
ಡಿ ವಿ ಜಿ ಅವರ ಜ್ಞಾಪಕ ಚಿತ್ರಶಾಲೆ – ೧
July 18, 2020 @ 6:00 pm - 7:30 pm IST

ಕಾರ್ಯಕ್ರಮ : ಡಿ ವಿ ಜಿ ಅವರ ಜ್ಞಾಪಕ ಚಿತ್ರಶಾಲೆ – ೧
ನಮ್ಮೊಡನೆ: ಸತ್ಯೇಶ್ ಬೆಳ್ಳೂರ್
ಸಮಯ: ಸಾಯಂಕಾಲ ೬ – ೭.೩೦ ಭಾರತೀಯ ಸಮಯ
ಮಧ್ಯಾಹ್ನ ೧.೩೦ – ೩.೦೦ ಯು ಕೆ ಸಮಯ
ಸಹಯೋಗ: ಯಾಜಿ ಪ್ರಕಾಶನ ಮತ್ತು ಮನೋಹರ ಗ್ರಂಥ ಮಾಲಾ
ಸಮಾಜದ ಒಳಿತನ್ನು ಬಯಸಿ ಅದಕ್ಕಾಗಿ ದುಡಿಯುವ ಸಜ್ಜನರು ಪ್ರತಿ ಕಾಲಮಾನಗಳಲ್ಲಿಯೂ ಬಂದು ಹೋಗಿದ್ದಾರೆ. ತಮ್ಮ ಜೀವಿತದ ಅವಧಿಯಲ್ಲಿ ತಮಗೆ ಪ್ರೇರಣಾದಾಯಕವೆನಿಸಿದ ವ್ಯಕ್ತಿಚಿತ್ರಣಗಳನ್ನು ಸನ್ಮಾನ್ಯ ಡಿವಿಜಿ ಅವರು ತಮ್ಮ ಜ್ಞಾಪಕ ಚಿತ್ರಶಾಲೆ ಎಂಬ ಎಂಟು ಸಂಪುಟಗಳ ಬೃಹತ್ ಗ್ರಂಥದಲ್ಲಿ ದಾಖಲಿಸಿದ್ದಾರೆ. ಇದನ್ನು ಪರಿಚಯಿಸುವ ಒಂದು ಪುಟ್ಟ ಪ್ರಯತ್ನವೇ ಈ ಉಪನ್ಯಾಸದ ಉದ್ದೇಶ.
ಡಿ ವಿ ಜಿ ಜ್ಞಾಪಕ ಚಿತ್ರಶಾಲೆ ೮ ಸಂಪುಟಗಳು
1.ಸಾಹಿತಿ ಸಜ್ಜನ ಸಾರ್ವಜನಿಕ
2.ಕಲೋಪಾಸಕರು
3.ಸಾಹಿತ್ಯೋಪಾಸಕರು
4.ಮೈಸೂರು ದಿವಾನರು
5.ವೈದಿಕ ಧರ್ಮಸಂಪ್ರದಾಯಸ್ಥರು
6.ಹಲವಾರು ಸಾರ್ವಜನಿಕರು
7.ಹೃದಯ ಸಂಪನ್ನರು
8.ಸಂಕೀರ್ಣ ಸ್ಮೃತಿಸಂಪುಟ
ಸತ್ಯೇಶ್ ಬೆಳ್ಳೂರ್ – ಇವರು ಹದಿನೈದು ಕನ್ನಡ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಕಾರ್ಪೊರೇಟ್ ಜಗತ್ತಿನಲ್ಲಿ ವಿವಿಧ ತರಬೇತಿ; ವೇದ ಮತ್ತು ಭಗವದ್ಗೀತೆ ಕುರಿತು ಉಪನ್ಯಾಸಗಳನ್ನು ಕೊಡುತ್ತಿದ್ದಾರೆ. ಜೊತೆಗೆ ಪ್ರಜಾವಾಣಿ ಮತ್ತು ಉದಯವಾಣಿಯಲ್ಲಿ ಕಳೆದ ಸುಮಾರು ೭ ವರುಷದಿಂದ ಅಂಕಣ ಬರೆದಿದ್ದಾರೆ.
Facebook Live: https://www.facebook.com/vividlipi/live
Youtube Live: https://www.youtube.com/vividlipi/live
Air meet: https://airmeet.com/e/71ca2610-c761-11ea-82c1-2981332e4733
Airmeet is new virtual meeting software that is best experienced in Laptop/Desktop. Video chat with the presenter using Laptop/Desktop using the feature “Raise your hand”. Users joining through mobile has to type the questions.
Use Guest Login if you don’t prefer to login through Email or Social media login.