
ಜಿ. ಬಿ. ಜೋಶಿ : ಅಪರೂಪದ ಸೃಜನಶೀಲ ಪ್ರಕಾಶಕ
July 29, 2020 @ 11:30 am - 1:00 pm IST

ಜಿ. ಬಿ. ಜೋಶಿ : ಅಪರೂಪದ ಸೃಜನಶೀಲ ಪ್ರಕಾಶಕ
ದಿನಾಂಕ: ೨೯ ಜುಲೈ ೨೦೨೦ ರಂದು (29 July 2020)
ಸಮಯ: ಮುಂಜಾನೆ ೧೧.೩೦ ಗಂಟೆಗೆ ಭಾರತೀಯ ಸಮಯ (11.30 AM IST)
ನಾಟಕವೇ ಆಗಅ ಪ್ರಕಾಶನವೇ ಆಗಲಿ ಜಿ.ಬಿ. ಅವರು ಅದಮ್ಯವಾದ ಸಂಕಲ್ಪ ಶಕ್ತಿಯ ಫಲ, ‘ಅನ್ಯಮಿಂದ್ರಂ ಕರಿಷ್ಯಾಮಿ’ ಎಂಬ ವಿಶ್ವಾಮಿತ್ರನ ಹಠ ಅವರದ್ದಾಗಿತ್ತು. ಹಟ ಅವರ ಬಾಹ್ಯ ವ್ಯಕ್ತಿತ್ವದ ಮುಖ್ಯ ಲಕ್ಷಣವಾಗಿತ್ತು, ಆದರೆ ಈ ವ್ಯಕ್ತಿತ್ವದ ಒಳಪದರುಗಳಲ್ಲಿ ಇನ್ನೊಂದು ಪ್ರತಿಭಾ ವ್ಯಕ್ತಿತ್ವ ಇತ್ತು. ಅದು ಅವರ ಕನಸುಗಳಲ್ಲಿ ವ್ಯಕ್ತವಾಗಿದೆ. ಬೇಂದ್ರೆಯವರನ್ನು ಹೊರತುಪಡಿಸಿದರೆ ಗೆಳೆಯರ ಗುಂಪಿನ ಯಾವ ಸದಸ್ಯನಿಗೂ ಇಂಥಾ ಕನಸುಗಳನ್ನು ಕಾಣುವ ಶಕ್ತಿ ಇರಲಿಲ್ಲ.
– ಕೀರ್ತಿನಾಥ ಕುರ್ತಕೋಟಿ
೨೯ ಜುಲೈ ೨೦೨೦ ಅವರ ೧೧೭ ನೆಯ ಜನ್ಮ ದಿನ, ಅಂದು ನಾವು ವಿವಿಡ್ಲಿಪಿಯ ನೇರ ಪ್ರಸಾರದಲ್ಲಿ ಅವರ ಚಿತ್ರಣ ತರುತ್ತಿದ್ದೇವೆ, ಅದರಲ್ಲಿ ಅವರನ್ನು ಹತ್ತಿರದಿಂದ ಕಂಡ ವಿವಿಧ ವ್ಯಕ್ತಿಗಳು ಅವರ ಬಗ್ಗೆ ಚರ್ಚಿಸಿದ್ದಾರೆ, ಸಾಮಾನ್ಯರಿಗೆ ಗೊತ್ತಿರುವ ಜೊತೆಗೆ ಗೊತ್ತಿರದ ವಿಷಯಗಳೂ ತುಂಬಾ ಇವೆ. ಅವರ ಬಹುಮುಖ ಪ್ರತಿಭೆ ಕೂಡ ನೀವಿಲ್ಲಿ ಕಾಣಬಹುದು.
೨೯ ಜುಲೈ ೨೦೨೦ ರಂದು ಭಾರತೀಯ ಸಮಯ 11.30 ಗಂಟೆಗೆ ಎಲ್ಲರೂ ನಮ್ಮೊಡನೆ ಸೇರಿಕೊಳ್ಳಿ, ಅವರ ಹುಟ್ಟು ಹಬ್ಬ ಆಚರಿಸೋಣ.
Facebook Live: https://www.facebook.com/vividlipi/live
Youtube Live: https://www.youtube.com/vividlipi/live