ್ಶನಗಳ ಎ ಶ್ರೇಣಿಯ ಕಲಾವಿದರಾಗಿರುವ ಇಮಾನ ದಾಸ ಠುಮರಿ, ಗಜûಲ್ ಗಾಯಕಿಯ ಪ್ರಸ್ತುತಿಯಲ್ಲಿ ಅತ್ಯುತ್ತಮ ಹಿಡಿತ ಸಾಧಿಸಿದ್ದಾರೆ. ದೇಶದಲ್ಲಷ್ಟೇ ಅಲ್ಲ ಯುರೋಪ್, ಆಸ್ಟ್ರೇಲಿಯಾ, ಅಮೆರಿಕಗಳಲ್ಲಿ ತಮ್ಮ ಸಂಗೀತ ಸುಧೆಯನ್ನು ಹರಿಸಿ ಎಲ್ಲರಿಂದಲೂ ಸೈ ಎನಿಸಿಕೊಂಡಿದ್ದಾರೆ.

ಐಶ್ವರ್ಯ ದೇಸಾಯಿ, ಧಾರವಾಡ

ಬಾಲ್ಯದಿಂದಲೇ ಸಂಗೀತದತ್ತ ಒಲವು ಹೊಂದಿರುವ ಧಾರವಾಡದ ಐಶ್ವರ್ಯ ದೇಸಾಯಿ ಅವರು ನ್ಯಾಯವಾದಿ, ಸಂಗೀತಪ್ರೇಮಿ ಉದಯಕುಮಾರ ದೇಸಾಯಿ ಅವರ ಪುತ್ರಿ. ಸಂಗೀತಪೋಷಕರ ಮನೆತನದ ಹಿನ್ನೆಲೆಯಿರುವ ಐಶ್ವರ್ಯ ಅವರ ಡಾ. ಮೃತ್ಯುಂಜಯ ಅಗಡಿ ಅವರಲ್ಲಿ ಪ್ರಾರಂಭಿಕ ಹಂತದ ಸಂಗೀತ ಶಿಕ್ಷಣ ಪಡೆದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸಂಗೀತದ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಪ್ರಸ್ತುತವಾಗಿ ಪದ್ಮಶ್ರೀ ಪುರಸ್ಕøತ ಗಾನಪಂಡಿತ ಡಾ. ಎಂ. ವೆಂಕಟೇಶಕುಮಾರ ಅವರಲ್ಲಿ ಮುಂದುವರಿಸಿದ್ದಾರೆ.

Watch Live on VIVIDLIPI Facebook and Youtube !

Details

Date:
April 11
Time:
5:30 pm - 8:00 pm IST
Cost:
Free
Event Categories:
,
Event Tags:
, , , , ,
https://www.vividlipi.com/events/

Venue

Srujana – Dr Annajirao Sirur Auditorium
Karnataka College Campus
Dharwad, Karnataka 580020 India
+ Google Map