Need help? Call +91 9535015489

📖 Print books shipping available only in India. ✈ Flat rate shipping

Loading Events

« All Events

’ಭೀಮಪಲಾಸ’ ಸಂಗೀತೋತ್ಸವ – ಆದಿತ್ಯ ಜೋಶಿ, ರಕ್ಷಿತ ಕುಲಕರ್ಣಿ

September 24 @ 5:30 pm - 8:00 pm IST

Free

’ಭೀಮಪಲಾಸ’ ಸಂಗೀತೋತ್ಸವ – ಸೆ. ೨೪ರಿಂದ ಎರಡು ದಿನಗಳ ಗಾಯನ-ವಾದನ

LIVE on VIVIDLIPI
Download VIVIDLIPI Mobile APP – www.vividlipi.com/app

ಭಾರತರತ್ನ ಪಂ. ಭೀಮಸೇನ ಜೋಶಿ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಸೆ. ೨೪ ಹಾಗೂ ೨೫ ರಂದು ಸಂಜೆ ೫.೩೦ಕ್ಕೆ ಸೃಜನಾ ರಂಗಮAದಿರದಲ್ಲಿ ಎರಡು ದಿನಗಳ ಯುವ ಪ್ರತಿಭೆಗಳ ಕಲಾಪ್ರದರ್ಶನ ನಡೆಯಲಿದೆ. ಹುಬ್ಬಳ್ಳಿಯ ಕು. ಆದಿತ್ಯ ಜೋಶಿ ಬಾನ್ಸುರಿ ವಾದನ, ಧಾರವಾಡದ ಸಿತಾರ ವಾದಕ ಮೊಹಸಿನ ಖಾನ್ ಅಲ್ಲದೆ ಡಾ. ಅರ್ಜುನ ವಠಾರ ಹಾಗೂ ರಕ್ಷಿತ ಕುಲಕರ್ಣಿ ಅವರಿಂದ ಗಾನಸುಧೆ ಮೂಡಿಬರಲಿದೆ.

ಧಾರವಾಡದ ಜಿ.ಬಿ. ಜೋಶಿ ಮೆಮೊರಿಯಲ್ ಟ್ರಸ್ಟ್ ಹಾಗೂ ಹುಬ್ಬಳ್ಳಿಯ ಕ್ಷಮತಾ ಸಂಸ್ಥೆಗಳು ಜಂಟಿಯಾಗಿ ಭೀಮಪಲಾಸ ಸಂಗೀತೋತ್ಸವವನ್ನು ರಾಜ್ಯಾದ್ಯಂತ ವರ್ಷಪೂರ್ತಿ ಹಮ್ಮಿಕೊಂಡಿವೆ. ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆ, ಇನ್ಫೋಸಿಸ್ ಫೌಂಡೇಶನ್, ಭಾರತೀಯ ಜೀವ ವಿಮಾ ನಿಗಮ, ಎಲ್ಐಸಿಯ ಹೌಸಿಂಗ್ ಫೈನಾನ್ಸ್ಗಳ ಸಹಪ್ರಾಯೋಜಕತ್ವದಲ್ಲಿ ಆಯೋಜನೆಗೊಂಡಿದೆ.

ಸಹಕಲಾವಿದರಾಗಿ ಪಾಲ್ಗೊಳ್ಳಲಿರುವ ಅಲ್ಲಮಪ್ರಭು ಕಡಕೋಳ, ನಿಸಾರ್ ಅಹಮದ್, ಶ್ರೀವತ್ಸ ಕೌಲಗಿ, ಜಯತೀರ್ಥ ಪಂಚಮುಖಿ ತಬಲಾ ಹಾಗೂ ಸತೀಶ ಭಟ್ಟ ಹೆಗ್ಗಾರು, ಪರಶುರಾಮ ಕಟ್ಟಿಸಂಗಾವಿ ಹಾರ್ಮೋನಿಯಂ ಸಾಥ್ ಸಂಗತ್ ಮಾಡಲಿದ್ದಾರೆ.

ವಿವಿಡ್ಲಿಪಿ ಸಂಸ್ಥೆಯು ಈ ಕಾರ್ಯಕ್ರಮದ ನೇರಪ್ರಸಾರವನ್ನು ಮಾಡಲಿದೆ.

Youtube Live: https://www.youtube.com/vividlipi/live
Facebook Live –  https://www.facebook.com/vividlipi/live
Twitter Live – https://twitter.com/vividlipi

ಆದಿತ್ಯ ಜೋಶಿ (ಬಾನ್ಸುರಿ ವಾದನ)
ಹುಬ್ಬಳ್ಳಿಯ ಕಿರಿಯ ಬಾನ್ಸುರಿ ಪ್ರತಿಭೆ ಆದಿತ್ಯ ಜೋಶಿ. ಸಂಗೀತದ ಮನೆತನದ ಹಿನ್ನಲೆಯುಳ್ಳ ಆದಿತ್ಯನಿಗೆ ಸಂಗೀತದ ಶ್ರೀಕಾರ ಹಾಕಿದಾಗ ಆಗಿನ್ನೂ ೫ರ ಪ್ರಾಯ. ತಂದೆ ವಾದಿರಾಜ ತಬಲಾ ವಾದಕ. ತಾಯಿ ಹಿಂದುಸ್ತಾನಿ ಗಾಯಕಿ. ಬಾಲ್ಯದಿಂದಲೇ ಕೊಳಲುವಾದನತ್ತ ಒಲವು ತೋರಿಸಿದ ಆದಿತ್ಯನಿಗೆ ಶ್ರೀಕೃಷ್ಣ ಜೋಶಿ ಆರಂಭಿಕ ಅಧ್ಯಯನ ಮಾಡಿಸಿದರು. ಮುಂದಿನ ದಿನಗಳಲ್ಲಿ ಆದಿತ್ಯ ಜೋಶಿ, ಮೈಸೂರಿನ ಖ್ಯಾತ ಬಾನ್ಸುರಿ ವಾದಕ ಸಮೀರ ರಾವ್ ಅವರಲ್ಲಿ ಆಳವಾದ ಅಧ್ಯಯನಗೈದ ಕಿಶೋರ ಪ್ರತಿಭೆಯಾಗಿ ಹೊರಹೊಮ್ಮಿದ. ೨೦೧೭ ರಲ್ಲಿ ದೆಹಲಿಯ ಸಿಸಿಆರ್ಟಿಯಿಂದ ಸ್ಕಾಲರ್ಶಿಪ್ ಪಡೆದ ಆದಿತ್ಯ, ದೂರದರ್ಶನದ ನಾದಭೇದ ಕಾರ್ಯಕ್ರಮ, ಧಾರವಾಡ ಆಕಾಶವಾಣಿ ಕೇಂದ್ರದಲ್ಲಿ ಕೊಳಲು ಪ್ರತಿಭೆಯನ್ನು ಮೆರೆದಿದ್ದಾರೆ. ಗೋವಾದ ವೇಣಿ ಸಾಂಸ್ಕೃತಿಕ ವೃಂದವು ವೇಣು ಕಲಾದಿತ್ಯ ಬಿರುದು ನೀಡಿ ಗೌರವಿಸಿದೆ. ಹುಬ್ಬಳ್ಳಿ, ಧಾರವಾಡ, ಕುಂದಗೋಳ, ಬೆಂಗಳೂರು, ದಾವಣಗೆರೆ, ಕೋಲಾರ, ದಾಂಡೇಲಿ, ಬಳ್ಳಾರಿ ಅಲ್ಲದೆ ಗೋವಾದ ವಿವಿಧೆಡೆಗಳಲ್ಲಿ ಬಾನ್ಸರಿಯ ನಿನಾದವನ್ನು ಹರಿಸಿ ಸೈ ಎನಿಸಿಕೊಂಡಿದ್ದಾರೆ.

ರಕ್ಷಿತ ಕುಲಕರ್ಣಿ (ಗಾಯನ)
ರಕ್ಷಿತ ಕುಲಕರ್ಣಿ, ಧಾರವಾಡದ ಸಂಗೀತಮಯ ಪರಿಸರದಲ್ಲಿ ಅರಳುತ್ತಿರುವ ಮತ್ತೊಬ್ಬ ಗಾನಪ್ರತಿ¨s.ೆ ಪಂ. ಶೇಷಗಿರಿ ಗುಡಿಯವರಲ್ಲಿ ಆರಂಭಿಕ ಹಂತದ ಅಧ್ಯಯನಗೈದರು. ನಂತರದ ದಿನಗಳಲ್ಲಿ ಧಾರವಾಡದ ಪಂ. ಶ್ರೀಪಾದ ಹೆಗಡೆ ಕಂಪ್ಲಿ ಅವರಿಂದ ಆಳವಾದ ಮಾರ್ಗದರ್ಶನ ಪಡೆದರು. ಬೆಳಗಾವಿಯ ಪಂ. ಶ್ರೀಧರ ಕುಲಕರ್ಣಿ ಅವರಿಂದಲೂ ಸಂಗೀತಾಧ್ಯಯನ ಮಾಡಿದರು. ಹಾರ್ಮೋನಿಯಂ ಮಾಂತ್ರಿಕ ಪಂ. ವಸಂತ ಕನಕಾಪೂರ ಅವರಲ್ಲಿ ಲಘು ಸಂಗೀತವನ್ನು, ಪಂ. ಕಟಗೇರಿದಾಸರಿಂದ ದಾಸವಾಣಿಯನ್ನು ಕಲಿತುಕೊಂಡು ಯುವ ಗಾಯಕನಾಗಿ ಹೊರಹೊಮ್ಮಿದರು. ಇಲೆಕ್ಟಾçನಿಕ್ಸ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ರಕ್ಷಿತ ಕುಲಕರ್ಣಿ, ಗ್ವಾಲಿಯರ್ ಹಾಗೂ ಕಿರಾನಾ ಶೈಲಿಯ ಗಾಯನದ ಪ್ರಸ್ತುತಿಯಲ್ಲಿ ನಿಷ್ಣಾತರೆನಿಸಿಕೊಂಡಿದ್ದಾರೆ. ‘ರಾಗರುಚಿ’ ಎಂಬ ಕಾವ್ಯನಾಮದೊಂದಿಗೆ ಬಂದಿಶ್ಗಳನ್ನು ರಚಿಸುವ ರಕ್ಷಿತ, ಧಾರವಾಡ, ಹುಬ್ಬಳ್ಳಿ, ಬೆಂಗಳೂರು, ಶಿವಮೊಗ್ಗ ಹೀಗೆ ವಿವಿಧೆಡೆಗಳಲ್ಲಿ ತಮ್ಮ ಗಾನಸುಧೆಯನ್ನು ಹರಿಸಿದ್ದಾರೆ.

Details

Date:
September 24
Time:
5:30 pm - 8:00 pm IST
Cost:
Free
Event Category:
Event Tags:
, , , , ,

Organiser

Mooka Trust
Phone:
+91 9535015489
Email:
support@vividlipi.com