
- This event has passed.
“ಸಖಿ ವೃಂದ’ ತಂಡದಿಂದ “ಪುರಂದರ ಗಾನಾಮೃತ” ಸುಮಧುರ ಸಂಗೀತ
March 4 @ 4:30 pm - 6:00 pm IST

“ಸಖಿ ವೃಂದ’ ತಂಡದಿಂದ “ಪುರಂದರ ಗಾನಾಮೃತ” ಸುಮಧುರ ಸಂಗೀತ
Date: 04 Mar 2021
Time: 4.30 PM IST/ 11.00 AM GMT
“ಸಖಿ ವೃಂದ” ತಂಡದ ಸಂಗೀತ ಸಖಿಯರು :
ವಿದುಷಿ ಇಂದಿರಾ ಶರ್ಮ, ವಿದುಷಿ ವಿಶಾಲಾಕ್ಷಿ ವೈದ್ಯ, ಮಮತಾ ಮಂಜುನಾಥ್, ಮಾಲತಿ ಸತೀಶ್, ಲತಾ ಎಸ್ ರಾವ್, ಪೂರ್ಣಿಮಾ ಪ್ರಕಾಶ್.
ವಿದುಷಿ ಇಂದಿರಾ ಶರ್ಮರ ಕುಟುಂಬ ಸಂಗೀತಮಯ. ಪತಿ ಲಯಕಲಾ ಪ್ರತಿಭಾಮಣಿ ವಿದ್ವಾನ್ ಆನೂರ್ ದತ್ತಾತ್ರೇಯ ಶರ್ಮ(ಮೃದಂಗ), ಹಿರಿಯ ಪುತ್ರ ವಿದ್ವಾನ್ ಸುನಾದ್ ಆನೂರ್(ಖಂಜಿರ) ಮತ್ತು ಕಿರಿಯ ಪುತ್ರ ಸುಮಧುರ ಆನೂರ್(ಲಯವಾದ್ಯ ಮತ್ತು ಗಾಯನ).
ತಾಯಿ ಶ್ಯಾಮಲಾ ಮತ್ತು ಗುರು ಆರ್. ಏ .ರಾಮಮಣಿ ಅವರಿಂದ ಸಂಗೀತಾಭ್ಯಾಸ ಮಾಡಿರುವ ಇಂದಿರಾ ಬಾರತ ಮತ್ತು ಅಮೇರಿಕಾದ ಹಲವಾರು ಸಂಗೀತ ಸಭೆಗಳು, ದೇವಸ್ಥಾನಗಳಲ್ಲಿ ಅನೇಕಾನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ವಿದುಷಿ ವಿಶಾಲಾಕ್ಷಿ ವೈದ್ಯ ಅವರ ಸಂಗೀತ ಕಲಿಕೆ ಗುರು ವಿಜಯ ಅಯಂಗಾರ್ ಅವರಲ್ಲಿ ಪ್ರಾರಂಭವಾಗಿ, ನಂತರ ವಿದ್ವಾನ್ ಚಿಂತಲಪಲ್ಲಿ ರಂಗರಾವ್ (ಕರ್ನಾಟಕ ಸಂಗೀತ) ಮತ್ತು ವಿದುಷಿ ವಿಜಯಶ್ರೀ ಮತ್ತು ವಿದ್ವಾನ್ ಸಿ ನಾಗರಾಜ್ – ವೀಣೆ ಕಲಿಕೆಯಲ್ಲಿ ಮುಂದುವರೆಯಿತು. ಜೊತೆಯಲ್ಲೇ ಸುಗಮ ಸಂಗೀತ ಕಲಿಕೆ ಆಕಾಶವಾಣಿ ಕಲಾವಿದ ಶ್ರೀ ಎಂ. ಆರ್. ಪ್ರಭಾಕರ್ ಅವರಲ್ಲಿ ಮತ್ತು ವೃಂದ ಗಾನ, ರಾಷ್ಟ್ರಪತಿ ಪ್ರಶಸ್ತಿ ವಿಜೇತೆ ವಿದುಷಿ ಕಾವೇರಿ ಶ್ರೀಧರ್ ಅವರೊಂದಿಗೆ.
ತಾಯ್ನಾಡಲ್ಲಿ ಶುರುವಾದ ಸಂಗೀತ ಪಯಣ ಸಿಂಗಪುರದಲ್ಲಿ ಗಾನಕೋಗಿಲೆ ವಿದುಷಿ ಭಾಗ್ಯ ಮೂರ್ತಿ ಅವರಲ್ಲಿ ಲಘು ಭಕ್ತಿ ಸಂಗೀತ ಮತ್ತು ವಿದುಷಿ ಕಲ್ಯಾಣಿ ಪುರಾಣಿಕ್ ಅವರಲ್ಲಿ ಹಿಂದೂಸ್ತಾನಿ ಸಂಗೀತದೊಂದಿಗೆ ಮುಂದುವರೆದು, ಇಬ್ಬರೂ ಗುರುಗಳೊಂದಿಗೆ ಅನೇಕ ಕಾರ್ಯಕ್ರಮಗಳನ್ನು ನೀಡುವಂತೆ ಅನುವಾಯಿತು. ಇವರು ವಿದುಷಿ ಭಾಗ್ಯ ಮೂರ್ತಿ ಅವರ ಅಷ್ಟಲಕ್ಷ್ಮೀ ತಂಡದ ಸದಸ್ಯರೂ ಕೂಡ.
ನೇರ ಪ್ರಸಾರ ಯುಟ್ಯೂಬ್ ಮತ್ತು ಫೇಸ್ಬುಕ್ ನಲ್ಲಿ
Facebook Live: https://www.facebook.com/vividlipi/live
Youtube Live: https://www.youtube.com/vividlipi/live
Download VIVIDLIPI APP: www.vividlipi.com/app