Need help? Call +91 9535015489

📖 Print books shipping available only in India. ✈ Flat rate shipping

Loading Events

« All Events

ಜೀವಿಸಿದರೆ ಸಾಕಾ? ವಿಕಸಿಸಬೇಕಾ?

July 12, 2020 @ 6:00 pm - 7:30 pm IST

ಪಾಲ್ಗೊಳ್ಳುವವರು: 
ಡಾ. ಉಷಾ ವಸ್ತಾರೆ. ನ್ಯೂರೋ ಸೈಂಟಿಸ್ಟ್, ಯೋಗಕ್ಷೇಮದ ಸಂಸ್ಥಾಪಕರು
ನಡೆಸಿಕೊಡುವವರು: 
ಸುಧಾ ಶರ್ಮಾ, ಚವತ್ತಿ , ಕವಯಿತ್ರಿ, ಪ್ರಾಫಿಟ್ ಪ್ಲಸ್ ಪತ್ರಿಕೆಯ ಸಂಪಾದಕಿ
ಸಹಯೋಗ: ಯಾಜಿ ಪ್ರಕಾಶನ ಮತ್ತು ಮನೋಹರ ಗ್ರಂಥ ಮಾಲಾ

Airmeet Link: https://airmeet.com/e/76b763d0-bca4-11ea-ae34-75fcd548b27e
Facebook Live: https://www.facebook.com/vividlipi/live
Youtube Live: https://www.youtube.com/vividlipi/live

ಉದ್ಯೋಗ, ಮನೆ, ಮಕ್ಕಳು ಒಂದು ಹಂತದ ಯಶಸ್ಸು ಇಷ್ಟೆಲ್ಲ ಸಿಕ್ಕನಂತರವೂ ಮನಸ್ಸಿನಲ್ಲಿ ಏನೋ ಅತೃಪ್ತಿ, ಹೇಳಿಕೊಳ್ಳದ ಖಾಲಿತನ ” ಲೈಫು ಇಷ್ಟೇನಾ” ಎಂದು ಅನ್ನಿಸುವುದೂ ಇದೆ. ಅಷ್ಟೇ ಏಕೆ ಎಲ್ಲ ಇದ್ದೂ ಸಂತೋಷದಿಂದ ಇದ್ದೀವಾ, ಯವಾಗಲೂ, ಉತ್ಸಾಹದ ಲವಲವಿಕೆಯ, ಉತ್ಕಟವೆನ್ನಿಸುವ ಹಾಗೆ ನಮ್ಮ ಬದುಕಿದೆಯಾ? ಸಾಹಿತ್ಯ, ಕಲೆ, ಸಂಗೀತವೂ ಸೇರಿದಂತೆ ಎಲ್ಲ ಸೃಜನಶೀಲಕೃತಿಗಳೂ ಬದುಕನ್ನು ವಿಕಸನದೆಡೆಗೆ ನಡೆಸುವುದಕ್ಕೆ ನೆರವಾಗುವ ಸಂಗತಿಗಳು. ಕೇವಲ ಜೀವಿಸಿದರೆ ಸಾಕಾ? ವಿಕಸಿಸಬೇಕಾ? ಎಲ್ಲಕ್ಕಿಂತ ಮುಖ್ಯವಾಗಿ ವಿಕಸನ ನಮ್ಮದೇ ಆಯ್ಕೆ. ಹಾಗಾದರೆ ನಾವೇಕೆ ವಿಕಸಿಸಬೇಕು? ಸಾಹಿತ್ಯ, ಆಧ್ಯಾತ್ಮ, ವಿಜ್ಞಾನದ ಮೂಲಕ ವಿಕಸನದ ಅನಂತ ಸಾಧ್ಯತೆಗಳನ್ನು, ನಮ್ಮೆಲ್ಲರ ಜೀವನಕ್ಕಿರುವ ಬಹುದೊಡ್ಡ ಘನತೆಯನ್ನು ಎಲ್ಲರೂ ಒಟ್ಟಾಗಿ ಅರಿಯುವ ಕಾರ್ಯಕ್ರಮ ” ಜೀವಿಸಿದರೆ
ಸಾಕಾ ? ವಿಕಸಿಸಬೇಕಾ? ”

ಕಿರು ವಿವರ
ಡಾ. ಉಷಾ ವಸ್ತಾರೆ
ನ್ಯೂರೋ ಸೈಂಟಿಸ್ಟ್, ಮೂವತ್ತು ವರ್ಷಗಳ ಕಾಲ ಅಮೇರಿಕದಲ್ಲಿದ್ದರು. ಅಲ್ಲಿನ ಟೆಂಪಲ್ ವಿಶ್ವವಿದ್ಯಾಲಯದಲ್ಲಿ ಫ್ಯಾಕಲ್ಟಿ ಆಗಿದ್ದರು. Center for Parkinson’s Disease and Movement Disroder ಅಲ್ಲಿ ಪಾರ್ಕಿನ್ ಸನ್ ಕಾಯಿಲೆ ಬಗೆಗೆ ಕ್ಲಿನಿಕಲ್ ರಿಸರ್ಚ್, ಇವರ ಸಂಶೋಧನೆ ಮುಖ್ಯವಾಗಿ ಸ್ಟ್ರೋಕ್ ಮತ್ತು ಪಾರ್ಕಿನ್‍ಸನ್ ಕಾಯಿಲೆ ಬಗೆಗೆ ವಿಶೇಷ ಬೆಳಕು ಚೆಲ್ಲುತ್ತದೆ. ಎಪ್ಪತ್ತಕ್ಕೂ ಹೆಚ್ಚು ಸಂಶೋಧನಾ ಪ್ರಬಂಧ ಮಂಡಿಸಿದ್ದಾರೆ. ಇವರ ಪಿ.ಎಚ್.ಡಿ ಪ್ರಬಂಧ ರಾಷ್ಟ್ರಪತಿಗಳ ವಿಶೇಷ ಪುರಸ್ಕಾರಕ್ಕೆ ನಾಮನಿರ್ದೆಶನ ಪಡೆದಿತ್ತು. ಹನ್ನೆರಡು ವರ್ಷಗಳ ಹಿಂದೆ ಭಾರತಕ್ಕೆ ಬಂದು ಯೋಗಕ್ಷೇಮ ಸಂಸ್ಥೆಯನ್ನು ಡಾ. ಅಖಿಲಮಾಲಿನಿ ವಸ್ತಾರೆ ಅವರ ಜೊತೆ ಸೇರಿ ಸ್ಥಾಪಿಸಿದರು. ನಾವು ನೋಡುವ ರೀತಿಯನ್ನು ಬದಲಿಸಿಕೊಂಡಾಗ ನಾವು ನೋಡುವುದೇ
ಬದಲಾಗುತ್ತದೆ. ಹಾಗಾಗಿ ನಾವು ನೋಡುವ ರೀತಿ ಅಂದರೆ ನಮ್ಮ ದೃಷ್ಟಿಕೋನ ಬಹಳ ಮುಖ್ಯ. ಈ ದೃಷ್ಟಿಕೋನದ ಬದಲಾವಣೆ ಆದಾಗ ನಮ್ಮ ಬದುಕೇ ಬದಲಾಗುತ್ತದೆ. ಇಂತಹ ಹಲವಾರು ಬದುಕು ಬದಲಿಸುವ ಮಾತು, ಕಾರ್ಯಾಗಾರಗಳ ಮೂಲಕ ಇವರು ಜನಪ್ರೀಯರು. ದೇಶ ವಿದೇಶಗಳಲ್ಲೂ, ಬೇರೆ ಬೇರೆ ರಾಜ್ಯಗಳಲ್ಲೂ ವೃತ್ತಿಪರರು, ವಿದ್ಯಾರ್ಥಿಗಳು, ಗೃಹಿಣಿಯರು, ಹಿರಿಯರನ್ನು ಆರೈಕೆ ಮಾಡುತ್ತಿರುವವರು ಹೀಗೆ ಎಲ್ಲರಿಗೂ ಸಾವಿರಾರು ಕಾರ್ಯಾಗಾರಗಳನ್ನು ನಡೆಸಿಕೊಟ್ಟಿದ್ದಾರೆ. ಪಾಸಿಟೀವ್ ಸೈಕಾಲಜಿಗೆ ಸಂಬಂಧಿಸಿದ ಕನ್ನಡದ ಮೊಟ್ಟಮೊದಲ ಪತ್ರಿಕೆ ಪ್ರಾಫಿಟ್ ಪ್ಲಸ್ ಮೂಲಕ ಇವರು ಮನಸ್ಸಿಗೆ ಸಂಬಂಧಿಸಿದ ಇತ್ತೀಚಿನ ಸಂಶೋಧನೆಗಳನ್ನು, ಮನಸ್ಸನ್ನು ಪಳಗಿಸುವ ಅಗತ್ಯ ಮತ್ತು ಹೇಗೆ ಪಳಗಿಸಬಹುದು ಎನ್ನುವುದನ್ನು ಹೇಳುತ ಬಂದಿದ್ದಾರೆ. ಭರವಸೆ ಎನ್ನುವ ಇವರೊಂದಿಗಿನ ಪ್ರಶ್ನೋತ್ತರದ ಅಂಕಣ ಬಹಳ ಮೆಚ್ಚುಗೆ ಗಳಿಸಿದೆ. ಆಕಾಶವಾಣಿ, ದೂರದರ್ಶನಗಳಲ್ಲಿ ಇವರ ಅನೇಕ ಕಾರ್ಯಕ್ರಮಗಳು ಪ್ರಸಾರವಾಗಿವೆ.
ವಿವಿಡ್‍ಲಿಪಿಯಲ್ಲಿ ಪ್ರಾಫಿಟ್ ಪ್ಲಸ್ ನೋಡಬಹುದು. ಡಾ. ಉಷಾ ವಸ್ತಾರೆಯವರು ಐಐಟಿ ಮದ್ರಾಸ್ ಅಲ್ಲಿ ಮಾಡಿದ ಭಾಷಣದ ಲಿಂಕ್ ಕೂಡ ಇಲ್ಲಿ ಕೊಡಲಾಗಿದೆ.

ಸುಧಾ ಶರ್ಮಾ ಚವತ್ತಿ
ಮುದ್ರಣ ಮತ್ತು ದೃಶ್ಯ ಮಾಧ್ಯಮಗಳೆರಡರಲ್ಲೂ ಸಮೃದ್ಧ ಅನುಭವ ಇರುವ ಇವರು ಕಳೆದ ಎರಡು ವರ್ಷಗಳ ಹಿಂದೆ ಕನ್ನಡದಲ್ಲಿಯೇ ವಿಶಿಷ್ಟವಾದ, ಸಕಾರಾತ್ಮಕ ಚಿಂತನೆಯ, ಭರವಸೆಯ ಬದುಕಿಗಾಗಿಯೇ ರೂಪತಳೆದ ” ಪ್ರಾಫಿಟ್ ಪ್ಲಸ್ ” ಪತ್ರಿಕೆ ಆರಂಭಿಸಿದರು. ಹೆಸರು ನೋಡಿದರೆ ಇದು ಉದ್ಯಮಕ್ಕೆ ಸಂಬಂಧಿಸಿದ ಪತ್ರಿಕೆ ಅನ್ನಿಸಬಹುದು, ಆದರೆ ಸಂತೋಷವೇ ಸಂಪತ್ತು ಎಂದು ನಂಬಿರುವ ಪತ್ರಿಕೆ. ಪ್ರಾಫಿಟ್ ಪ್ಲಸ್ ಕೇವಲ ಪತ್ರಿಕೆ ಅಲ್ಲ ಸದುದ್ದೇಶದ ವೇದಿಕೆ. “ಪ್ರೆಸ್ ರೀಡರ್” ಆ್ಯಪ್ ಅಲ್ಲಿ ಇರುವ ಕನ್ನಡದ ಮೊದಲ ಮಾಸಪತ್ರಿಕೆ ಇದು. ವಿವಿಡ ಲಿಪಿಯಲ್ಲಿಯೂ ಪ್ರಾಫಿಟ್ ಪ್ಲಸ್‍ಇದೆ.
ಕವಯಿತ್ರಿ, ಲೇಖಕಿ ಸುಧಾ ಶರ್ಮಾ ಅವರಿಗೆ ಗೌರೀಶ ಕಾಯ್ಕಿಣಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಬೇಂದ್ರೆ ಅಡಿಗ ಕಾವ್ಯ ಪ್ರಶಸ್ತಿ, ಹವ್ಯಕಶ್ರೀ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಸಂದಿವೆ. ಯೋಗಕ್ಷೇಮದ ಪ್ಯಾಕಲ್ಟಿಯಾಗಿಯೂ ಇವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

 

Organiser

Mooka Trust
Phone:
+91 9535015489
Email:
support@vividlipi.com