Need help? Call +91 9535015489

📖 Print books shipping available only in India. ✈ Flat rate shipping

Loading Events

« All Events

ಜಗದ್ವಂದ್ಯ ಭಾರತಂ – ಪ್ರಕ್ಷುಬ್ದ ಭಾರತದೊಲ್ಲೊಂದು ಸುತ್ತು

July 4, 2020 @ 6:00 pm - 7:30 pm IST

ಕಾರ್ಯಕ್ರಮದ ಸಮಯ:
ಭಾರತೀಯ ಸಮಯ: ಸಾಯಂಕಾಲ ೬ – ೭.೩೦ ರವರೆಗೆ
ಯು ಕೆ ಸಮಯ: ಮಧ್ಯಾಹ್ನ ೧.೩೦ – ೩.೦೦ ರವರೆಗೆ

ಒಂದೆಡೆ ಚೈನಾ, ಮತ್ತೊಂದಡೆ ಪಾಕಿಸ್ತಾನ ಹೀಗೆ ದೇಶದ ಗಡಿಗಳೆಲ್ಲ ಪ್ರಕ್ಷುಬ್ದ ಸ್ಥಿತಿ: ದೇಶದೊಳಗಡೆ ಮಹಾಮಾರಿ ಕರೋನ ತತ್ಪರಿಣಾಮವಾಗಿ ಖಾಲಿಯಾಗುತ್ತಿರುವ ನಗರಗಳು, ಹೆಚ್ಚುತ್ತಿರುವ ಹಸಿವು, ಎಲ್ಲಡೆ ಅಸುರಕ್ಷಿತತೆ, ಅತಂತ್ರತೆ, ಈ ಕಾರಣ ದೇಶದೊಳಗಡೆಯೂ ಪ್ರಕ್ಷುಬ್ಧತೆ : ಎಲ್ಲೆಲ್ಲಿ ? ಯಾರಯಾರು? ಏನೇನನ್ನು ಕಳೆದುಕೊಳ್ಳುತ್ತಿರುವರೋ ? ಪ್ರತೀ ಭಾರತೀಯನಿಗೂ ಈಗ ನಿಂತ ನೆಲದಲ್ಲಿ ನೆಮ್ಮದಿಯಿಲ್ಲ. ಹೋರಾಟ ದಾರಿಗೆ ಭರವಸೆ ಇಲ್ಲ: ಒಟ್ಟಾರೆ ಇದು ೭೩ ವರ್ಷಗಳ ಹಿಂದೆ ಭಾರತ ಸ್ವತಂತ್ರವಾಗುತ್ತಿದ್ದ ಸಂದರ್ಭವನ್ನು ನೆನಪಿಸುತ್ತಿದೆ. ಹೀಗೆ ತಲ್ಲಣಗೊಂಡ ಭಾರತದಲ್ಲಿ ಒಂದು ಸುತ್ತು ಬಾವುಟದೊಂದಿಗೆ !?

ರಾಗಂ, ಬೆಳಗಾವಿ ಜಿಲ್ಲೆಯ ತೆಲಸಂಗದಲ್ಲಿ ಜನನ , ಚಡಚಣದಲ್ಲಿ ಪ್ರಾಥಮಿಕದಿಂದ ಪದವಿಪೂರ್ವ , ಅವಾಪುರ ಮತ್ತು ಸೊಲ್ಲಾಪುರಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣ , ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಕೆ.ಎ.ಅಹ್ಯಾಸರನ್ನು ಕುರಿತು ಪಿಹೆಚ್.ಡಿ . 2017 ರಿಂದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿದ್ದು ಜೊತೆಜೊತೆಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಗುರುತರ ಜವಾಬ್ದಾರಿಗಳನ್ನೂ ನಿಭಾಯಿಸುತ್ತಿದ್ದಾರೆ , ಕನ್ನಡ , ಇಂಗ್ಲಿಷ್ ಹೀಗೆ ಎರಡೂ ಭಾಷೆಗಳಲ್ಲಿ ರಾಗ ಬರೆದ ಕೃತಿಗಳ ಸಂಖ್ಯೆ ಎಷತ್ತನ್ನು ಮೀರುತ್ತದೆ . ಕಾವ್ಯ , ಕತೆ , ನಾಟಕ , ಪ್ರಬಂಧ , ಅಂಕಣ , ಸಂಶೋಧನೆ , ಭಾಷಾ ಅಧ್ಯಯನ , ಭಾಷಾಂತರ , ಸಿನಿಮಾ ಹೀಗೆ ಹಂಗಿಲ್ಲದ , ಎಲ್ಲಿಲ್ಲದ ದಾರಿ ಕ್ರಮಿಸಿದ ರಾಗಂ “ ನಡೆದಷ್ಟು ದಾರಿ , ಪಡೆದಷ್ಟು ವರ ‘ ಎಂದುಕೊಂಡವರು , 2015 ರಲ್ಲ ‘ ವಿಶ್ವ ಚೇತನ ಬುದ್ಧ ಶಾಂತಿ ಪ್ರಶಸ್ತಿ’ಯನ್ನು ಪಡೆದ ರಾಗಂ ಅವರ ‘ ಗಾಂಧಿ ಅಂತಿಮ ದಿನಗಳು ‘ ಕೃತಿಯು ‘ ಕರ್ನಾಟಕ ರಾಜ್ಯ ಗಾಂಧಿ ಸ್ಮಾರಕ ನಿಧಿ ಪ್ರಶಸ್ತಿ’ಗೆ , ‘ ಗಾಂಧಿ : ಮುಗಿಯದ ಅಧ್ಯಾಯ ‘ ಡಿ.ಎಸ್ . ಕರ್ಕಿ ಕನ್ನಡ ದಿಪ ‘ ಪ್ರಶಸ್ತಿಗೆ , ‘ ಸಜನಾ ಸಾಹಿತ್ಯ ರತ್ನ ‘ ಪ್ರಶಸ್ತಿಗೆ ಹಾಗೂ ‘ ಆರೈಲ್ ಪತ್ರಿಕೆ ಪ್ರಶಸ್ತಿಗಳಿಗೆ ಭಾಜನವಾಗಿವೆ . ಇವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಕರ್ನಾಟಕ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು , 2013 ನೇ ಸಾಲಿನ ಶ್ರೀವಿಯ ನೀಡಿ ಗೌರವಿಸಿದೆ .

ಕಾರ್ಯಕ್ರಮ ವೀಕ್ಷಿಸಲು ಕೆಳಗಿನ ಕೊಂಡಿ ಬಳಿಸಿ:
Airmeet Live: https://airmeet.com/e/b5b3f7c0-bb36-11ea-8a01-ef57a0cbaaa2
Facebook Live: https://www.facebook.com/vividlipi/live
YouTube Live: https://www.youtube.com/vividlipi/live

 

Details

Date:
July 4, 2020
Time:
6:00 pm - 7:30 pm IST
Event Category:
Event Tags:
, ,

Organiser

Mooka Trust
Phone:
+91 9535015489
Email:
support@vividlipi.com